ಬ್ರಾಲೆಟ್ ಧರಿಸಿದ ಸಮಂತಾ; ನಿನ್ನ ಡ್ರೆಸ್ಸಿಂಗ್ ಓವರ್ ಆಗುತ್ತಿದೆ ಎಂದ ನೆಟ್ಟಿಗರು!

Published on
ನಟಿ ಸಮಂತಾ ರುತ್ ಪ್ರಭು ಅವರು ವಿಚ್ಛೇದನ ಪಡೆದ ನಂತರ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಅದರ ಜತೆಗೆ ಸ್ಯಾಮ್ ಸಾಕಷ್ಟು ಸುದ್ದಿಯಲ್ಲೂ ಇದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾ, ಹಲವು ಜಾಹೀರಾತುಗಳಲ್ಲಿ ನಟಿಸುತ್ತಾ, ಬ್ರೇಕ್ ಪಡೆದು ಸ್ನೇಹಿತರ ಜತೆಗೆ ನಾನಾ ಕಡೆಗಳಲ್ಲಿ ಸುತ್ತಾಟ ಮಾಡುತ್ತಾ, ತಮ್ಮ ಜೀವನದಲ್ಲಿ ವಿಚ್ಛೇದನ ಪಡೆದ ಆ ಕಹಿ ಘಟನೆಯನ್ನು ಮರೆಯಲು ಸಮಂತಾ ಪ್ರಯತ್ನಿಸುತ್ತಿದ್ದಾರೆ. ಅದರ ಜತೆ ಜತೆಗೆ ತಾವು ಏನು ಮಾಡಿದರೂ ಸಮಂತಾ ಟ್ರೋಲಿಗರಿಗೆ ಮತ್ತು ಟೀಕಾಕಾರರಿಗೆ ತುತ್ತಾಗುತ್ತಿದ್ದಾರೆ.
ಹೌದು, ಇತ್ತೀಚೆಗೆ ನಟಿ ಸಮಂತಾ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಜಾಹೀರಾತುಗಳ ಫೋಟೋ ಮತ್ತು ವಿಡಿಯೋಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿರುವ ಸ್ಯಾಮ್, ಈಗ ಇಂಡಿಯಾನ್ ಫೇಮಸ್ ಮ್ಯಾಗಜಿನ್ ಒಂದಕ್ಕಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು, ಈ ಫೋಟೋಶೂಟ್​ನಲ್ಲಿ ಸಮಂತಾ ಹಾಟ್​ ಅವತಾರ ತಾಳಿದ್ದಾರೆ. ಅಂದಹಾಗೆ, ಸ್ಯಾಮ್ ಫೋಟೋಗಳಲ್ಲಿ ರಂಗು ರಂಗಿನ ಬಿಕಿನಿ ಲೇಸ್ ಬ್ರಾಲೆಟ್ ಅಥವಾ ಟ್ಯೂಬ್ ಟಾಪ್ ತೊಟ್ಟಿದ್ದು, ಅದನ್ನು ಕಂಡ ಪಡ್ಡೆ ಹುಡುಗರು ಕಣ್ಣರಳಿಸಿದ್ದಾರೆ.
ಆದರೆ, ಸಮಂತಾ ರುತ್ ಪ್ರಭು ಅವರ ಈ ಮ್ಯಾಗಜಿನ್ ಫೋಟೋಶೂಟ್ ನೋಡಿದ ಕೆಲ ಅಭಿಮಾನಿಗಳು, ಟ್ರೋಲಿಗರು, ಟೀಕಾಕಾರರು ಮಾತ್ರ ಸಮಂತಾ ಅವರ ಡ್ರೆಸ್ಸಿಂಗ್ ಓವರ್ ಆಗುತ್ತಿದೆ ಎಂದ ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆ ಒಂದು ಮದ್ಯದ ಬ್ರಾಂಡ್ ಜಾಹೀರಾತಿಗೆ ಕೂಡಾ ಸಮಂತಾ ತುಂಬಾ ಹಾಟ್ ಅವತಾರ ತಾಳಿದ್ದರು. ಅದನ್ನು, ಕಂಡ ನೆಟ್ಟಿಗರು ''ದುಡ್ಡಿಗೆ ಅಂತ ಯಾವ ಮಟ್ಟಕ್ಕೆ ಇಳಿದ ಸಮಂತಾ'', ಎಂದು ಕಾಮೆಂಟ್​ಗಳ ಮೂಲಕ ಗರಂ ಆದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net