UP Woman : ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬಳು ಗಂಡ ಮತ್ತು ತನ್ನಿಬ್ಬರು ಮಕ್ಕಳನ್ನು ತೊರೆದು ಬಾಯ್ಫ್ರೆಂಡ್ ಜತೆ ಮದುವೆ ಆಗಿದ್ದಾಳೆ. ಈ ಕೇಸ್ ಈಗ ಸ್ಥಳೀಯ ಪ್ರದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.‘

ಘಟನೆಯ ವಿವರವನ್ನು ನೋಡುವುದಾದರೆ, ಕತಾರ್ ಜೋತ್ ಗ್ರಾಮದ ಬಬ್ಲು ಎಂಬಾತ 2017ರಲ್ಲಿ ಗೋರಖ್‌ಪುರದ ರಾಧಿಕಾ ಎಂಬಾಕೆಯನ್ನು ವಿವಾಹವಾದನು. ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಜೀವನ ನಡೆಸುತ್ತಿದ್ದರು. ತಮ್ಮ 8 ವರ್ಷದ ದಾಂಪತ್ಯ ಜೀವನದಲ್ಲಿ ಇಬ್ಬರು ಮಕ್ಕಳು ಹುಟ್ಟಿದರು. ಹಿರಿಯ ಮಗ ಆರ್ಯನ್‌ಗೆ 7 ವರ್ಷ ಮತ್ತು ಕಿರಿಯ ಮಗಳು ಶಿವಾನಿ 2 ವರ್ಷ ವಯಸ್ಸು.
ಜೀವನೋಪಾಯಕ್ಕಾಗಿ ಬಬ್ಲು ಆಗಾಗ ಮನೆಯಿಂದ ಹೊರಗೆ ಇರುತ್ತಿದ್ದ. ಈ ಸಮಯದಲ್ಲಿ, ಆತನ ಪತ್ನಿ ರಾಧಿಕಾ ಅದೇ ಗ್ರಾಮದ ವಿಕಾಸ್ ಎಂಬ ಯುವಕನೊಂದಿಗೆ ಪ್ರೇಮ ಸಂಬಂಧವನ್ನು ಬೆಳೆಸಿದಳು. ಅವರ ಸಂಬಂಧ ಬಹಳ ಕಾಲ ನಡೆಯಿತು. ಈ ಸಂಬಂಧ ಗ್ರಾಮದಲ್ಲಿ ಚರ್ಚೆಯ ವಿಷಯವಾಯಿತು. ಬಳಿಕ ಕುಟುಂಬ ಸದಸ್ಯರಿಗೂ ಈ ವಿಷಯ ತಿಳಿದಾಗ ಅವರು ಬಬ್ಲುಗೆ ಮಾಹಿತಿ ನೀಡಿದರು.
ಬಳಿಕ ಬಬ್ಲು ರಾಧಿಕಾ ಜೊತೆ ಈ ವಿಷಯವನ್ನು ಚರ್ಚಿಸಿ, ಆಕೆಯ ಮನವೊಲಿಸಲು ಪ್ರಯತ್ನಿಸಿದನು. ಆದರೆ, ರಾಧಿಕಾ, ತನ್ನ ಗೆಳೆಯನಿಗಾಗಿ ತನ್ನ ಮಕ್ಕಳನ್ನು ಸಹ ಬಿಟ್ಟುಕೊಡಲು ಮುಂದಾದಳು. ತನಗೆ ತನ್ನ ಗೆಳೆಯ ಬೇಕೆಂದು ಒತ್ತಾಯಿಸಿದಳು. ಬಳಿಕ ಒಂದು ನಿರ್ಧಾರಕ್ಕೆ ಬಂದ ಬಬ್ಲು, ಮಕ್ಕಳನ್ನು ನಾನೇ ಬೆಳೆಸುತ್ತೇನೆ ಎಂದು ಹೇಳಿದ. ಬಳಿಕ ರಾಧಿಕಾ ಗ್ರಾಮದ ಹಿರಿಯರ ಮುಂದೆ ತನ್ನ ಗೆಳೆಯನನ್ನು ಮದುವೆಯಾದಳು. ಈ ಸಮಯದಲ್ಲಿ ರಾಧಿಕಾ ಅಳುತ್ತಿದ್ದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ.
ಇದೀಗ ಈ ಘಟನೆ ಸ್ಥಳೀಯವಾಗಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯ ವಿಷಯವಾಗಿದೆ. ಈ ಸುದ್ದಿ ಕೇಳಿ ಜನರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಎಲ್ಲರೂ ಆ ಮಹಿಳೆಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ತನ್ನ ಗೆಳೆಯನಿಗಾಗಿ ಹಂಬಲಿಸಿದ್ದಕ್ಕಾಗಿ ಆಕೆಯನ್ನು ಶಪಿಸುತ್ತಿದ್ದಾರೆ. (ಏಜೆನ್ಸೀಸ್)
ಮಾರ್ಚ್ 29ಕ್ಕೆ ಶನಿಯ ರಾಶಿ ಬದಲಾವಣೆ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣದ ಹರಿವು! Zodiac Signs