More

    ಒಬ್ಬ 14 ಫ್ಲ್ಯಾಟ್​ಗಳ ಒಡೆಯ, ಇನ್ನೊಬ್ಬ 15 ಸೈಟ್​ಗಳ ಮಾಲೀಕ: ಇಲ್ಲಿದೆ ಭ್ರಷ್ಟರ ಆಸ್ತಿ ವಿವರ!

    ಬೆಂಗಳೂರು: ರಾಜ್ಯದ ಬೆಂಗಳೂರು ನಗರ, ಕೋಲಾರ, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ 8 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಸೋಮವಾರ ಲೋಕಾಯುಕ್ತ ಪೊಲೀಸರು ನಡೆಸಿದ್ದ ದಾಳಿ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

    ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿರುವ ಲೋಕಾಯುಕ್ತ ಪೊಲೀಸರು, ಆರೋಪಿತ ಅಧಿಕಾರಿಗಳ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ದಾಖಲೆ ಪತ್ರಗಳು, ಚಿನ್ನಾಭರಣ, ನಗದು ಜಪ್ತಿ ಮಾಡಿ ಎಫ್​ಐಆರ್ ದಾಖಲಿಸಿ ತನಿಖೆ ಮುಂದುವರಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಳ್ಳಾರಿ ಜೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಹುಸೇನ್ ಸಾಬ್‌ಗೆ ಸೇರಿದ 6 ಸ್ಥಳಗಳಲ್ಲಿ ಶೋಧ ನಡೆದಿತ್ತು. ರಾಘವೇಂದ್ರ ಕಾಲನಿಯಲ್ಲಿ 1 ಮನೆ, ಹೊಸಪೇಟೆಯ ವಿದ್ಯಾನಗರ ಲೇಔಟ್‌ನಲ್ಲಿ 1 ಮನೆ, 1 ಖಾಲಿ ಸೈಟ್, ಸಿದಿಗಿನಮೂಲ ಗ್ರಾಮದಲ್ಲಿ 1 ಮನೆ, ಹಡಗಲಿ ತಾಲೂಕಿನಲ್ಲಿ 6 ಎಕರೆ 20 ಗುಂಟೆ ಕೃಷಿ ಜಮೀನು, 4 ಕಾರು, 2 ಬೈಕ್, 1.487 ಕೆಜಿ ಚಿನ್ನಾಭರಣ, 680 ಗ್ರಾಂ ಬೆಳ್ಳಿ, 23.69 ಲಕ್ಷ ರೂ. ನಗದು ಪತ್ತೆಯಾಗಿದೆ.

    ಇದನ್ನೂ ಓದಿ: ಬಿಜೆಪಿ ಟಿಕೆಟ್ ಮಿಸ್, ಕೇಸರಿ v/s ಕೆಂಪು: ಪಕ್ಷೇತರ ಸ್ಪರ್ಧೆಗೆ ನುಗ್ಗಿದ ‘ಗೂಳಿ’ಹಟ್ಟಿ ಶೇಖರ್

    14 ಫ್ಲ್ಯಾಟ್​​ಗಳ ಒಡೆಯ

    ಬಿಬಿಎಂಪಿ ಯಲಹಂಕ ವಲಯ ನಗರ ಯೋಜನೆ ಸಹಾಯಕ ನಿರ್ದೇಶಕ ಕೆ.ಎಲ್. ಗಂಗಾಧರಯ್ಯಗೆ ಸೇರಿ 7 ಸ್ಥಳಗಳ ಮೇಲೆ ದಾಳಿ ನಡೆದಿದೆ. 14 ಫ್ಲ್ಯಾಟ್​​ಗಳು, ನೆಲಮಂಗಲದಲ್ಲಿ 5 ಎಕರೆ ಕೃಷಿ ಜಮೀನು, 73 ಲಕ್ಷ ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿ, 1.47 ಕೋಟಿ ರೂ. ನಗದು, 10298 ಅಮೆರಿಕ ಡಾಲರ್, 1180 ದುಬೈ ದೀರಂ, 35 ಈಜಿಪ್ಟ್ ಕರೆನ್ಸಿ ಮತ್ತು ದಾಖಲೆ ಪತ್ರಗಳು ಮತ್ತು 50 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಜಪ್ತಿ ಮಾಡಲಾಗಿದೆ.

    ಇದನ್ನೂ ಓದಿ: ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್​.ಡಿ.ದೇವೇಗೌಡ

    15 ಖಾಲಿ ಸೈಟ್‌ಗಳ ಮಾಲೀಕ

    ಬೀದರ್ ಬಸವ ಕಲ್ಯಾಣ ತಾಲೂಕು ನಾಡ ಕಚೇರಿ ಉಪ ತಹಸೀಲ್ದಾರ್ ವಿಜಯಕುಮಾರಸ್ವಾಮಿಯ 3 ಸ್ಥಳಗಳಲ್ಲಿ ತಪಾಸಣೆ ನಡೆಸಿದಾಗ ಬೀದರ್‌ ನಗರದಲ್ಲಿ 1 ಮನೆ, ಬಸವಕಲ್ಯಾಣದಲ್ಲಿ 15 ಖಾಲಿ ಸೈಟ್, 1 ಸಾಯಿ ಸರ್ವಿಸ್ ಆಟೋ ಗ್ಯಾರೇಜ್, 2 ಕಾರು, 1 ಬೈಕ್, ಚಿನ್ನಾಭರಣ ಪತ್ತೆಯಾಗಿವೆ.

    45 ಲಕ್ಷ ನಗದು ಪತ್ತೆ

    ಬೀದರ್ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಮೇಡಗೆ ಸೇರಿದ 3 ಕಡೆ ಶೋಧ ನಡೆಸಿದಾಗ ಬೀದರ್‌ ನಗರದಲ್ಲಿ 1 ಸೈಟ್, 3 ಖಾಲಿ ಸೈಟ್‌ಗಳು, ಆನಂದನಗರದಲ್ಲಿ 1 ಮನೆ, 3 ಕಾರು, 3 ಬೈಕ್, 11.34 ಲಕ್ಷ ರೂ. ನಗದು, 1892 ಗ್ರಾಂ ಚಿನ್ನ, 6 ಕೆಜಿ 628 ಗ್ರಾಂ ಬೆಳ್ಳಿ, 45 ಲಕ್ಷ ರೂ. ಎಲ್‌ಐಸಿ ಬಾಂಡ್ ಇರುವುದು ಬೆಳಕಿಗೆ ಬಂದಿವೆ.

    ಇದನ್ನೂ ಓದಿ: ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ: ಕಾಂಗ್ರೆಸ್ ಸಮಾವೇಶದಲ್ಲಿ ಜಗದೀಶ ಶೆಟ್ಟರ್


    25 ಎಕರೆ ತೋಟ

    ಬಿಬಿಎಂಪಿ ಬೊಮ್ಮನಹಳ್ಳಿ ರಾಜ ಕಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಟಿ. ಹನುಮಂತಯ್ಯ ಬಳಿ ಹಿರಿಯೂ ತಾಲೂಕಿನ ಬೋಚಾಪುರದಲ್ಲಿ 25 ಎಕರೆ 23 ಗುಂಟೆ ಅಡಿಕೆ, ಬಾಳೆ ತೋಟ, 1 ತೋಟದ ಮನೆ, 2 ಪೌಲ್ಟ್ರಿ ಫಾರ್ಮ್, ಹಿರಿಯೂರು ನಗರದಲ್ಲಿ 2 ಸೈಟ್‌ಗಳು, ಬೆಂಗಳೂರಿನಲ್ಲಿ 1 ವಾಸದ ಮನೆ, 1 ಕಾರು, 1 ಬೈಕ್, ಚಿನ್ನಾಭರಣ ಅಪಾರ ಪ್ರಮಾಣದ ಸ್ಥಿರಾಸ್ತಿಗಳ ಸಂಬಂಧ ದಾಖಲೆ ಪತ್ರಗಳು ಪತ್ತೆಯಾಗಿವೆ.

    ಸರ್ವಿಸ್ ಸ್ಟೇಷನ್‌, ವಾಣಿಜ್ಯ ಸಂಕೀರ್ಣ

    ನಿವೃತ್ತ ಡಿಸಿಎಫ್ ಐ.ಎಂ. ನಾಗರಾಜುಗೆ ಸೇರಿದ 4 ಸ್ಥಳಗಳಲ್ಲಿ ಶೋಧ ನಡೆಸಿದಾಗ ಹೊನ್ನಾಳಿ ಪಟ್ಟಣದಲ್ಲಿ 1 ಮನೆ, ಶಿವಮೊಗ್ಗನಗರದಲ್ಲಿ 1 ಮನೆ, ಮಳಿಗೆ, 4 ವಾಣಿಜ್ಯ ಸಂಕೀರ್ಣಗಳು, ಕಗ್ಗಲಿಪುರದಲ್ಲಿ 1 ಫ್ಲ್ಯಾಟ್​, ಶಿವಮೊಗ್ಗದ ಅನುಪಿನಕಟ್ಟೆ ಗ್ರಾಮದಲ್ಲಿ 1 ತೋಟದ ಮನೆ, 10 ಎಕರೆ ಅಡಿಕೆ ತೋಟ, ಸಾಗರ ರಸ್ತೆಯಲ್ಲಿ 1 ದುರ್ಗಾಂಭ ಸರ್ವಿಸ್ ಸ್ಟೇಷನ್, ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿ 1 ಶ್ರೀದೇವಿ ಸರ್ವಿಸ್ ಸ್ಟೇಷನ್ , ಶಿವಮೊಗ್ಗನಗರ ಅಟಲ್ ಬಿಗಾರಿ ವಾಜಪೇಟೆ ಲೇಔಟ್‌ನಲ್ಲಿ 2 ಸೈಟ್, ದೇವಕಾಶಿ ಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ 1 ಫ್ಲ್ಯಾಟ್, 3 ಫ್ಲ್ಯಾಟ್, ಕಸಬಾ ಹೋಬಳಿ ಶ್ರೀರಾಂಪುರ ಗ್ರಾಮದಲ್ಲಿ 2 ಸೈಟ್, 4 ಕಾರು, 1 ಬೈಕ್ ಮತ್ತು 16 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ಲಭ್ಯವಾಗಿವೆ.

    ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ

    ರಿಯಲ್ ಎಸ್ಟೇಟ್ ಉದ್ಯಮ: ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ತಹಸೀಲ್ದಾರ್ ಎನ್.ಜೆ. ನಾಗರಾಜು ಬಳಿ ಶಿಕಾರಿಪುರ ನಗರದ ಚನ್ನಕೇಶವ ನಗರದಲ್ಲಿ 1 ಮನೆ, ನಿಂಬಾಪುರ ಗ್ರಾಮದಲ್ಲಿ 1 ಮನೆ, ಕೃಷಿ ಜಮೀನು, 244 ಗ್ರಾಂ ಚಿನ್ನಾಭರಣ, 533 ಗ್ರಾಂ ಬೆಳ್ಳಿ, 1 ಕಾರು, 1 ಬೈಕ್ ಮತ್ತು ಸ್ಥಿರಾಸ್ತಿ ದಾಖಲೆ ಪತ್ರಗಳು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹಣ ಹೂಡಿಕೆ ಮಾಡಿರುವ ಪತ್ರಗಳು ಪತ್ತೆಯಾಗಿವೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    4 ಪೌಲ್ಟ್ರಿ ಶೆಡ್‌ಗಳ ನಿರ್ವಹಣೆ: ಕೋಲಾರದ ಬಾಗೇಪಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಇ.ಒ. ವೆಂಕಟೇಶಪ್ಪ, ಬಳಿ 14 ಎಕರೆ ಕೃಷಿ ಜಮೀನು, ಬಂಗಾರಪೇಟೆ ನಗರದಲ್ಲಿ 1 ಸೈಟ್, 1 ಮನೆ, ತಿಪ್ಪದೊಡ್ಡಹಳ್ಳಿಯಲ್ಲಿ 1 ಮನೆ, ಬಂಗಾರಪೇಟೆಯ ಎಸ್‌ಎನ್ ಸಿಟಿಯಲ್ಲಿ ನಿರ್ಮಾಣ ಹಂತದ 1 ಮನೆ, 1 ಹಾರ್ಡ್‌ವೇರ್ ಶಾಪ್, ಗೋದಾಮು, 4 ಪೌಲ್ಟ್ರಿ ಶೆಡ್ಗಳು, 550 ಗ್ರಾಂ ಚಿನ್ನಾಭರಣ, 3 ಕೆಜಿ 500 ಗ್ರಾಂ ಬೆಳ್ಳಿ, 2 ಕಾರು, 1 ಟ್ರ್ಯಾಕ್ಟರ್, 4 ಬೈಕ್ ಪತ್ತೆಯಾಗಿವೆ. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts