ರಾಹುಲ್​ ಗಾಂಧಿ ಹೊಗಳಿದ ಸೈಫ್​ ಅಲಿಖಾನ್! ಕಾರಣ ಕೇಳಿದ್ರೆ ಅಚ್ಚರಿ ಗ್ಯಾರಂಟಿ… Saif Ali Khan Praises Rahul Gandhi

Saif Ali Khan Praises Rahul Gandhi
Published on

ನವದೆಹಲಿ: ಇತ್ತೀಚೆಗಷ್ಟೇ ನಡೆದ ಇಂಡಿಯಾ ಟುಡೆ ಕಾಂಕ್ಲೇವ್​ ( India Today Conclave ) ನಲ್ಲಿ ಬಾಲಿವುಡ್​ ನಟ ಸೈಫ್​ ಅಲಿಖಾನ್ ( Saif Ali Khan )​, ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ( Rahul Gandhi )ಯನ್ನು ಮನಸಾರೆ ಕೊಂಡಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆಗೂ ಗ್ರಾಸವಾಗಿದೆ.

ಪ್ರಧಾನಿ ಮೋದಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹಾಗೂ ವಿಪಕ್ಷ ನಾಯಕ ರಾಹುಲ್​ ಗಾಂಧಿ ಹೆಸರನ್ನು ಹೇಳಿ ದೇಶದ ಧೈರ್ಯಶಾಲಿ ರಾಜಕಾರಣಿಯನ್ನು ಹೆಸರಿಸಿ ಎಂದು ಇಂಡಿಯಾ ಟುಡೇ ಕಾಂಕ್ಲೇವ್​ನ ನಿರೂಪಕರು, ಸೈಫ್​​ ಅಲಿಖಾನ್​ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಸೈಫ್​ ಅಲಿಖಾನ್​, ಮೂವರ ಹೆಸರನ್ನು ತೆಗೆದುಕೊಂಡರು. ಆದರೆ, ರಾಹುಲ್​ ಗಾಂಧಿಯನ್ನು ಹೆಚ್ಚಾಗಿ ಕೊಂಡಾಡಿದರು.

ಮೂವರು ಕೂಡ ಧೈರ್ಯಶಾಲಿ ರಾಜಕಾರಣಿಗಳು ಎಂದು ನಾನು ಭಾವಿಸುತ್ತೇನೆ. ಆದರೆ, ರಾಹುಲ್ ಗಾಂಧಿ ಅವರು ಏನು ಮಾಡಿದ್ದಾರೋ ಅದು ತುಂಬಾ ಪ್ರಭಾವ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ. ರಾಹುಲ್​ ಗಾಂಧಿ ಏನೇ ಹೇಳಿದರೂ ಮತ್ತು ಏನೇ ಮಾಡಿದರೂ ಅದನ್ನು ಟೀಕಿಸುತ್ತಿದ್ದ ಮತ್ತು ಅಗೌರವಿಸುತ್ತಿದ್ದ ಒಂದು ಸಮಯವಿತ್ತು. ಅದ್ಯಾವುದನ್ನು ಲೆಕ್ಕಿಸದೇ ತುಂಬಾ ಆಸಕ್ತಿಕರ ಮಾರ್ಗದಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ತಮ್ಮ ಮೇಲೆ ಜನರಿಗಿದ್ದ ಅಭಿಪ್ರಾಯವನ್ನು ರಾಹುಲ್​ ಬದಲಾಯಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಸೈಫ್​ ಅಲಿಖಾನ್​ ಹೇಳಿದರು.

ಕಾರ್ಯಕ್ರಮದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ರಾಹುಲ್ ಗಾಂಧಿಗೆ ಸ್ಟಾರ್ ನಟ ನೀಡಿದ ಬಹಿರಂಗ ಬೆಂಬಲ ಎಂದು ಬಿಂಬಿಸುತ್ತಿದ್ದಾರೆ. ಅಲ್ಲದೆ, ಇದೇ ವಿಡಿಯೋ ಪರ-ವಿರೋಧ ಚರ್ಚೆಗೂ ಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್​ ಅಭಿಮಾನಿಗಳ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ.

ಇದಕ್ಕೂ ಮೊದಲು ಮಾಜಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ತಮ್ಮ ಸಾಂಪ್ರದಾಯಿಕ ಎದುರಾಳಿ ರಾಹುಲ್ ಗಾಂಧಿ ಅವರ ಬದಲಾದ ನಾಯಕತ್ವವನ್ನು ಒಪ್ಪಿಕೊಂಡರು. ಪಾಡ್‌ಕಾಸ್ಟ್​ನಲ್ಲಿ ಮಾತನಾಡಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಅವರು ತಮ್ಮ ರಾಜಕೀಯದಲ್ಲಿ ಬದಲಾವಣೆಯನ್ನು ಅನುಭವಿಸಿದ್ದಾರೆ. ಅವರೀಗ ಯಶಸ್ಸನ್ನು ಗಳಿಸಿದ್ದಾರೆ ಎಂದರು. ಅಲ್ಲದೆ, ರಾಹುಲ್ ಗಾಂಧಿ ಈಗ ವಿಭಿನ್ನ ರೀತಿಯ ರಾಜಕೀಯವನ್ನು ಅನುಸರಿಸುತ್ತಿದ್ದಾರೆ ಎಂದರು.

ಸೈಫ್​ ಅಲಿಖಾನ್​ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ ಖಳನಾಯಕನಾಗಿ ನಟಿಸಿರುವ ಟಾಲಿವುಡ್​ನ ದೇವರ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಜೂ. ಎನ್​ಟಿಆರ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net