

ಪ್ರಶ್ನೆ: ನನ್ನ ತಂದೆ, ತಾಯಿ ಇಬ್ಬರೂ ಮರಣ ಹೊಂದಿದ್ದು, ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದೇನೆ. ನಾನು ಅವಿವಾಹಿತಳಾಗಿದ್ದು, ನನಗೆ 55 ವರ್ಷ ವಯಸ್ಸಿನ ತಂಗಿ ಇದ್ದಾಳೆ. ಆಕೆಯೂ ಅವಿವಾಹಿತಳಾಗಿದ್ದು, ಅವಳು ನನ್ನ ಮೇಲೆಯೇ ಅವಲಂಬಿತಳಾಗಿದ್ದಾಳೆ. ನನ್ನ ಮರಣಾನಂತರ ಅವಳಿಗೆ ಪಿಂಚಣಿ ಲಭ್ಯವಾಗುತ್ತದೆಯೇ?
| ಡಿ.ಎಚ್. ಇಚ್ಚಂಗಿ, ಗದಗ
ಉತ್ತರ: 2002ರ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಾವಳಿಯ ನಿಯಮ 9(ಡಿ) ರಂತೆ ನಿವೃತ್ತ ನೌಕರರು ನಿಧನರಾದರೆ ಆತನ/ಆಕೆಯ ಮಗನಿಗೆ 18 ವರ್ಷ, ಮಗಳಿಗೆ 21 ವರ್ಷ ಆಗುವವರೆಗೆ ಕುಟುಂಬ ಪಿಂಚಣಿ ಲಭ್ಯವಾಗುತ್ತದೆ. ಆದರೆ, ನಿವೃತ್ತ ನೌಕರನ ಅವಲಂಬಿತರಾದ ಸಹೋದರ ಅಥವಾ ಸಹೋದರಿಗೆ ಈ ಕುಟುಂಬ ಪಿಂಚಣಿ ದೊರಕುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕ ನೋಡಬಹುದು.