

ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟರಿಗೂ ಇದೀಗ ಕರೊನಾ ಭಯ ಆವರಿಸಿದೆ. ನಿನ್ನೆಯಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಕ್ಕದ ಮನೆಯಲ್ಲೇ ಸೋಂಕು ಪತ್ತೆಯಾಗಿತ್ತು. ಇದೀಗ ದರ್ಶನ್ ವಾಸವಿರುವ ಅಪಾರ್ಟ್ಮೆಂಟ್ನಲ್ಲಿ ಕರೊನಾ ಪಾಸಿಟಿವ್ ವರದಿಯಾಗಿದೆ.
ಹೊಸಕರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಸಾಕಷ್ಟು ವರ್ಷದಿಂದ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ವಾಸವಿದ್ದಾರೆ. ಇದೀಗ ಕರೊನಾ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸುಶಾಂತ್ ವ್ಯಕ್ತಿತ್ವ ಎಂಥದ್ದು ಎನ್ನುವುದಕ್ಕೆ ಲಾರೆನ್ ಗಾಟ್ಲೀಬ್ ನಡುವಿನ ವಾಟ್ಸ್ಆ್ಯಪ್ ಚಾಟ್ ಸಾಕ್ಷಿ
ಇದೇ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ನಟ ರವಿಶಂಕರ್ ಗೌಡ ಕೂಡ ವಾಸವಿದ್ದಾರೆ. ನಟಿ ಪೂಜಾಗಾಂದಿ ಕೂಡ ಅಪಾರ್ಟ್ಮೆಂಟ್ನಲ್ಲಿ ಮನೆ ಹೊಂದಿದ್ದಾರೆ.
ನಿನ್ನೆಯಷ್ಟೇ ಜೆಪಿ ನಗರದ ಸುದೀಪ್ ಮನೆ ಪಕ್ಕದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿತ್ತು. ಇದುವರೆಗೂ ದಕ್ಷಿಣ ವಲಯದಲ್ಲಿ 209 ಕೇಸ್ಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಸುದೀಪ್ ಮನೆ, ರವಿಶಂಕರ್ ಗೌಡ, ವಿಜಯಲಕ್ಷ್ಮೀ ದರ್ಶನ್ ಮನೆ ಕೂಡ ಇಲ್ಲೆ ಇವೆ. (ದಿಗ್ವಿಜಯ ನ್ಯೂಸ್) ಇದನ್ನೂ ಓದಿ: ಫೇಸ್ಬುಕ್ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದವನ ಧರ್ಮಸಂಕಟ ಹೇಳ ತೀರದು…!