More

    ಯಾರಿಂದಲೂ ನನ್ನನ್ನು ತಡೆಯಲು ಸಾಧ್ಯವಿಲ್ಲ; ಬಂಧನದ ನಂತರ ಚಂದ್ರಬಾಬು ನಾಯ್ಡು ಫಸ್ಟ್​ ರಿಯಾಕ್ಷನ್

    ಅಮರಾವತಿ: ಕೌಶಲ್ಯಭಿವೃದ್ದಿ ನಿಗಮದಲ್ಲಿನ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ಧಾರೆ.

    ಆಂಧ್ರಪ್ರದೇಶದ ನಂದ್ಯಾಲದಲ್ಲಿ ಚಂದ್ರಬಾಬು ನಾಯ್ಡುರನ್ನು ಶನಿವಾರ ಬೆಳಗ್ಗೆ 6 ಘಂಟೆ ಸುಮಾರಿಗೆ ವಶಕ್ಕೆ ಪಡೆಯಾಲಗಿದ್ದು, ಇವರ ಜೊತೆಗೆ ಟಿಡಿಪಿ ಪಕ್ಷದ ಅನೇಕ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇತ್ತ ಚಂದ್ರಬಾಬು ನಾಯ್ಡು ಬಂಧನ ಆಡಳಿತರೂಢ ವೈಎಸ್​ಆರ್​ ಹಾಗೂ ಟಿಡಪಿ ನಡುವಿನ ಜಟಾಪಟಿಗೆ ಕಾರಣವಾಗಿದೆ.

    ಇದನ್ನೂ ಓದಿ: ಜೆಡಿಎಸ್​ನವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ: ಸಿಎಂ ಸಿದ್ದರಾಮಯ್ಯ

    ಯಾರಿಂದಲೂ ಸಾಧ್ಯವಿಲ್ಲ

    ಇತ್ತ ತಮ್ಮ ಬಂಧನದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಚಂದ್ರಬಾಬು ನಾಯ್ಡು ಕಳೆದ 45 ವರ್ಷಗಳಿಂದ ನಿಸ್ವಾರ್ಥದಿಂದ ರಾಜ್ಯದ ಜನರ ಸೇವೆ ಮಾಡಿದ್ದೇನೆ. ತೆಲುಗು ಜನರ ಹಿತಾಸಕ್ತಿ ಕಾಪಾಡಲು ನಾನು ನನ್ನ ಪ್ರಾಣ ತ್ಯಾಗ ಮಾಡಲು ಸಿದ್ದನಿದ್ಧೇನೆ. ನಾನು ನನ್ನ ತಾಯ್ನಾಡಿಗೆ ಸೇವೆ ಸಲ್ಲಿಸುವುದನ್ನು ಭೂಮಿಯ ಮೇಲಿನ ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ.

    ಅಂತಿಮವಾಗಿ ಸತ್ಯ ಹಾಗೂ ಧರ್ಮ ಜಯಗಳಿಸುತ್ತದೆ. ಅವರು ನನಗೆ ಏನು ಮಾಡಿದರು ನಾನು ಯೋಚಿಸುವುದಿಲ್ಲ ಜನರಿಗಾಗಿ ಸದಾ ಮುನ್ನಡೆಯುತ್ತಿರುತ್ತೇನೆ. ಸಾರ್ವಜನಿಕರು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು ಎಂದು ಚಂದ್ರಬಾಬು ನಾಯ್ಡು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts