More

    ಶರಣರ ವಚನಗಳು ಬದುಕಿನ ದಿವ್ಯ ಸೂತ್ರ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಶರಣರು ಜಗತ್ತಿನಲ್ಲಿ ನಡೆಯುತ್ತಿದ್ದ ಶೋಷಣೆ ಧಿಕ್ಕರಿಸಿ ಸಮಾಜೋದ್ಧಾರಕ ಕಾರ್ಯ ಮಾಡುವ ಮೂಲಕ ಮಾನವೀಯ ಧರ್ಮ ಸ್ಥಾಪನೆ ಮಾಡಿದ್ದಾರೆ. ಧರ್ಮ ಎಂದಿಗೂ ಶೋಷಣೆ ಮಾಡುವುದಿಲ್ಲ. ಶೋಷಣೆ ಮಾಡುವ ಧರ್ಮ ಧರ್ಮವೇ ಅಲ್ಲ ಎಂದು ಬಸವ ಧರ್ಮ ಪೀಠದ ಅಧ್ಯೆ ಡಾ.ಮಾತೆ ಗಂಗಾದೇವಿ ಅಭಿಪ್ರಾಯಪಟ್ಟರು.
    ನಗರದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮದಲ್ಲಿ ಭಾನುವಾರ ಏರ್ಪಡಿಸಿದ್ದ ಅಕ್ಕಮಹಾದೇವಿ ಮಠದ ವಾಷಿರ್ಕೋತ್ಸವ ಹಾಗೂ ಮಾತೆ ಜ್ಞಾನೇಶ್ವರಿ ಅವರ ಪೀಠಾರೋಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
    ನಕಾರಾತ್ಮಕ ಚಿಂತೆಯ ಚಿತೆಯಿಂದ ದಹಿಸಿ ಹೋಗುತ್ತಿರುವ ಜೀವಕ್ಕೆ ಸಕಾರಾತ್ಮಕ ಸತ್ಯ ಚಿಂತನೆಯಿಂದ ಚೈತನ್ಯದ ಚಿಲುಮೆಯಾಗಿಸುವ ಬಸವಾದಿ ಶರಣರ ವಚನಗಳು ಸುಖ, ಶಾಂತಿ, ನೆಮ್ಮದಿಯ ಬದುಕಿನ ದಿವ್ಯ ಸೂತ್ರಗಳಾಗಿವೆ. ವಚನ ಸಾಹಿತ್ಯದಲ್ಲಿ ಶರಣ ದರ್ಶನವಿದೆ. ಜೀವನಕ್ಕೊಂದು ದಾರಿ, ಸದ್ಭಾವದ ಸೌರಭ, ಪರಿರ್ಪೂಣ ಜೀವನದ ದರ್ಶನವಿದೆ. ಶರಣರ ಒಂದೊಂದು ವಚನಗಳು ಭಾವ ವಿಕಾಸದತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸುತ್ತದೆ. ಇವುಗಳನ್ನು ಅಳವಡಿಸಿಕೊಂಡ ಮಾನವ ಮೊದಲ ಇದ್ದ ಹಾಗೆ ಇರಲಾರರು. ಖಂಡಿತವಾಗಿ ಪರಿವತಿರ್ವಾಗುತ್ತಾರೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಶ್ರೀ ಚನ್ನಬಸವಾನಂದ ಸ್ವಾಮೀಜಿ ಶಿವಶರಣರ ಕಾಲಜ್ಞಾನ ವಚನಗಳ ಕುರಿತು ಮಾತನಾಡಿದರು. ಮಾತೆ ದಾನೇಶ್ವರಿ, ಮಾತೆ ಕಸ್ತೂರಿ, ಶ್ರೀ ಬಸವಯೋಗಿ ಸ್ವಾಮೀಜಿ, ಬಸವರತ್ನ ಮಾತೆ, ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ವಿಜಯಾಂಬಿಕೆ ಮಾತೆ ಸಮ್ಮುಖ ವಹಿಸಿದ್ದರು. ನಾಡಿನ ವಿವಿಧ ಮಠಾಧೀಶರ, ಮಾತಾಜಿಯವರ ಸಮ್ಮುಖದಲ್ಲಿ ಮಾತೆ ಜ್ಞಾನೇಶ್ವರಿ ಅವರ ಪೀಠಾರೋಹಣ ನೆರವೇರಿತು.
    ಲತಾ ಮುಳ್ಳೂರ, ಶಾಂತಾದೇವಿ ಬಿರಾದಾರ, ಮಲ್ಲೇಶಪ್ಪ ಕುಸುಗಲ್​, ಮಲ್ಲನಗೌಡ ಪಾಟೀಲ, ಧೀರಜಕುಮಾರ, ಶಾಂತಾ ಪಾಟೀಲ, ಗಂಗಮ್ಮ ಯಾದವಾಡ, ವಿದ್ಯಾ ಪ್ರತಾಪ, ಸುಜಾತಾ ಯರಗಟ್ಟಿ, ವೆಂಕಮ್ಮ ಮಡಿವಾಳರ, ಜಯಶ್ರೀ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts