ಹೂವಿನ ಹಾರ ಬೇಡ ಎಂದು ಕುತ್ತಿಗೆಗೆ ಹಾವನ್ನು ಸುತ್ತಿಕೊಂಡ ಕಾಂಗ್ರೆಸ್​ ಶಾಸಕ!

Untitled design - 2023-09-09T163946.566
Published on

ಮಧ್ಯಪ್ರದೇಶ: ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡ ಕಾಂಗ್ರೆಸ್ ಶಾಸಕ ಬಾಬು ಜಂಡೆಲ್, ತನ್ನ ಬೆಂಬಲಿಗರು ತಂದ ಹೂಮಾಲೆಗಳನ್ನು ಸ್ವೀಕರಿಸದೆ ಕುತ್ತಿಗೆಗೆ ಜೀವಂತ ಹಾವನ್ನು ಸುತ್ತಿಕೊಳ್ಳುವ ಮುಖೇನ ವಿಭಿನ್ನವಾಗಿ ಸಂಭ್ರಮಿಸಿಕೊಂಡರು. ಈ ಘಟನೆ ಮಧ್ಯಪ್ರದೇಶದ ಶಿಯೋಪುರದಲ್ಲಿ ವರದಿಯಾಗಿದೆ.

ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಹುಟ್ಟುಹಬ್ಬಕ್ಕೆ ಹೂವಿನ ಹಾರವನ್ನು ತಂದ ಬೆಂಬಲಿಗರನ್ನು ತಡೆದ ಬಾಬು ಜಂಡೆಲ್, ಹೂ ಮಾಲೆ ಬೇಡ, ಹಾವನ್ನು ಕೊಡಿ ಎಂದು ತಮ್ಮ ಕುತ್ತಿಗೆಗೆ ಸುತ್ತಿಕೊಂಡಿದ್ದಾರೆ. ಇದನ್ನು ಗಮನಿಸಿದ ಹಲವರು ಅಚ್ಚರಿಗೊಂಡಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಬು ಜಂಡೆಲ್, "ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತೇನೆ. ಪ್ರಾಣಿಗಳು ನನ್ನ ಸ್ನೇಹಿತರಂತೆ, ನನ್ನ ಹಿತ್ತಲಿನಲ್ಲಿ ಮಲ್ಲಿಗೆ ಗಿಡವಿದೆ. ಹೀಗಾಗಿ ರಾತ್ರಿ ಸಮಯ ಹಾವುಗಳು ಆಗಾಗ್ಗೆ ಬರುತ್ತವೆ. ಹಾವು ಶಿವನನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ನಾನು ಸರ್ಪವನ್ನು ನನ್ನ ಕುತ್ತಿಗೆಯ ಸುತ್ತಲೂ ಸುತ್ತಿಕೊಂಡಿದ್ದೇನೆ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net