More

    ಆನ್​ಲೈನ್​ನಲ್ಲಿ ಬಿಕಿನಿ ಫೋಟೋ ಪೋಸ್ಟ್​ ಮಾಡಿದ ಬೆನ್ನಲ್ಲೇ ಹೆಣವಾದ ಸಲಿಂಗಿ ಜೋಡಿ…!

    ಬ್ಯಾಂಕಾಕ್​: ಸಲಿಂಗಿ ಜೋಡಿಯೊಂದು ಪರಸ್ಪರ ಚಾಕು ಇರಿದುಕೊಂಡು ಸಾವಿಗೀಡಾಗಿರುವ ಘಟನೆ ಥಾಯ್ಲೆಂಡ್​ನ ಪ್ರವಾಸಿ ಕೇಂದ್ರಬಿಂದುವಿನ ಹೋಟೆಲ್​ ಒಂದರ ಕೋಣೆಯಲ್ಲಿ ನಡೆದಿದೆ.

    ಮೃತರನ್ನು ರಾಟ್ರೀ ಸ್ರಿವಿಬೂನ್​ (24) ಮತ್ತು ಪ್ಯಾಟ್​ಸನಾನ್​ ಚನ್​ಪ್ರಪಾತ್​ (29) ಎಂದು ಗುರುತಿಸಲಾಗಿದೆ. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಿಂದ 100 ಕಿ.ಮೀ ದೂರದಲ್ಲಿರುವ ಟೂರಿಸ್ಟ್​ ಹಾಟ್​​ಸ್ಪಾಟ್​ ಪಟ್ಟಾಯದಲ್ಲಿನ ಸಮುದ್ರ ತೀರದ ರೆಸಾರ್ಟ್​ನಲ್ಲಿರುವ ಹೋಟೆಲ್​ ರೂಮ್​ನಲ್ಲಿ ಇಬ್ಬರ ಶವಗಳು ಭಾನುವಾರ ಪತ್ತೆಯಾಗಿವೆ. ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!

    ಕುಟಂಬ ಸದಸ್ಯರು ರೂಮ್​ ಬಾಗಿಲು ತೆಗೆದು ನೋಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ಯಾಟ್​ಸನಾನ್​ಗೆ ಕುತ್ತಿಗೆ ಹಾಗೂ ಮುಂಡದಲ್ಲಿ ಚಾಕುವಿನಿಂದ ಇರಿದ ಗಾಯಗಳಾಗಿದ್ದರೆ, ರಾಟ್ರೀಗೆ ಕುತ್ತಿಗೆ ಮತ್ತು ಎಡಭಾಗದ ಪಕ್ಕೆಲುಬುವಿನಲ್ಲಿ ಗಂಭೀರ ಗಾಯಗಳಾಗಿವೆ.

    ಇಬ್ಬರು ಸಾಯುವ ಕೆಲ ಗಂಟೆಗಳ ಮುನ್ನ ರಾಟ್ರೀ ಆನ್​ಲೈನ್​ನಲ್ಲಿ ಪೋಸ್ಟ್​ ಮಾಡಿದ ಫೋಟೋ ಬಗ್ಗೆ ಇಬ್ಬರು ನಡುವೆ ವಾಗ್ವಾದ ನಡೆದಿತ್ತು ಎಂದು ತಿಳಿದುಬಂದಿದೆ. ಅಂದಹಾಗೆ ರಾಟ್ರೀ ಸ್ವಿಮ್ಮಿಂಗ್​ ಪೂಲ್​ ಅಂಚಿನಲ್ಲಿ ಕುಳಿತು ಹಸಿರು ಬಣ್ಣದ ಬಿಕಿನಿಯಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನು ಪೋಸ್ಟ್​ ಮಾಡಿದ್ದರು. ಇದನ್ನೂ ಓದಿ: VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್​!

    ರಾತ್ರಿಯಷ್ಟೇ ಕುಟುಂಬದ ಜತೆಗೆ ಸಂತೋಷದಿಂದ ಸಮಯ ಕಳೆದಿದ್ದ ಸಲಿಂಗಿ ಜೋಡಿ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದನ್ನು ನೋಡಿ ಕುಟುಂಬಸ್ಥರು ಶಾಕ್​ ಆಗಿದ್ದಾರೆ. ಪಾರ್ಟಿ ವೇಳೆ ಎಲ್ಲವೂ ಸರಿಯಾಗಿತ್ತಂತೆ. ಇಬ್ಬರ ಸಂಬಂಧವೂ ಚೆನ್ನಾಗಿತ್ತು. ಆದರೆ, ನನ್ನ ಸಹೋದರಿಯ ಗರ್ಲ್​ಫ್ರೆಂಡ್​ ಸ್ವಲ್ಪ ಹೊಟ್ಟೆಕಿಚ್ಚಿನ ಸ್ವಭಾವದವಳಾಗಿದ್ದಳು ಎಂದು ರಾಟ್ರೀ ಸಹೋದರ ಪೈರೋಜ್​ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಮರ್ಯಾದೆ ಹತ್ಯೆ ಆಧಾರಿತ ಚಿತ್ರವನ್ನು ಬೇರೆ ರೀತಿ ಬಿಂಬಿಸಲು ಹೊರಟ ಆರ್​ಜಿವಿ ವಿರುದ್ಧ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts