blank

ಮಾರ್ಚ್​ 29ಕ್ಕೆ ಶನಿಯ ರಾಶಿ ಬದಲಾವಣೆ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣದ ಹರಿವು! Zodiac Signs

Zodiac Signs

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ದಿನಾಂಕ, ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

blank

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳಲ್ಲಿನ ಅಸಮತೋಲನದಿಂದ ಗ್ರಹಗಳು ಒಟ್ಟಿಗೆ ಸೇರಿದಾಗ ಕೆಲವು ಯೋಗಗಳು ರೂಪುಗೊಳ್ಳುತ್ತವೆ ಎಂದು ನಂಬಲಾಗಿದೆ. ಈ ರೀತಿಯಾಗಿ ರೂಪುಗೊಳ್ಳುವ ಅಪರೂಪದ ಯೋಗಗಳ ಪ್ರಭಾವವು ಎಲ್ಲ 12 ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೈದಿಕ ಗ್ರಂಥಗಳಲ್ಲಿ ಮಾರ್ಚ್ ಅನ್ನು ಅತ್ಯಂತ ಶಕ್ತಿಶಾಲಿ ತಿಂಗಳು ಎಂದು ಪರಿಗಣಿಸಲಾಗಿದೆ. ಏಕೆಂದರೆ, ಈ ತಿಂಗಳಲ್ಲಿ ಅನೇಕ ಗ್ರಹಗಳ ಸ್ಥಾನಗಳು ಬದಲಾಗುತ್ತವೆ ಮತ್ತು ಅನೇಕ ಶಕ್ತಿಶಾಲಿ ರಾಜಯೋಗಗಳು ರೂಪುಗೊಳ್ಳುತ್ತವೆ. ಈ ಯೋಗಳು ಮಾನವ ಜೀವನದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ.

ಅದೇ ರೀತಿಯಾಗಿ ಮಾರ್ಚ್ 29ರಂದು ಶನಿಯು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಕುಂಭ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸಿ, ಆ ರಾಶಿಯಲ್ಲಿ ಸಂಚರಿಸಲಿದ್ದಾನೆ. ಅಲ್ಲದೆ, ಶುಕ್ರ ಮತ್ತು ಬುಧನೊಂದಿಗೆ ಮೈತ್ರಿ ಮಾಡಿಕೊಳ್ಳಲಿದ್ದು, ತ್ರಿಗ್ರಹಿ ಯೋಗ ರೂಪುಗೊಳ್ಳಲಿದೆ. ಇದು ಮೂರು ರಾಶಿಚಕ್ರ ಚಿಹ್ನೆಗಳ ಜನರಿಗೆ ಪ್ರಯೋಜನಕಾರಿಯಾಗಲಿದೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ವೃಷಭ ರಾಶಿ

ಶನಿಯ ರಾಶಿ ಬದಲಾವಣೆಯಿಂದ ವೃಷಭ ರಾಶಿಯ 11ನೇ ಮನೆಯಲ್ಲಿ ತ್ರಿಗ್ರಹಿ ಯೋಗವು ರೂಪುಗೊಳ್ಳುತ್ತಿದೆ. ಇದರಿಂದಾಗಿ ಈ ರಾಶಿಯವರ ಕನಸುಗಳು ನನಸಾಗಲಿವೆ. ಕುಟುಂಬದಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನೀವು ಸಾಲದಿಂದ ಮುಕ್ತಿ ಹೊಂದಲಿದ್ದೀರಿ ಮತ್ತು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ಇದನ್ನೂ ಓದಿ: ಶ್ರೇಯಸ್ ಅಯ್ಯರ್​ ನಿಸ್ವಾರ್ಥ ಆಟ: ತಂಡಕ್ಕಾಗಿ ಶತಕವನ್ನೇ ತ್ಯಾಗ ಮಾಡಿದ ಪಂಜಾಬ್​ ಕಿಂಗ್ಸ್​ ನಾಯಕ! Shreyas Iyer

ಕುಂಭ ರಾಶಿ

ಕುಂಭ ರಾಶಿಯ ಎರಡನೇ ಮನೆಯಲ್ಲಿ ತ್ರಿಗ್ರಹಿ ಯೋಗ ಉಂಟಾಗುತ್ತಿದೆ. ಜೀವನದಲ್ಲಿ ನೀವು ಹಿಂದೆಂದೂ ಅನುಭವಿಸದ ಸಂತೋಷವನ್ನು ಕಾಣುವಿರಿ. ಶನಿಯಿಂದ ಇದುವರೆಗೆ ಉಂಟಾಗಿದ್ದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಜೀವನದಲ್ಲಿ ಇಲ್ಲಿಯವರೆಗೆ ಇದ್ದ ಹಣದ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮ ವೃತ್ತಿಜೀವನದ ಎಲ್ಲ ಕ್ಷೇತ್ರಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.

ಮಿಥುನ ರಾಶಿ

ಮಿಥುನ ರಾಶಿಯ 10ನೇ ಮನೆಯಲ್ಲಿ ತ್ರಿಗ್ರಹಿ ಯೋಗವು ರೂಪುಗೊಳ್ಳುತ್ತಿದೆ. ನೀವು ಹಿಂದೆಂದೂ ಅನುಭವಿಸದ ಸಂತೋಷವನ್ನು ಅನುಭವಿಸುವಿರಿ. ನೀವು ಜ್ಞಾನ ಮತ್ತು ಶಿಸ್ತಿನಲ್ಲಿ ಶ್ರೇಷ್ಠರಾಗುವಿರಿ. ನೀವು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಕೆಲಸವನ್ನು ಕೆಲಸದ ಸ್ಥಳದಲ್ಲಿ ಪ್ರಶಂಸಿಸಲಾಗುತ್ತದೆ. ನೀವು ಜೀವನದಲ್ಲಿ ಎದುರಿಸಿದ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನೀವು ಆರ್ಥಿಕವಾಗಿ ಪ್ರಗತಿ ಸಾಧಿಸುವಿರಿ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ಈ ಮೂರು ರಾಶಿಯ ಮಹಿಳೆಯರ ಕೋಪ ತುಂಬಾ ಅಪಾಯಕಾರಿಯಂತೆ… ಅವರೊಂದಿಗೆ ಎಚ್ಚರಿಕೆಯಿಂದಿರಿ! Zodiac Signs

Share This Article

ಕೂದಲು ಉದುರುವಿಕೆ ಕಡಿಮೆ ಮಾಡಲು ಹೀಗೆ ಮಾಡಿ.. ಫಲಿತಾಂಶ ಗ್ಯಾರಂಟಿ! hair care

hair care: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಅನೇಕ ಜನರು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ.…

ಒಣಗಿದ ಮಾವು, ಪೇರಲ ಮತ್ತು ಹಲಸಿನ ಎಲೆಗಳಿಗೆ ಹೆಚ್ಚಿದ ಬೇಡಿಕೆ! ಒಂದು ಪ್ಯಾಕೆಟ್ ಬೆಲೆ 500 ರೂ. dried mango leaves

dried mango leaves : ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಸಮಾರಂಭಗಳು…

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…