'ಸಪ್ತ ಸಾಗರದಾಚೆ ಎಲ್ಲೋ' ವಿಜಯ ಯಾತ್ರೆ; ಸೆ.10 ರಂದು ಈ 3 ಜಿಲ್ಲೆಗಳಿಗೆ ಬರಲಿದೆ ಚಿತ್ರತಂಡ

Untitled design - 2023-09-09T184151.073
Published on

ಬೆಂಗಳೂರು: ಸೆಪ್ಟಂಬರ್​ 01 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರ ಮನಗೆದ್ದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರತಂಡ, ಇದೀಗ ರಾಜ್ಯದ ಹಲವು ಥಿಯೇಟರ್​ಗಳಿಗೆ ಭೇಟಿ ಕೊಡುವ ಮುಖೇನ ಸಿನಿಪ್ರಿಯರ ಅಭಿಪ್ರಾಯಗಳನ್ನು ನೇರವಾಗಿ ಸ್ವೀಕರಿಸಲು ಮುಂದಾಗಿದೆ.

ಸ್ಯಾಂಡಲ್​ವುಡ್​ನ ಸಿಂಪಲ್​ ಸ್ಟಾರ್​, ನಟ ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕೆ ಸಿನಿಪ್ರೇಕ್ಷಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದು, ಈ ಬೆನ್ನಲ್ಲೇ ಚಿತ್ರತಂಡ ರಾಜ್ಯದ ಆಯಾ ಜಿಲ್ಲೆಗಳಲ್ಲಿರುವ ಹೆಸರಾಂತ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದೆ. ಕಳೆದ ಕೆಲ ದಿನಗಳಿಂದ 'ವಿಜಯ ಯಾತ್ರೆ' ಆರಂಭಿಸಿರುವ ಸಿನಿಮಾ ತಂಡ, ಇದೀಗ ಸೆ.10 ರಂದು ಮೂರು ಜಿಲ್ಲೆಗಳಿಗೆ ಭೇಟಿ ನೀಡಲು ಸಜ್ಜಾಗಿದೆ.

ಸೆಪ್ಟಂಬರ್​ 10 ರಂದು ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಭೇಟಿ ನೀಡಲಿರುವ ಚಿತ್ರತಂಡ, ಹುಬ್ಬಳಿಯ ಅರ್ಬನ್​ ಓಯಾಸೀಸ್​ ಮಾಲ್, ಸಿನಿಪಾಲಿಸ್​ಗೆ ಬೆಳಗ್ಗೆ 9:50ಕ್ಕೆ ಆಗಮಿಸಲಿದೆ.

ಚಿತ್ರತಂಡ ಮಧ್ಯಾಹ್ನ 12:00ರ ವೇಳೆಗೆ ಧಾರವಾಡದ ಐನಾಕ್ಸ್: ಸ್ಮಾರ್ಟ್​ ಸಿಟಿ ಮಾಲ್​ಗೆ ಭೇಟಿ ನೀಡಲಿದ್ದು, ಮಧ್ಯಾಹ್ನ 3:30ಕ್ಕೆ ಬೆಳಗಾವಿಯ ಕಪೀಲ್​ ನ್ಯೂಕ್ಲ್ಯಸ್​ ಮಾಲ್​ಗೆ ಆಗಮಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net