More

    ಪುತ್ರನನ್ನು ಕಾರಿನಲ್ಲಿ ಕೂರಿಸಿ ಪತ್ನಿಯ ಹತ್ಯೆ: ಟೆಕ್ಕಿ ಕೃತ್ಯದ ಸ್ಪೋಟಕ ಮಾಹಿತಿ ತನಿಖೆಯಲ್ಲಿ ಬಹಿರಂಗ

    ಬೆಂಗಳೂರು/ಕೆ.ಆರ್.ಪುರ: ಮಹದೇವಪುರ ಸಮೀಪದ ಮೆಟ್ರೋ ಪೊಲಿಸ್ ಅಪಾರ್ಟ್​ವೆುಂಟ್​ನಲ್ಲಿ ಕೋಲ್ಕತಾ ಮೂಲದ ಟೆಕ್ಕಿ ತನ್ನ ಪತ್ನಿ ಶಿಲ್ಪಾ(40)ಳನ್ನು ಉಸಿರು ಗಟ್ಟಿಸಿ ಹತ್ಯೆ ಮಾಡುವಾಗ ತನ್ನ 10 ವರ್ಷದ ಪುತ್ರನನ್ನು ಕಾರಿನಲ್ಲಿ ಕೂರಿಸಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    15 ವರ್ಷಗಳ ಹಿಂದೆ ಪಶ್ಚಿಮ ಬಂಗಾಳ ಮೂಲದ ಶಿಲ್ಪಾ ಮತ್ತು ಆರೋಪಿ ಅಮಿತ್ ಅಗರ್​ವಾಲ್ ಮದುವೆ ಆಗಿದ್ದರು. ಅಮಿತ್ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದು, ಶಿಲ್ಪಾ ಲೆಕ್ಕಪರಿಶೋಧಕಿ. ಅಪಾರ್ಟ್​ವೆುಂಟ್ ನಿವಾಸಿಗಳ ಪ್ರಕಾರ ಶಿಲ್ಪಾ ತನ್ನ ಪುತ್ರನ ಜತೆ ವಾಸಿಸುತ್ತಿದ್ದರು. ಅಮಿತ್ ಆಗಾಗ ಬಂದು ಹೋಗುತ್ತಿದ್ದ. ಇವರಿಗೆ ಬೆಂಗಳೂರಿನಲ್ಲಿ ಸ್ನೇಹಿತರು ಮತ್ತು ಸಂಬಂಧಿಕರಿರುವ ಮಾಹಿತಿ ಲಭ್ಯವಾಗಿಲ್ಲ ಎಂದು ವೈಟ್​ಫೀಲ್ಡ್ ವಿಭಾಗ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ 19: ಖಾಸಗಿ ಚಿಕಿತ್ಸೆಗೆ ರೇಟ್ ಫಿಕ್ಸ್

    ಕೋಲ್ಕತಾ ಪೊಲೀಸರು ಕೊಟ್ಟ ಮಾಹಿತಿ ಮೇರೆಗೆ ಸೋಮವಾರ ರಾತ್ರಿ ಫ್ಲ್ಯಾಟ್​ಗೆ ಬಂದು ನೋಡಿದಾಗ ಅಡುಗೆ ಮನೆಯಲ್ಲಿ ಕುಳಿತಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈಗಾಗಲೇ ಶಿಲ್ಪಾ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಆಕೆ ಸಹೋದರ ಮತ್ತು ತಂದೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲು ಕೋವಿಡ್-19 ಪರೀಕ್ಷೆ ನಡೆಸಿ ಆ ನಂತರ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಶವವನ್ನು ಹಸ್ತಾಂತರ ಮಾಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುವ ಸಲುವಾಗಿ ಕೋಲ್ಕತಾಗೆ ವಿಶೇಷ ತಂಡ ತೆರಳಲಿದೆ ಎಂದು ಡಿಸಿಪಿ ಹೇಳಿದ್ದಾರೆ.

    ಭಾನುವಾರ ರಾತ್ರಿ ಫ್ಲ್ಯಾಟ್​ಗೆ ಬಂದಿದ್ದ ಅಮಿತ್, ಹೊರಗೆ- ಒಳಗೆ ಓಡಾಡುತ್ತಿದ್ದ. ರಾತ್ರಿ 10 ಗಂಟೆಯಲ್ಲಿ ಮಗನನ್ನು ಕರೆತಂದು ಕಾರಿನಲ್ಲಿ ಕೂರಿಸಿ ನಂತರ ಮತ್ತೆ ಫ್ಲ್ಯಾಟ್​ಗೆ ಹೋಗಿ ಸ್ವಲ್ಪ ಸಮಯದ ಬಳಿಕ ವಾಪಸ್ ಆಗಿದ್ದಾನೆ. ಈ ಸಮಯದಲ್ಲಿ ಪತ್ನಿಯನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ. ಈ ಎಲ್ಲ ದೃಶ್ಯ ಅಪಾರ್ಟ್​ವೆುಂಟ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಅನುಚೇತ್ ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಐಸಿಸ್ ಬೇರು; ಉಗ್ರ ಕೃತ್ಯಕ್ಕೆ ನಕಲಿ ಸಿಮ್ ಬಳಕೆ

    ಕೋಲ್ಕತಾಕ್ಕೆ ತೆರಳಿ ಅತ್ತೆ ಕೊಲೆ

    ರಾತ್ರಿ 10 ಗಂಟೆಯಲ್ಲಿ ಅಪಾರ್ಟ್​ವೆುಂಟ್​ನಿಂದ ಕಾರಿನಲ್ಲಿ ಹೊರಟ ಅಮಿತ್ ಮತ್ತು ಆತನ ಪುತ್ರ ವಿಮಾನದಲ್ಲಿ ಕೋಲ್ಕತ್ತಾಗೆ ತೆರಳಿದ್ದಾರೆ. ಅಲ್ಲಿ ಅತ್ತೆ-ಮಾವನ ಜತೆ ಜಗಳವಾಡಿ ಅತ್ತೆಯ ಮೇಲೆ ರಿವಾಲ್ವರ್​ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಆ ವೇಳೆ ಪುತ್ರ ಎಲ್ಲಿದ್ದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅತ್ತೆ ಕೊಂದ ಮೇಲೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಮಿತ್​ನ ಜೇಬಿನಲ್ಲಿ ಮರಣಪತ್ರವಿತ್ತು. ಅದರಲ್ಲಿ ಬೆಂಗಳೂರಿನಲ್ಲಿ ಪತ್ನಿಯನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಉಲ್ಲೇಖಿಸಿದ್ದಾನೆ. ಉಳಿದ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ ತೆರೆಯಲು ಮುಂದಾದ ಯುವತಿಯರಿಗೆ ಕಾದಿತ್ತು ಭಾರಿ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts