

ಪ್ರಶ್ನೆ: ನಾನು ಸರ್ಕಾರಿ ನೌಕರನಾಗಿದ್ದು ,2021 ರ ಜುಲೈ 5ರಿಂದ ಆಗಸ್ಟ್ 25 ರವರೆಗೆ 46 ದಿವಸ ಗೈರು ಹಾಜರಾಗಿ ವೈದ್ಯಕೀಯ ಕಾರಣಗಳ ನಿಮಿತ್ತ ರಜೆ ಮಂಜೂರು ಮಾಡಲು ವಿನಂತಿಸಿದೆ, ಆದರೆ ಶಿಸ್ಸತು ಪ್ರಾಧಿಕಾರಿಯವರು ಇಲಾಖಾ ವಿಚಾರಣೆ ನೆಡೆಸಿ ದಿನಾಂಕ:1.07-2022 ರಿಂದ ಜಾರಿಯಾಗುವಂತೆ ಈ ಗೈರು ಹಾಜರಿ ಅವಧಿಯನ್ನು ವೇತನರಹಿತ ರಜೆಯಾಗಿ ಪರಿಗಣಿಸಿ, ನನ್ನ ಈ ನಡವಳಿಕೆಯನ್ನು ದುರ್ನಡತೆ ಎಂದು ತಿಳಿಸಿ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮರಹಿತ ತಡೆಹಿಡಿದ್ದಾರೆ ಇದು ಸರಿಯೇ? ಈಗ ನಾನು ಮೇಲ್ಮುನವಿ ಸಲ್ಲಿಸಬುಹುದೇ?
-ನಂದೀಶ್, ಶಿವಮೊಗ್ಗ
ಉತ್ತರ: ನೀವು ಸಕಾಲಿಕವಾಗಿ ಅಧಿಕೃತ ವೈದ್ಯಾಧಿಕಾರಿಯವರಿಂದ ಪಡೆದು ಸಲ್ಲಿಸಿದ್ದರೆ, ವೈದ್ಯಕೀಯ ಕಾರಣಗಳಡಿ ನೀವು ಗೈರು ಹಾಜರಾಗಿದ್ದರೆ ನಿಮ್ಮ ಈ ವರ್ತನೆಯನ್ನು ದುರ್ನಡತೆ ಎಂದು ಪರಿಗಣಿಸಿ ದಂಡನೆಯನ್ನು ವಿಧಿಸುವಂತಿಲ್ಲ. ಸರ್ವೆಚ್ಚನಾಯಾಲಯವು ಭಗವನ್ಲಾಲ್ ಅಯ್ಯರ್ ವರ್ಸ್ಸ್ ದೆಹಲಿ ಪೊಲೀಸ್ ಸಿವಿಲ್ ಅರ್ಜಿಸಂಕ್ಯೆ 1625/2004 ರಲ್ಲಿ ದಿನಾಂಕ: 16-03-2004 ರಂದು ತೀರ್ಪಿತ್ತಿದ. ಈ ಬಗ್ಗೆ ಮೇಲ್ಮನವಿ ಪ್ರಾಧಿಕಾರಕ್ಕೆ ನಿಮ್ಮ ಮೇಲ್ಮನವಿ ಸಲ್ಲಿಸಿ ಹೆಚ್ಚಿನ ವಿವರಗಳಿಗೆ ಎಂ ಉಮೇಶ್ ಅವರ ಸಿಸಿಎ ನಿಯಾಮಾವಳಿ -ಸಮಗ್ರ ಕೈಪಿಡಿ ಪುಸ್ತಕವನ್ನು ನೋಡಬಹುದು.