80 ಕೆಜಿ ತೂಕದ ಬಾರ್ಬೆಲ್ ಎತ್ತಿದ ನಟಿ ಸಮಂತಾ! ವಿಡಿಯೋಸ್ ವೈರಲ್...

Published on
ನಟಿ ಸಮಂತಾ ರುತ್ ಪ್ರಭು ಅವರ ನಟನೆ ಮತ್ತು ಸೌಂದರ್ಯದಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿದಲ್ಲದೇ, ಅವರ ಫಿಟ್ನೆಸ್ ಕೂಡ ಅವರ ಅಭಿಮಾನಿಗಳನ್ನು ತುಂಬಾ ಆಕರ್ಷಿಸುತ್ತದೆ. ಇದೀಗ, ಸಮಂತಾ ತಮ್ಮ ಫಿಟ್ನೆಸ್ ಗೆ ಸಂಬಂಧಿಸಿದಂತಹ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ನೋಡಿದ ಅವರ ಅಭಿಮಾನಿಗಳು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ನಟಿ ಜಿಮ್‌ನಲ್ಲಿ 80 ಕೆಜಿ ತೂಕದ ಬಾರ್ಬೆಲ್ ಎತ್ತಿದ್ದಾರೆ. ಸಮಂತಾ ಬಾರ್ಬೆಲ್ ಅನ್ನು ಸುಲಭವಾಗಿ ಎತ್ತುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈಗ ನಟಿಯ ಈ ವಿಡಿಯೋ ಕಂಡ ಅವರ ಅಭಿಮಾನಿಗಳು ಎಲ್ಲರೂ ದಿಲ್ ಖುಷ್ ಆಗಿದ್ದಾರೆ.
ಅಂದಹಾಗೆ, 75 ಕೆಜಿ, 78 ಕೆಜಿ ಮತ್ತು 80 ಕೆಜಿ ತೂಕದ ಬಾರ್ಬೆಲ್ ಅನ್ನು ಎತ್ತುವ 4 ವಿಡಿಯೋಗಳನ್ನು ನಟಿ ಪೋಸ್ಟ್ ಮಾಡಿದ್ದಾರೆ. ಸಮಂತಾಳ ಜಿಮ್ ತರಬೇತುದಾರ ಜುನೈದ್ ಶೇಖ್ ನಟಿಯನ್ನು ವಿಡಿಯೋಗಳಲ್ಲಿ ಈ ಸಾಹಸವನ್ನು ಮಾಡಲು ಹುರಿದುಂಬಿಸುವುದು ಕಂಡುಬಂದಿದೆ. ಹೌದು, ಜಿಮ್‌ಗೆ ಹೋಗಲು ಮತ್ತು ಫಿಟ್‌ನೆಸ್ ದಿನಚರಿಯನ್ನು ಟ್ರ್ಯಾಕ್‌ಗೆ ತರಲು ಯಾರಿಗೆ ಆದರೂ ಸ್ವಲ್ಪ ಪ್ರೇರಣೆ ಅಗತ್ಯವಿದ್ದರೆ, ನಟಿಯ ಈ ವಿಡಿಯೋಗಳು ಬೇಕದಷ್ಟು ಪ್ರೇರಣೆ ನೀಡುತ್ತವೆ ಎಂದು ಹೇಳಬಹುದು. 
ನಟಿ ಸಮಂತಾ ಮಾಡಿರುವ ಈ ಸಾಹಸಕ್ಕೆ 'ಡೆಡ್​ಲಿಫ್ಸ್' ಎನ್ನುತ್ತಾರೆ. ಈ ಡೆಡ್‌ಲಿಫ್ಟ್‌ಗಳು ಹಿಪ್ ಎಕ್ಸ್‌ಟೆನ್ಸರ್‌ಗಳನ್ನು ಸಕ್ರಿಯಗೊಳಿಸಲು, ಬೆನ್ನು ನೋವನ್ನು ಕಡಿಮೆ ಮಾಡಲು, ಸುಲಭವಾಗಿ ಜಂಪ್​ಗಳು ಮಾಡಲು, ಒಬ್ಬರ ಮೆಟಾಬೋಲಿಸಮ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಉಪಯೋಗಳು ಇರುವ ಡೆಡ್‌ಲಿಫ್ಟ್‌ಗಳುನ್ನು ಒಬ್ಬ ತರಬೇತುದಾರನ ಸಹಾಯದಿಂದ ಯಾರು ಬೇಕಾದರೂ ಮಾಡಬಹುದು. ಅದೇನೇ ಇರಲಿ, ನಟಿಯ ಈ 4 ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಖತ್ ವೈರಲ್ ಆಗುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net