ಪದೋನ್ನತಿ ನೀಡಲು ಏನಿದೆ ನಿಯಮಾವಳಿ? | ಸರ್ಕಾರಿ ಕಾರ್ನರ್​

Sakari Corner
Published on

ಪ್ರಶ್ನೆ: ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ನಾನು 20 ವರ್ಷಗಳಿಂದ ಉಪನ್ಯಾಸಕಿಯಾಗಿದ್ದೇನೆ. ನನ್ನ ಸಹೋದ್ಯೋಗಿಯೊಬ್ಬರು ವಯಸ್ಸಿನಲ್ಲಿ ನನಗಿಂತ ಹಿರಿಯರಾಗಿದ್ದು, ಜ್ಯೇಷ್ಠತೆಯಲ್ಲಿ ಎರಡು ತಿಂಗಳ ನಂತರ ಕೆಲಸಕ್ಕೆ ಸೇರಿ ಕಿರಿಯರಾಗಿದ್ದಾರೆ. ಹೀಗಿರುವಾಗ ನಮ್ಮ ಸಂಸ್ಥೆಯ ಆಡಳಿತ ಮಂಡಳಿಯು 2022ರ ಸೆಪ್ಟೆಂಬರ್​ನಲ್ಲಿ ನಿವೃತ್ತಿಯಿಂದ ಖಾಲಿ ಇರುವ ಪ್ರಿನ್ಸಿಪಾಲರ ಹುದ್ದೆಗೆ ಅವರಿಗೆ ಪದೋನ್ನತಿ ನೀಡಲು ಠರಾವು ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ. ಇದು ಸರಿಯೇ?

| ಅಮಿತಾ ತೊಳ್ಪಾಡಿ, ಉಡುಪಿ

ಉತ್ತರ: ದಿನಾಂಕ: 10-04-2002ರ ಸರ್ಕಾರಿ ಆದೇಶ ಸಂಖ್ಯೆ: ಇಡಿ 52 ಟಿಪಿಯು 2002ರ ಪ್ರಕಾರ ಪ್ರಿನ್ಸಿಪಾಲರ ಹುದ್ದೆಗೆ ಬಡ್ತಿ ನೀಡುವಾಗ ಅಧ್ಯಾಪಕರು ಒಂದೇ ದಿನಾಂಕದಂದು ನೇಮಕವಾಗಿ ನಿಗದಿತ 15 ದಿವಸದೊಳಗೆ ಕರ್ತವ್ಯಕ್ಕೆ ಹಾಜರಾಗಿದ್ದಲ್ಲಿ ಅವರು ಜನ್ಮದಿನಾಂಕ ಆಧಾರವಾಗಿಟ್ಟುಕೊಂಡು ವಯಸ್ಸಿನಲ್ಲಿ ಹಿರಿಯರಾದವರನ್ನು ಪರಿಗಣಿಸಿ ಜ್ಯೇಷ್ಠತೆ ನಿರ್ಧರಿಸಿ ಪದೋನ್ನತಿ ನೀಡಲು ಆದೇಶಿಸಬಹುದು. ಆದ್ದರಿಂದ ಈ ಆದೇಶದ ಆಧಾರದ ಮೇಲೆ ನಿಮ್ಮ ಪದೋನ್ನತಿ ಹಕ್ಕನ್ನು ವಿನಂತಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಶಿಕ್ಷಣ ಕೈಪಿಡಿ’ ಕೃತಿಯನ್ನು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net