More

    ಜಿ-20 ಶೃಂಗಸಭೆ; ದೇಶದ ವಾಸ್ತವಾಂಶವನ್ನು ಅತಿಥಿಗಳಿಂದ ಮರೆಮಾಚಲಾಗುತ್ತಿದೆ: ರಾಹುಲ್​ ಗಾಂಧಿ

    ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರವು ಭಾರತಕ್ಕೆ ಬಂದಿರುವ ಅತಿಥಿಗಳಿಂದ ವಾಸ್ತವಾಂಶವನ್ನು ಮರೆಮಾಚಿ ಜಿ-20 ಶೃಂಗಸಭೆಯನ್ನು ನಡೆಸುತ್ತಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

    ಜಿ-20 ಶೃಂಗಸಭೆ ಹಿನ್ನಲೆಯಲ್ಲಿ ದೆಹಲಿ ನಗರದ ಕೊಳಗೇರಿ ಪ್ರದೇಶಗಳನ್ನು ಕಾಣದಂತೆ ಪರದೆ ಕಟ್ಟಿ ಮುಚ್ಚಲಾಗಿದೆ. ಬಡ ಜನರನ್ನು ಏಕೆ ಮರೆಮಾಚುತ್ತಿದ್ದೀರಿ ಪ್ರಧಾನಿಯವರೇ ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ಖಂಡನೀಯ: ನಟ ಪವನ್​ ಕಲ್ಯಾಣ್​ ಕಿಡಿ

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ರಾಹುಲ್​ ಭಾರತ ಸರ್ಕಾರವು ಬಡವರು ಹಾಗೂ ಪ್ರಾಣಿಗಳನ್ನು ಯಾರ ಕಣ್ಣಿಗೆ ಕಾಣದಂತೆ ಮರೆಮಾಚಿದೆ. ಭಾರತಕ್ಕೆ ಬಂದಿರುವ ಅತಿಥಿಗಳಿಂದ ವಾಸ್ತವಾಂಶವನ್ನು ಮರೆಮಾಚುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಜಿ-20 ಶೃಂಗಸಭೆಯಿಂದ ರಷ್ಯಾದ ಅಧ್ಯಕ್ಷ ದೂರ ಉಳಿದಿರಬಹುದು. ಆದರೆ, ಪ್ರಿನ್ಸ್​ ಪೊಟೆಮ್ಕಿನ್​ (ಪ್ರಧಾನಿ ಮೋದಿ) ಮಾತ್ರ ಕೊಳಗೇರಿ ಪ್ರದೇಶಗಳನ್ನು ಮರೆಮಾಚಿ ತಮ್ಮನ್ನು ಪ್ರದರ್ಶಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಪ್ರಧಾನಿ ತಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ಪ್ರಾಣಿಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts