More

    ಪರಭಾಷೆಯ ಸ್ಟಾರ್​ಗಳಿಂದ ‘ವಿಕ್ರಾಂತ್​ ರೋಣ’ ಹೊಸ ಟೀಸರ್ ಲಾಂಚ್!

    ನಟ ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ನೋಡಲು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಇನ್ನು, ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಚಿತ್ರದ ಪ್ರಚಾರದ ಕೆಲಸಗಳು ದೊಡ್ಡ ಮಟ್ಟದಲ್ಲೇ ನಡೆಯುತ್ತಿವೆ. ಇತ್ತೀಚೆಗೆ, ತಾನೆ ಪ್ರಚಾರ ಕಾರ್ಯದ ಒಂದು ಮ್ಯಾಪ್​ ಅನ್ನು ನಿರ್ದೇಶಕ ಅನೂಪ್ ಭಂಡಾರಿ ಬಿಡುಗಡೆ ಮಾಡಿದ್ದರು. ಇದೀಗ. ಈ ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಸಿನಿಮಾವನ್ನು ಬೆಂಬಲಿಸೋಕೆ ಪರಭಾಷೆಯ ಸ್ಟಾರ್ ನಟರಾದ ನಟ ಮೋಹನ್ ಲಾಲ್, ನಟ ಮೆಗಾಸ್ಟಾರ್ ಚಿರಂಜೀವಿ, ನಟ ಸಿಂಬು ಕೈಜೋಡಿಸಿದ್ದಾರೆ.
    ಹೌದು, ‘ವಿಕ್ರಾಂತ್ ರೋಣ’ ಚಿತ್ರತಂಡ ಇತ್ತೀಚೆಗೆ ತಾನೆ ಒಂದು ಟೀಸರ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಬಳಿಕ, ನಟ ಸುದೀಪ್ ಅವರು ಸಿನಿಮಾಗಾಗಿ ಡಬ್ಬಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಕಿಚ್ಚ ಡಬ್ ಮಾಡಿದ ದೃಶ್ಯ ಹಾಗೂ ಡೈಲಾಗ್​ಗಳು ಸಿಕ್ಕಾಪಟ್ಟೆ ವೈರಲ್ ಆದವು. ಈಗ ಈ ಚಿತ್ರತಂಡ ಮೊತ್ತೊಂದು ಹೊಸ ಟೀಸರ್ ರಿಲೀಸ್ ಮಾಡಲಿದೆಯಂತೆ
    ಹಾಗಾಗಿ, ಚಿತ್ರಕ್ಕೆ ಸಾಥ್ ನೀಡಲು ಪರಭಾಷೆಯ ಸ್ಟಾರ್ ನಟರು ದಿ ಡೆವಿಲ್ಸ್ ಅರೈವಲ್’ ಹೆಸರಿನಲ್ಲಿ ‘ವಿಕ್ರಾಂತ್​ ರೋಣ’ದ ಹೊಸ ಟೀಸರ್ ಅನ್ನು ಏಪ್ರಿಲ್ 2 ರಂದು ಬೆಳಗ್ಗೆ 9.55ಕ್ಕೆ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಅಂದಹಾಗೆ, ಈ ಚಿತ್ರದ ಹೊಸ ಮಲಯಾಳಂನ ಟೀಸರ್ ಅನ್ನು ನಟ ಮೋಹನ್​ ಲಾಲ್, ತೆಲುಗಿನ ಟೀಸರ್ ​ಅನ್ನು ನಟ ಚಿರಂಜೀವಿ ಅವರು ರಿಲೀಸ್ ಮಾಡಲಿದ್ದಾರೆ. ಇನ್ನು, ತಮಿಳಿನಲ್ಲಿ ನಟ ಸಿಂಬು ಅವರು ಈ ಚಿತ್ರದ ಟೀಸರ್ ಲಾಂಚ್ ಮಾಡಲಿದ್ದಾರೆ.
    ಈ ಹೊಸ ಟೀಸರ್​ನಲ್ಲಿ ಯಾವೆಲ್ಲ ವಿಚಾರ ಇರಲಿದೆ? ಸಿನಿಮಾದ ರಿಲೀಸ್ ದಿನಾಂಕ, ಸುದೀಪ್ ಅವರ ಹೊಸ ಲುಕ್ ಎಂಬಿತ್ಯಾದಿ ವಿಷಯಗಳು ಇರಲಿವೆಯೇ ಎಂಬ ಕುತೂಹಲ ಮೂಡಿದೆ. ಈ ಸ್ಟಾರ್ ನಟರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕಿಚ್ಚನ ಸಿನಿಮಾದ ಟೀಸರ್ ರಿಲೀಸ್ ಮಾಡಲಿದ್ದಾರೆ. ಜತೆಗೆ, ಚಿತ್ರತಂಡಕ್ಕೆ ಹಾಗೂ ನಟ ಕಿಚ್ಚ ಸುದೀಪ್ ಅವರಿಗೆ ಶುಭಕೋರಲಿದ್ದಾರೆ

    ಪರಭಾಷೆಯ ಸ್ಟಾರ್​ಗಳಿಂದ ‘ವಿಕ್ರಾಂತ್​ ರೋಣ’ ಹೊಸ ಟೀಸರ್ ಲಾಂಚ್! ಪರಭಾಷೆಯ ಸ್ಟಾರ್​ಗಳಿಂದ ‘ವಿಕ್ರಾಂತ್​ ರೋಣ’ ಹೊಸ ಟೀಸರ್ ಲಾಂಚ್! ಪರಭಾಷೆಯ ಸ್ಟಾರ್​ಗಳಿಂದ ‘ವಿಕ್ರಾಂತ್​ ರೋಣ’ ಹೊಸ ಟೀಸರ್ ಲಾಂಚ್!

    ದಳಪತಿ ವಿಜಯ್ ನಿಧನ? ಏಡ್ಸ್ ರೋಗಿ ಅಜಿತ್? ಏನಾಗಿದೆ ಈ ಸ್ಟಾರ್ ನಟರ ಅಭಿಮಾನಿಗಳಿಗೆ?

    ನಿಮ್ಮಿಂದ ಲೈಂಗಿಕ ಕಿರುಕುಳ ಅನುಭವಿಸಿದ ಎಲ್ಲರೂ… ಸಲ್ಮಾನ್​ಗೆ ಮಾಜಿ ಪ್ರೇಯಸಿ ವಾರ್ನಿಂಗ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts