ಫೇಸ್​ಬುಕ್​ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದವನ ಧರ್ಮಸಂಕಟ ಹೇಳ ತೀರದು...!

Facebook
Published on

ಬೆಂಗಳೂರು: ಫೇಸ್​ಬುಕ್​ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದ್ದ ವ್ಯಕ್ತಿಯೊಬ್ಬ, ವ್ಯಾಟ್ಸ್​ಆಪ್ ವಿಡಿಯೋ ಕರೆ ಮಾಡಿ ಪೇಚಿಗೆ ಸಿಲುಕಿದ್ದಾನೆ. ನಗ್ನವಾಗಿ ಮಾತನಾಡಿರುವ ವಿಡಿಯೋ ಕರೆಯ ದೃಶ್ಯಗಳನ್ನು ಇಟ್ಟುಕೊಂಡ ಮಹಿಳೆ ಹಣಕ್ಕಾಗಿ ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದು, ಇದೀಗ ಸಂತ್ರಸ್ತ ವ್ಯಕ್ತಿ ಪೊಲೀಸರ ಮೊರೆ ಹೋಗಿದಾನೆ.

ಸುಲ್ತಾನ್​ಪಾಳ್ಯ ನಿವಾಸಿ 32 ವರ್ಷದ ವ್ಯಕ್ತಿ ನೀಡಿರುವ ದೂರಿನ ಅನ್ವಯ ಅಪರಿಚಿತ ಮಹಿಳೆ ವಿರುದ್ಧ ಉತ್ತರ ವಿಭಾಗ ಸೈಬರ್ ಕ್ರೖೆಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪುತ್ರನನ್ನು ಕಾರಿನಲ್ಲಿ ಕೂರಿಸಿ ಪತ್ನಿಯ ಹತ್ಯೆ: ಟೆಕ್ಕಿ ಕೃತ್ಯದ ಸ್ಪೋಟಕ ಮಾಹಿತಿ ತನಿಖೆಯಲ್ಲಿ ಬಹಿರಂಗ

ಸಂತ್ರಸ್ತ ವ್ಯಕ್ತಿ ಫೇಸ್​ಬುಕ್ ಖಾತೆ ಹೊಂದಿದ್ದು, ಕೆಲ ದಿನಗಳ ಹಿಂದೆ 30 ವರ್ಷದ ಮಹಿಳೆ ಸ್ನೇಹ ಬೆಳೆಸಿ ಫೋನ್ ನಂಬರ್ ಪಡೆದಿದ್ದಳು. ಪ್ರತಿನಿತ್ಯ ಚಾಟಿಂಗ್ ಮಾಡುತ್ತಿದ್ದಳು. ಜೂ.19ರ ಬೆಳಗ್ಗೆ 11 ಗಂಟೆಯಲ್ಲಿ ವ್ಯಕ್ತಿಗೆ ವ್ಯಾಟ್ಸ್​ಆಪ್ ವಿಡಿಯೋ ಕರೆ ಮಾಡಿದ ಆಕೆ ನಗ್ನವಾಗಿ ಕಾಣಿಸಿದ್ದಾಳೆ. ಆಕೆಯ ಕೋರಿಕೆಯಂತೆ ಸಂತ್ರಸ್ತ ವ್ಯಕ್ತಿ ಕೂಡ ನಗ್ನವಾಗಿ ಕಾಣಿಸಿಕೊಂಡಿದಾನೆ. ಈ ವೇಳೆ ಆಕೆ, ವಿಡಿಯೋವನ್ನು ತನ್ನ ಮೊಬೈಲ್​ನಲ್ಲಿ ಶೇಖರಿಸಿಕೊಂಡಿದ್ದಾಳೆ. ಕೆಲ ಹೊತ್ತಿನ ನಂತರ ಮತ್ತೆ ಫೋನ್ ಮಾಡಿದ್ದ ಆಕೆ, ವ್ಯಾಟ್ಸ್​ಆಪ್ ಕರೆಗಳ ಖಾಸಗಿ

ವಿಡಿಯೋಗಳಿವೆ. ಹಣ ಕೊಡದಿದ್ದರೆ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾಳೆ. ಅದಕ್ಕೆ ಹೆದರಿದ ಸಂತ್ರಸ್ತ ವ್ಯಕ್ತಿ ಆಕೆಯ ಖಾತೆಗೆ 10 ಸಾವಿರ ರೂ. ಜಮೆ ಮಾಡಿದ್ದ. ಮತ್ತೆ ಹಣ ಕಳುಹಿಸುವಂತೆ ಬೆದರಿಸಿದಾಗ ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಇದನ್ನೂ ಓದಿ: ಬಿಹಾರದಲ್ಲಿ ಸಲ್ಮಾನ್ ಸಿನಿಮಾ ಬ್ಯಾನ್​? ಸಿಡಿದೆದ್ದ ಸುಶಾಂತ್​ ಅಭಿಮಾನಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net