ಸದ್ಯ, ಇವರಿಬ್ಬರು ಸಿನಿಮಾ ಮಾಡುವ ಸುದ್ದಿ ಟಾಲಿವುಡ್ನಲ್ಲಿ ಹರಿದಾಡುತ್ತಾ ಇದೆ. ಬಾಕ್ಸಾಫಿಸ್ ಲೂಟಿ ಮಾಡುವ ಸ್ಟೈಲಿಶ್ ಸ್ಟಾರ್ ಜತೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಧನುಷ್ ಅವರು ಟಾಲಿವುಡ್ನ ಖ್ಯಾತ ನಿರ್ದೇಶಕರಾದ ಕೊರಟಾಲ ಶಿವ ಅವರ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈಗಾಗಲೇ, ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರ ಈ ಮುಂಬರುವ ಸಿನಿಮಾಗೆ ಇನ್ನು ಟೈಟಲ್ ಇಟ್ಟಿಲ್ಲವಂತೆ. ಇನ್ನು, ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಇಬ್ಬರು ನಟರ ಅಭಿಮಾನಿ ಬಳಗ ಮಾತ್ರ ಸ್ಟಾರ್ ನಟರು ಒಟ್ಟಿಗೆ ಸಿನಿಮಾ ಮಾಡಲಿ ಹಾಗೂ ಈ ಗುಸು ಗುಸು ಸುದ್ದಿ ನಿಜ ಆಗಲಿ ಎಂದು ಹಾತೊರೆಯುತ್ತಿದ್ದಾರೆ.