More

    ವಿಜಯ್​ಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿದ ಕೀರ್ತಿ!

    ಕಾಲಿವುಡ್​ನ ಟಾಪ್​ ಹೀರೋ ವಿಜಯ್​, ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಹಿತೈಷಿಗಳಷ್ಟೇ ಅಲ್ಲ, ಚಿತ್ರರಂಗದ ಹಲವು ಜನಪ್ರಿಯ ಸೆಲೆಬ್ರಿಟಿಗಳು ತಮ್ಮದೇ ರೀತಿಯಲ್ಲಿ ಶುಭ ಕೋರಿದ್ದಾರೆ.

    ಇದನ್ನೂ ಓದಿ: ಸುಶಾಂತ್ ವ್ಯಕ್ತಿತ್ವ ಎಂಥದ್ದು ಎನ್ನುವುದಕ್ಕೆ ಲಾರೆನ್ ಗಾಟ್ಲೀಬ್ ನಡುವಿನ ವಾಟ್ಸ್​ಆ್ಯಪ್ ಚಾಟ್​ ಸಾಕ್ಷಿ

    ಈ ಪೈಕಿ ಸಿಕ್ಕಾಪಟ್ಟೆ ವೈರಲ್​ ಆಗಿರುವುದು ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್​ ಅವರ ಶುಭಾಶಯ. ಒಳ್ಳೆಯ ನಟಿಯಷ್ಟೇ ಅಲ್ಲ, ಸಂಗೀತದಲ್ಲೂ ಸಾಕಷ್ಟು ಸಾಧನೆ ಮಾಡಿರುವ ಕೀರ್ತಿ, ವಿಜಯ್​ ಅವರ ಹುಟ್ಟುಹಬ್ಬಕ್ಕೆ ಪಿಟೀಲು ನುಡಿಸುವ ಮೂಲಕ ಶುಭ ಕೋರಿದ್ದಾರೆ. ವಿಜಯ್​ ಅಭಿನಯ್ ಮಾಸ್ಟರ್​ ಚಿತ್ರದ ಹಾಡೊಂದನ್ನು ನುಡಿಸುವ ಮೂಲಕ ಕೀರ್ತಿ ಶುಭ ಕೋರಿದ್ದಾರೆ. ಒಂದೂವರೆ ನಿಮಿಷದ ಈ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವುದರ ಜತೆಗೆ, ಲೈಫ್​ ಈಸ್​ ವೆರಿ ಶಾರ್ಟ್​​ ನನ್ಬಾ, ಆಲ್ವೇಸ್​ ಬೀ ಹ್ಯಾಪಿ ಎಂದು ಹೇಳಿದ್ದಾರೆ.

    ಕೀರ್ತಿ ಅವರೇ ಹೇಳಿಕೊಂಡಂತೆ, ಅವರು ಬಾಲ್ಯದಿಂದಲೂ ವಿಜಯ್​ ಅವರ ದೊಡ್ಡ ಅಭಿಮಾನಿಯಂತೆ. ಅಷ್ಟೇ ಅಲ್ಲ, ಅವರ ಜತೆಗೆ ಭೈರವ ಮತ್ತು ಸರ್ಕಾರ್​ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಾಗಾಗಿ ವಿಜಯ್​ ಅವರ 46ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ತಮ್ಮ ಮೆಚ್ಚಿನ ನಟನಿಗೆ ವಿಶೇಷ ರೀತಿಯಲ್ಲಿ ಶುಭ ಕೋರಿದ್ದಾರೆ ಕೀರ್ತಿ.

    ಇದನ್ನೂ ಓದಿ: ಬಿಹಾರದಲ್ಲಿ ಸಲ್ಮಾನ್ ಸಿನಿಮಾ ಬ್ಯಾನ್​? ಸಿಡಿದೆದ್ದ ಸುಶಾಂತ್​ ಅಭಿಮಾನಿಗಳು

    ಇನ್ನು ವಿಜಯ್​ ಅವರ ಈ ಹುಟ್ಟುಹಬ್ಬಕ್ಕೆ ಅವರ ಬಹುನಿರೀಕ್ಷಿತ ಚಿತ್ರವಾದ ಮಾಸ್ಟರ್​ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ವಿಜಯ್​ ಅವರ ಅಭಿಮಾನಿಗಳು ಸಹ, ಚಿತ್ರಕ್ಕೆ ಕುತೂಹಲದಿಂದ ಕಾಯುತ್ತಿದ್ದರು. ಆದರೆ, ವೈರಸ್​ ಹರಡುವ ಭಯದಿಂದ, ಕೇಂದ್ರ ಸರ್ಕಾರವು ಚಿತ್ರಪ್ರದರ್ಶನಕ್ಕೆ ಬ್ರೇಕ್​ ಹಾಕಿರುವುದರಿಂದ, ವಿಜಯ್​ ಹುಟ್ಟುಹಬ್ಬಕ್ಕೆ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ.

    ಸುದೀಪ್​ ಆಯ್ತು ಈಗ ದರ್ಶನ್​ ಸರದಿ: ದಚ್ಚು ವಾಸವಿರೋ ಅಪಾರ್ಟ್​ಮೆಂಟ್​ನಲ್ಲಿ ಕರೊನಾ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts