ದಕ್ಷಿಣ ಭಾರತದಲ್ಲಿ ಐಸಿಸ್ ಬೇರು; ಉಗ್ರ ಕೃತ್ಯಕ್ಕೆ ನಕಲಿ ಸಿಮ್ ಬಳಕೆ

ISIS
Published on

ಬೆಂಗಳೂರು: ದಕ್ಷಿಣ ಭಾರತದಲ್ಲಿ ಐಸಿಸ್ ಬೇರುಗಳನ್ನು ಬಲಪಡಿಸುವ ಮೂಲಕ ಉಗ್ರ ಕೃತ್ಯವೆಸಗಲು ಸಂಚು ರೂಪಿಸಿದ್ದ ಶಂಕಿತ ಉಗ್ರರು, ಸಂಪರ್ಕ ಜಾಲಕ್ಕಾಗಿ ನಕಲಿ ಸಿಮ್ಳನ್ನು ಖರೀದಿಸಿ ಏರ್ಪಡಿಸಿಕೊಂಡಿದ್ದ ವಿಚಾರ ಎನ್​ಐಎ ತನಿಖೆಯಿಂದ ಬಯಲಾಗಿದೆ.

ಐಸಿಸ್ ಉಗ್ರ ಚಟುವಟಿಕೆ ನಡೆಸಲು ಅಕ್ರಮವಾಗಿ ಸಿಮ್ ಕಾರ್ಡ್ ಪಡೆದಿದ್ದ ಪ್ರಕರಣದಲ್ಲಿ ಬೆಂಗಳೂರಿನ 6 ಮಂದಿ ಸೇರಿ 11 ಜನರ ವಿರುದ್ಧ ಎನ್​ಐಎ ತಂಡ ಚೆನ್ನೈನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ತಮಿಳುನಾಡಿನ ಕಾಂಚೀಪುರದ ಪಚ್ಚಯ್ಯಪ್ಪನ್ (37), ಚೆನ್ನೈನ ಎ.ರಾಜೇಶ, (34) ಸೇಲಂನ ಟಿ. ಅನ್ಬರಸನ್ (27), ಅಬ್ದುಲ್ ರಹಿಮಾನ್ (44), ಲಿಯಾಕತ್ ಅಲಿ (29), ಬೆಂಗಳೂರಿನ ಮೋಹಮ್ಮದ್ ಹನೀಫ್ ಖಾನ್ (29), ಇಮ್ರಾನ್ ಖಾನ್ (32), ಮಹಮ್ಮದ್ ಜಯಾದ್ (24), ಏಜಾಜ್ ಪಾಷ (46), ಹುಸೇನ್ ಶರೀಫ್ (33), ಮಹಬೂಬ್ ಪಾಷ (48) ಮತ್ತು ತಮಿಳುನಾಡಿನ ಕಡಲೂರಿನ ಮೆಹಬೂಬ್ ಪಾಷ (48) ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

ತಮಿಳುನಾಡಿನಲ್ಲಿ ಹಿಂದು ಮುಖಂಡರ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಐಸಿಸ್ ಉಗ್ರ ಖ್ವಾಜಾ ಮೋಹಿದ್ದೀನ್ 2019ರ ಫೆಬ್ರವರಿಯಲ್ಲಿ ಚೆನ್ನೈ ಜೈಲಿನಿಂದ ಬಿಡುಗಡೆಯಾಗಿದ್ದ. ನಂತರದ ದಿನಗಳಲ್ಲಿ ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ತೀವ್ರಗೊಳಿಸಲು ಲಿಯಾಕಕ್ ಅಲಿ ಎಂಬಾತನ ಜತೆ ಕೈ ಜೋಡಿಸಿದ್ದ ಎಂದು ಎನ್​ಐಎ ತಿಳಿಸಿದೆ. 2019ರ ಸೆಪ್ಟಂಬರ್​ನಿಂದ ಡಿಸೆಂಬರ್ ನಡುವೆ ಚೆನ್ನೈನ ಪಚ್ಚಯಪ್ಪನ್ ಹಾಗೂ ರಾಜೇಶ್ ಮತ್ತು ಅನ್ಬರಸನ್ ಹಾಗೂ ಅಬ್ದುಲ್ ರೆಹಮಾನ್ ಮೂಲಕ ಸೇಲಂನಲ್ಲಿ ನಕಲಿ ದಾಖಲೆಗಳನ್ನು ಕೊಟ್ಟು ಸಿಮ್ ಕಾರ್ಡ್​ಗಳನ್ನು ಪಡೆದುಕೊಂಡಿದ್ದರು ಎಂದು ಎಫ್​ಐಆರ್​ನಲ್ಲಿ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net