

ಪ್ರಶ್ನೆ: ನಾನು, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿದ್ದೇನೆ. ನನಗೆ ಇನ್ನು 8 ವರ್ಷ ಸೇವಾವಧಿ ಇದ್ದು, ನಿವೃತ್ತಿ ಬಳಿಕ ನಾನು ಕಾಲವಾದರೆ (ನನ್ನ ಪತಿ ನಿಧನರಾಗಿದ್ದಾರೆ) ನನ್ನ ಮಗನಿಗೆ ಪಿಂಚಣಿ ಸಿಗುತ್ತದೆಯೇ? ಅವನಿಗೆ ಪಿಂಚಣಿ ಸಿಗುವಂತೆ ಮಾಡಲು ಏನು ಮಾಡಬೇಕು? ಅವನು ನೌಕರಿ ಸೇರಿದರೂ ಪಿಂಚಣಿ ಲಭ್ಯವಾಗುವುದೇ?
| ಪಾರ್ವತಿ ಮುಕ್ರಿ, ರಾಣೆಬೆನ್ನೂರು
ಉತ್ತರ: 2002ರ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಾವಳಿಯ ನಿಯಮ 9 ರಂತೆ ನಿಮ್ಮ ಮಗ 18 ವರ್ಷ ತುಂಬುವವರೆಗೆ ನಿಮ್ಮ ನಿಧನ ನಂತರ ನಿಮ್ಮ ಮೂಲ ವೇತನದ ಶೇ.30 ಕುಟುಂಬ ಪಿಂಚಣಿ ಲಭ್ಯವಾಗುತ್ತದೆ. ನೀವು ಪಿಂಚಣಿ ಪ್ರಪತ್ರಗಳಲ್ಲಿ ಅವನನ್ನು ನಾಮನಿರ್ದೇಶನ ಮಾಡಿರಬೇಕು. ಆತನಿಗೆ ಉದ್ಯೋಗ ಸಿಕ್ಕರೆ ಯಾವ ಪಿಂಚಣಿಯೂ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕ ನೋಡಬಹುದು.