blank

4 ವರ್ಷ ಕಳೆದರೂ ಕಳವಾದ ಚಿನ್ನದ ಸರ ಪತ್ತೆ ಮಾಡಲಾಗದೆ ಹೊಸ ಸರ ಕೊಡಿಸಿದ ಪೊಲೀಸರು!; ಆಗಿದ್ದೇನು?

blank

ಕೊಚ್ಚಿ: ಚಿನ್ನಾಭರಣ ಕಳವಾಗುವುದು, ಬಳಿಕ ಅದನ್ನು ಪತ್ತೆ ಮಾಡುವುದು, ನಂತರ ವಾರಸುದಾರರಿಗೆ ಹಸ್ತಾಂತರಿಸುವುದು ಪೊಲೀಸ್ ಠಾಣೆಗಳಲ್ಲಿ ನಡೆಯುವ ಸರ್ವೇಸಾಮಾನ್ಯ ಪ್ರಕ್ರಿಯೆ. ಆದರೆ ಇಲ್ಲೊಂದು ಕಡೆ ಕಳವಾದ ಚಿನ್ನದ ಸರ ಪತ್ತೆ ಹಚ್ಚಲಾಗದ ಪೊಲೀಸರು ಬಳಿಕ ಹೊಸ ಸರ ಖರೀದಿಸಿ ಕೊಟ್ಟ ಅಪರೂಪದ ಪ್ರಸಂಗವೊಂದು ನಡೆದಿದೆ.

ಕೇರಳದ ಒಟ್ಟಪ್ಪಲಂ ಪೊಲೀಸ್ ಠಾಣೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಠಾಣೆಗೆ 2019ರ ಫೆಬ್ರವರಿಯಲ್ಲಿ ಪಝಂಬಲಕ್ಕೋಡ್ ನಿವಾಸಿ ಹಿರಿಯ ಮಹಿಳೆಯೊಬ್ಬರು ತನ್ನ 1.5 ಗ್ರಾಂ ಚಿನ್ನದ ಸರ ಒಟ್ಟಪ್ಪಲಂ ತಾಲೂಕು ಆಸ್ಪತ್ರೆಯಲ್ಲಿ ಕಳವಾಗಿದೆ ಎಂದು ದೂರು ನೀಡಿದ್ದರು.

ಎಕ್ಸ್​ರೇ ತೆಗೆಯುವಾಗ ಸರ ತೆಗೆದಿಡಲು ಹೇಳಿದ್ದರು. ಹೀಗಾಗಿ ಸರ ಪರ್ಸ್​ನಲ್ಲಿಟ್ಟು ಒಂದು ಕಡೆ ಇರಿಸಿದ್ದೆ. ಆದರೆ ಎಕ್ಸ್​ರೇ ತೆಗೆಸಿ ಬರುವಷ್ಟರಲ್ಲಿ ಪರ್ಸ್ ಕಾಣೆಯಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು. ಇದು ತನ್ನ ಮದುವೆ ಸಂದರ್ಭದಲ್ಲಿ ಪತಿ ಉಡುಗೊರೆಯಾಗಿ ಕೊಟ್ಟಿದ್ದ ಸರ ಎಂದು ಮಹಿಳೆ ಹೇಳಿದ್ದರು.

ಇದನ್ನೂ ಓದಿ: ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

ಮಹಿಳೆ ನೀಡಿದ ದೂರಿನ ಮೇರೆಗೆ ಎಕ್ಸ್​ರೇ ಕೇಂದ್ರಕ್ಕೆ ಹೋಗಿ ಪರಿಶೀಲನೆ ನಡೆಸಿ ವಿಚಾರಿಸಿದ ಪೊಲೀಸರಿಗೆ ಯಾವ ಸುಳಿವೂ ಸಿಕ್ಕಿರಲಿಲ್ಲ. ಅಲ್ಲದೆ ಆ ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲದಿರುವುದು ಕೂಡ ಹಿನ್ನಡೆಯಾಗಿತ್ತು. ಅದಾಗ್ಯೂ ಮಹಿಳೆ ಆಗಾಗ ಠಾಣೆಗೆ ಬಂದು ಸರ ಪತ್ತೆಯಾಯಿತಾ ಎಂದು ವಿಚಾರಿಸುತ್ತಿದ್ದರು.

ನಂತರ 2020ರ ಸೆಪ್ಟೆಂಬರ್​ನಲ್ಲಿ ಎಡ್ತರ ನಿವಾಸಿ ಗೋವಿಂದಪ್ರಸಾದ್ ಎಂಬ ಎಸ್​ಐ ಒಟ್ಟಪ್ಪಲಂ ಠಾಣೆಗೆ ವರ್ಗವಾಗಿ ಬಂದಿದ್ದು, ಈ ಮಹಿಳೆಯ ಪ್ರಕರಣದ ತನಿಖೆ ಅವರ ಕೈಗೆ ತಲುಪಿತ್ತು. ಅವರು ಕೂಡ ಸಾಕಷ್ಟು ಪ್ರಯತ್ನ ಮಾಡಿದರೂ ಸರ ಪತ್ತೆ ಆಗಿರಲಿಲ್ಲ.

ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

ಮಹಿಳೆ ಸರ ಇಟ್ಟಿದ್ದ ಪರ್ಸ್ ಎಲ್ಲಿರಿಸಿದ್ದೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಅಲ್ಲದೆ ಅದು ಕಳವಾಗಿದೆ ಎನ್ನಲಿಕ್ಕೂ ಸರಿಯಾದ ಆಧಾರವಿಲ್ಲ ಎಂದು ಪೊಲೀಸರು ತಿಳಿಸಿದ್ದು, ಬಳಿಕ ಈ ಮಹಿಳೆ ಎಸ್​ಪಿ ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಿದ್ದರು. ಮಾತ್ರವಲ್ಲದೆ, ಮಾ. 31ರಂದು ಮತ್ತೆ ಠಾಣೆಗೆ ಬಂದು ವಿಚಾರಿಸಿದ್ದರು. ಮಹಿಳೆಯ ಪರಿಸ್ಥಿತಿಯನ್ನು ನೋಡಿ ಮರುಗಿದ ಗೋವಿಂದಪ್ರಸಾದ್, ಈ ಕುರಿತು ಸರ್ಕಲ್ ಇನ್​ಸ್ಪೆಕ್ಟರ್​ ಸುಜಿತ್ ಬಳಿ ಚರ್ಚಿಸುತ್ತಾರೆ. ಅವರು ಹೊಸದೊಂದು ಸರ ಖರೀದಿಸಿ ಕೊಡುವ ಐಡಿಯಾ ನೀಡಿದ್ದರು. ನಂತರ ಠಾಣೆಯ ಎಲ್ಲ ಸಿಬ್ಬಂದಿ ಹಣ ಹಾಕಿ ಹೊಸದೊಂದು ಸರ ಖರೀದಿಸಿ, ಗೋವಿಂದಪ್ರಸಾದ್ ನಿವೃತ್ತಿ ದಿನವೇ ಆ ಮಹಿಳೆಗೆ ಅವರಿಂದ ಹಸ್ತಾಂತರಿಸಲಾಗಿದೆ.

ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

Share This Article

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಬೇಡಿ! ಯಾಕೆ ಗೊತ್ತಾ..? healthy morning routine

healthy morning routine:  ಬೆಳಗ್ಗೆ  ಎದ್ದ ತಕ್ಷಣ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ. ಅದಾದ…

ಮಕ್ಕಳಿರಬೇಕಿಲ್ಲ ಮನೆತುಂಬ… ಆದರೆ ನಮಗೆಷ್ಟಿರಬೇಕು?

ನಮಗೆಷ್ಟು ಮಕ್ಕಳಿರಬೇಕು? ಎಂಬುದು ವೈಯಕ್ತಿಕ ವಿಚಾರವಾದರೂ, ಸಾಂಸಾರಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲ ದೇಶದ ಹಿತದೃಷ್ಟಿಯಿಂದಲೂ ಗಮನಿಸಬೇಕಾದ ವಿಷಯ.…

ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ.…