ಸಮಂತಾ ಬ್ಯಾಕ್ ಲೆಸ್ ಲುಕ್​ಗೆ 1 ಮಿಲಿಯನ್ ಮೆಚ್ಚುಗೆ! ಫೋಟೋ ವೈರಲ್...

Published on
ನಟಿ ಸಮಂತಾ ರುತ್ ಪ್ರಭು ಕೇವಲ ಅವರ ನಟನೆ ಮತ್ತು ಸೌಂದರ್ಯದಿಂದ ಲಕ್ಷಾಂತರ ಹೃದಯಗಳನ್ನು ಆಳುವುದಲ್ಲದೇ, ಅವರ ಫಿಟ್ನೆಸ್ ಕೂಡ ಅವರ ಅಭಿಮಾನಿಗಳನ್ನು ತುಂಬಾ ಆಕರ್ಷಿಸುತ್ತದೆ. ಆದರೆ, ಸ್ಯಾಮ್ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ನಟಿ ಸಮಂತಾ ತನ್ನ ಬೋಲ್ಡ್ ಡ್ರೆಸ್ಸಿಂಗ್ ಸೆನ್ಸ್​ಗೂ ಎಲ್ಲರ ಹುಬ್ಬೇರಿಸುತ್ತಾರೆ. ಇತ್ತೀಚೆಗೆ, ನಟಿ ಸಮಂತಾ ಬಹಳಷ್ಟು ಫೋಟೋ ಶೂಟ್​ಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ, ನಟಿಯ ಫೋಟೋ ಶೂಟ್​ಗಳಲ್ಲಿ ಧರಿಸುವ ಉಡುಪುಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹಾಗೆಯೇ, ಈಗ ನಟಿಯ ಒಂದು ಫೋಟೋ ಶೂಟ್​ನ ಬೋಲ್ಡ್ ಉಡುಪು, ಸದ್ಯ ಎಲ್ಲರ ಗಮನ ಸೆಳೆದಿದೆ.
ಅಂದಹಾಗೆ, ನಟಿ ಸಮಂತಾ ಒಂದು ಬ್ಯಾಕ್ ಲೆಸ್ ಟಾಪ್ ಧರಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟ್ರಾವಲ್ ಲೈಜರ್ ಎಂಬ ಮ್ಯಾಗಜಿನ್​ಗೆ ನಟಿ ಮಾಡಿರುವ ಫೋಟೋಶೂಟ್​ನಲ್ಲಿ ಎಜ್ರಾ ಕೌಚರ್ ದುಬೈನ ಗೌನ್ ಕಮ್ ಸಿಂಗಲ್ ಬ್ಯಾಕ್ ಲೆಸ್ ಟಾಪ್​ನಲ್ಲಿ ಮಿರ ಮಿರ ಮಿಂಚಿದ್ದಾರೆ ನಟಿ. ಈ ಫೋಟೋಗೆ ನಟಿ ಸಮಂತಾ 1 ಮಿಲಿಯನ್ ಗೂ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡಿದ್ದಾರೆ. ನಟಿಯ ಈ ಬ್ಯಾಕ್ ಲೆಸ್ ಲುಕ್ ಕಂಡು ಪಡ್ಡೆ ಹುಡುಗರಂತೂ ಈಗಲೂ ನಿದ್ದೆ ಕೆಡಿಸಿಕೊಂಡಿದ್ದಾರೆ. ಇದರ ನಂತರ ನಟಿ ಮತ್ತೆ ಬಹಳಷ್ಟು ಫೋಟೋಶೂಟ್​​ಗಳಲ್ಲಿ ಭಾಗವಹಿಸಿದ್ದರೂ, ಸಮಂತಾಳ ಈ ಬ್ಯಾಕ್ ಲೆಸ್ ಲುಕ್ ಮಾತ್ರ ಸಿಕ್ಕಾಪಟ್ಟೆ ಫೇಮಸ್ ಆಗಿದೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net