

ಬೆಂಗಳೂರು: ನಕಲಿ ಖಾತೆ ರಾಜಧಾನಿ ಬೆಂಗಳೂರಿನ ಪೊಲೀಸರನ್ನೂ ಕಾಡಿದ್ದು, ಫೇಕ್ ಅಕೌಂಟ್ನಿಂದ ಮಾಡಿದ್ದ ಟ್ವೀಟ್ ಕೂಡ ವೈರಲ್ ಆಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸರ ಅಧಿಕೃತ ಖಾತೆಯಿಂದ ಸ್ಪಷ್ಟನೆ ಕೂಡ ನೀಡಲಾಗಿದೆ.
ಕಿಡಿಗೇಡಿಗಳು ಬೆಂಗಳೂರು ನಗರ ಪೊಲೀಸರ ಹೆಸರಿನಲ್ಲಿ ಟ್ವಿಟರ್ ನಕಲಿ ಖಾತೆ ತೆರೆದು ಆರ್‌ಸಿಬಿ ತಂಡದ ಕ್ಯಾಪ್ಟನ್ ಕೊಹ್ಲಿ ಪರ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ನಗರ ಪೊಲೀಸರು ಆ ಟ್ವೀಟ್ ಮಾತ್ರವಲ್ಲ, ಖಾತೆಯೇ ನಕಲಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೊಹ್ಲಿಯನ್ನು ಅಣಕಿಸುವ ರೀತಿಯಲ್ಲಿ ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದರು ಎನ್ನಲಾಗಿತ್ತು. ಇದಕ್ಕೆ ಪ್ರತಿಯಾಗಿ ನಗರ ಪೊಲೀಸರು ಮುಂಬೈ ಟೀಮ್‌ನ ರೋಷಿತ್ ಶರ್ಮ ಅವರಿಗೆ ಟಾಂಗ್ ಕೊಟ್ಟಿದ್ದ ರೀತಿಯಲ್ಲಿದ್ದ ನಕಲಿ ಟ್ವೀಟ್ ಮಾಡಿ ವೈರಲ್ ಮಾಡಿದ್ದರು. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಬೆಂಗಳೂರು ನಗರ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅದು ನಕಲಿ ಟ್ವೀಟ್ ಎಂದು ಸ್ಪಷ್ಟನೆ ನೀಡಿದ್ದಾರೆ.