More

    ಕಾದು ಕಾದು ಸುಸ್ತಾಗಿದ್ದ ಫ್ಯಾನ್ಸ್​​ಗೆ ಸಖತ್​ ಸರ್ಪ್ರೈಸ್​ ಕೊಡಲು ಗಣೇಶ್​ ರೆಡಿ..

    ಲಾಕ್​ಡೌನ್​ ಶುರುವಾದ ಮೇಲಿಂದ ‘ಗೋಲ್ಡನ್ ಸ್ಟಾರ್’ ಗಣೇಶ್​ ಅಭಿಮಾನಿಗಳು ಬೇಸರಿಸಿಕೊಂಡಿದ್ದೇ ಹೆಚ್ಚು. ನೆಚ್ಚಿನ ನಟನಿಂದ ಸಿನಿಮಾ ವಿಚಾರವಾಗಿ ಏನಾದರೂ ಅಪ್​ಡೇಟ್ ಬರುತ್ತದೆ ಎಂದು ಫ್ಯಾನ್ಸ್ ಕಾದಿದ್ದೇ ಬಂತು. ಆದರೆ, ಅವರ ಯಾವ ಸಿನಿಮಾ ತಂಡದಿಂದ ಏನು ನಡೆಯುತ್ತಿದೆ ಎಂಬ ಮಾಹಿತಿಯೂ ಹೊರಬಿದ್ದಿರಲಿಲ್ಲ. ಇದೀಗ ಅದೆಲ್ಲದಕ್ಕೂ ಉತ್ತರ ಎಂಬಂತೆ ‘ಸಖತ್​’ ಸಿನಿಮಾ ತಂಡ, ಗಣೇಶ್​ ಫ್ಯಾನ್ಸ್​ಗೆ ಸರ್ಪ್ರೈಸ್​ ನೀಡಲು ಮುಂದೆ ಬಂದಿದೆ.

    ಇದನ್ನೂ ಓದಿ: ಸುದೀಪ್​ ಆಯ್ತು ಈಗ ದರ್ಶನ್​ ಸರದಿ: ದಚ್ಚು ವಾಸವಿರೋ ಅಪಾರ್ಟ್​ಮೆಂಟ್​ನಲ್ಲಿ ಕರೊನಾ ಪತ್ತೆ

    ಏನದು ಉಡುಗೊರೆ? ಹೌದು, ಜುಲೈ 2ಕ್ಕೆ ‘ಗೋಲ್ಡನ್ ಸ್ಟಾರ್’ ಗಣೇಶ್​ ಜನ್ಮದಿನ. ಆವತ್ತು ಸಿಂಪಲ್​ ಸುನಿ ನಿರ್ದೇಶನದ ‘ಸಖತ​’ ಚಿತ್ರದ ಮೋಷನ್​ ಪೋಸ್ಟರ್ ಬಿಡುಗಡೆ ಆಗಲಿದೆ. ಈ ಖುಷಿಯ ವಿಚಾರವನ್ನು ಸ್ವತಃ ಸುನಿ ಟ್ವಿಟ್ ಮಾಡಿಕೊಂಡಿದ್ದು, ‘ಜುಲೈ2 ರಂದು ‘ಗೋಲ್ಡನ್ ಸ್ಟಾರ್ ಗಣೇಶ್’ ರವರ ಹುಟ್ಟುಹಬ್ಬದ ಪ್ರಯುಕ್ತ ‘ಸಖತ್’ ಚಿತ್ರದ #Rap ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಗುತ್ತದೆ. ಅಭಿಮಾನಿಗಳು ಜೊತೆಗಿರಬೇಕಾಗಿ ವಿನಂತಿ’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ವಿಜಯ್​ಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿದ ಕೀರ್ತಿ!

    ಇನ್ನು ಈಗಾಗಲೇ ಲಾಕ್​ಡೌನ್​ ಹೊತ್ತಲ್ಲೇ ಸಂಗೀತದ ಕೆಲಸಗಳನ್ನು ಮುಗಿಸಿಕೊಂಡಿರುವ ನಿರ್ದೇಶಕ ಸುನಿ ಮತ್ತು ಜೂಡಾ ಸ್ಯಾಂಡಿ, ಶೂಟಿಂಗ್​ಗೆ ಅನುಮತಿಗಾಗಿ ಕಾಯುತ್ತಿದ್ದಾರೆ. ಇನ್ನು ಕೆವಿಎನ್​ ಮತ್ತು ಸುಪ್ರಿತ್​ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಸೌತ್​ ಚೆಲುವೆ ಸುರಭಿ ಮೊದಲ ಬಾರಿ ಸಖತ್​ ಮೂಲಕ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಸಂತೋಷ್​ ರೈ ಪಾತಾಜೆ ಛಾಯಾಗ್ರಹಣ ಮಾಡಲಿದ್ದಾರೆ.

    ಕೊನೆಗೂ ಅಭಿಮಾನಿಗಳ ಆಸೆ ಈಡೇರಿಸಿದ ಯಶ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts