More

    ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?

    ನವದೆಹಲಿ: ತಂಟೆಕೋರ ಚೀನಾ ಇಡೀ ಜಗತ್ತಿಗೆ ಕರೊನಾ ವ್ಯಾಪಿಸಿ ತಾನು ಮಾತ್ರ ಆ ಸಂಕಷ್ಟದಿಂದ ಹೊರಬಂದಿದ್ದೇನೆ ಎಂದು ತೋರಿಸಿಕೊಳ್ಳುತ್ತಿದ್ದು, ಸದ್ಯ ಬೇರೆಯದ್ದೇ ಚಟುವಟಿಕೆಯಲ್ಲಿ ಭಾರಿ ಬ್ಯುಸಿಯಾಗಿದೆ.

    ಭಾರತದೊಂದಿಗೆ ಗಡಿ ತಂಟೆ ತೆಗೆದು ಅತ್ಯಂತ ಹಿಂಸಾತ್ಮಕ ಸಂಘರ್ಷ ನಡೆಸಿದ್ದಲ್ಲದೇ, ಭಾರತದ 20 ಯೋಧರ ಹತ್ಯೆಯನ್ನು ನಡೆಸಿದೆ. ಇಷ್ಟಕ್ಕೆ ಸುಮ್ಮನಾಗದೇ, ನಿರಂತರ ವ್ಯಾಜ್ಯದಲ್ಲಿ ತೊಡಗಿದೆ.

    ಇದನ್ನೂ ಓದಿ; ಪ್ರಧಾನಿಯನ್ನೇ ಟೀಕಿಸಿ, ಚೀನಿಯರ ಸುಳ್ಳು ಮೆಚ್ಚಿದ ಕಾಂಗ್ರೆಸ್​ ಸಂಸದ ಶಶಿ ತರೂರ್​?

    ಭಾರತದೊಂದಿಗೆ ಮಾತ್ರವಲ್ಲದೇ, ಜಪಾನ್​ ಹಾಗೂ ತೈವಾನ್​ ಗಡಿಯಲ್ಲೂ ಚೀನಾ ತಂಟೆ ನಡೆಸಿದೆ. ಇಲ್ಲಿಯೂ ಗಡಿಯನ್ನು ಬಂದ್​ ಮಾಡಲು ಮುಂದಾಗಿದೆ. ಹೀಗಾಗಿ ಚೀನಾಗೆ ಪಾಠ ಕಲಿಸಲೆಂದೇ ಜಪಾನ್​ ಕೂಡ ಗಡಿಯಲ್ಲಿ ಕ್ಷಿಪಣಿಗಳನ್ನು ನಿಯೋಜನೆಗೊಳಿಸಿದೆ. ಜತೆಗೆ ಸೇನಾ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ.

    ಚೀನಾದ ಯುದ್ಧೋನ್ಮಾದವನ್ನುನಿಗ್ರಹಿಸಲೆಂದೇ ಜಪಾನ್​ ತನ್ನ ವಾಯುಸೇನೆ ಸಾಮರ್ಥ್ಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ. ಪ್ಯಾಟ್ರಿಯಾಟ್​ ಪಿಎಸಿ-3 ವಾಯುದಾಳಿ ಕ್ಷಿಪಣಿಯನ್ನು ಜಪಾನ್​ನ ನಾಲ್ಕು ವಾಯುನೆಲೆಗಳಲ್ಲಿ ನಿಯೋಜಿಸಿದೆ. 70 ಕಿ.ಮೀ. ದಾಳಿ ಗುರಿ ಹೊಂದಿದ್ದ ಕ್ಷಿಪಣಿ ಸಾಮರ್ಥ್ಯವನ್ನು ಈಗ 100 ಕಿ.ಮೀ.ಗೆ ಹೆಚ್ಚಿಸಲಾಗಿದೆ.

    ಇದನ್ನೂ ಓದಿ; ಸಂಘರ್ಷದ ನಡುವೆಯೇ ಮಹೋನ್ನತ ಸಾಹಸ; 72 ತಾಸುಗಳಲ್ಲಿ ಗಾಲ್ವಾನ್​ ನದಿ ಸೇತುವೆ ಕಾಮಗಾರಿ ಪೂರ್ಣ

    ಇದಲ್ಲದೇ, ಕ್ಷಿಪಣಿ ಹಾಗೂ ಇತರ ಸಂಭಾವ್ಯ ದಾಳಿಯನ್ನು ಪತ್ತೆ ಹಚ್ಚಿ ಅದನ್ನು ನಿಗ್ರಹಿಸುವ ಕ್ಷಿಪಣಿ ನಿರೋಧ ವ್ಯವಸ್ಥೆಯನ್ನು ಜಪಾನ್​ ಗಡಿಯಲ್ಲಿ ನಿಯೋಜಿಸಿದೆ. ಒಟ್ಟಿನಲ್ಲಿ ತಂಟೆಕೋರ ಚೀನಾಗೆ ಬುದ್ಧಿ ಕಲಿಸಲು ಜಪಾನ್​ ಸಜ್ಜಾಗಿದೆ.

    ಕನಕಪುರದಲ್ಲಿ ಜುಲೈ 1ರವರೆಗೆ ಸ್ವಯಂಪ್ರೇರಿತ ಲಾಕ್​ಡೌನ್​; ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ನಿರ್ಣಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts