ಮುಂಬೈ: ನಟ ಸಲ್ಮಾನ್ ಖಾನ್ ಮದುವೆಯಾಗದೆ ಜೀವನದಲ್ಲಿ ಸಿಂಗಲ್ಲಾಗಿ ಇದ್ದರೂ, ಹಲವು ನಟಿಯರ ಜತೆ ಡೇಟಿಂಗ್, ಸುತ್ತಾಟ, ಲಿವ್ ಇನ್ ರಿಲೇಶನ್ಶಿಪ್ ನಲ್ಲಿದ್ದರು. ಹಾಗೆ, ಸಲ್ಮಾನ್ ಖಾನ್ ಸಂಬಂಧ ಹೊಂದಿರುವ ಹಲವು ನಟಿಯರ ಪೈಕಿ ನಟಿ ಸೋಮಿ ಅಲಿ ಕೂಡಾ ಒಬ್ಬರು. ಇನ್ನು, ತಮ್ಮ ಸಿನಿಮಾಗಳಿಗೆ ಅಲ್ಲದೇ ಬದಲಿಗೆ ಸಲ್ಮಾನ್ ಖಾನ್ ಜತೆ ಸುತ್ತಾಟ ನಡೆಸಿರುವ ಕಾರಣ ಈ ನಟಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಇನ್ನು, ಕೆಲ ವರ್ಷಗಳಿಂದ ನಟಿ ಸೋಮಿ ಅಲಿ ಅವರು ಬಾಲಿವುಡ್ನಿಂದ ತುಂಬ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿತ್ತು. ಹೌದು, ಸಿನಿಮಾ ಮತ್ತು ಎಲ್ಲವನ್ನೂ ಬಿಟ್ಟ ನಟಿ ತಮ್ಮದೇ ಒಂದು ಎನ್ಜಿಒ ಆರಂಭಿಸಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ. ಹೀಗಿದ್ದರೂ, ನಟಿ ಸೋಮಿ ಅಲಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಇದಕ್ಕೆ ಕಾರಣ, ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ನಟಿ ಒಂದು ನಿಗೂಢ ಅರ್ಥದ ಪೋಸ್ಟ್ ಮಾಡಿದ್ದಾರೆ.