

ಮುಂಬೈ: ಬಾಲಿವುಡ್ನ ಸ್ಟಾರ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಜೋಡಿಯಾಗಿ ನಟಿಸಿದ ಫ್ಯಾಂಟಸಿ, ಆಕ್ಷನ್-ಡ್ರಾಮಾ ಚಿತ್ರ 'ಬ್ರಹ್ಮಾಸ್ತ್ರ' ಬಿಡುಗಡೆಗೊಂಡು ಇಂದಿಗೆ ಒಂದು ವರ್ಷವಾಗಿದೆ. ಇದೀಗ ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ ಸಿನಿಮಾದ 2 ಮತ್ತು 3ನೇ ಭಾಗದ ಬಗ್ಗೆ ಹೊಸ ಮಾಹಿತಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಲೋಕ ಕಲ್ಯಾಣಾರ್ಥ ಸಾಮೂಹಿಕ ಸತ್ಯನಾರಾಯಣ ಪೂಜೆ
ಬಿಡುಗಡೆಯ ಪ್ರಾರಂಭದಲ್ಲಿ ಸದ್ದು ಮಾಡಿದ 'ಬ್ರಹ್ಮಾಸ್ತ್ರ', ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. 'ಯೇ ಜವಾನಿ ಹೈ ದೀವಾನಿ' ಖ್ಯಾತಿಯ ಅಯಾನ್ ಮುಖರ್ಜಿ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಎರಡನೇ ಮತ್ತು ಮೂರನೇ ಭಾಗಗಳ ಬಗ್ಗೆ ಇದೀಗ ಅಧಿಕೃತವಾಗಿ ತಿಳಿಸಿದ್ದಾರೆ.
ಎರಡು ಮತ್ತು ಮೂರನೇ ಭಾಗಗಳ ಬಗ್ಗೆ ಮಾತನಾಡಿದ ನಿರ್ದೇಶಕ ಅಯಾನ್, "ಎರಡು ಕೂಡ ಸದ್ಯ ಅಭಿವೃದ್ಧಿಯ ಹಂತದಲ್ಲಿವೆ. ಶೀಘ್ರದಲ್ಲೇ ಪಾರ್ಟ್ 2 ಬಗ್ಗೆ ಹೊಸ ಅಪ್ಡೇಟ್ ಕೊಡಲಿದ್ದೇವೆ" ಎಂದು ಹೇಳಿದ್ದಾರೆ. ಪ್ರಸ್ತುತ ಅಯಾನ್ ಮುಖರ್ಜಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ 'ವಾರ್ 2' ಚಿತ್ರದಲ್ಲಿ ನಿರತರಾಗಿದ್ದಾರೆ,(ಏಜೆನ್ಸೀಸ್).