ಬಾಂಗ್ಲಾದೇಶದ ಪೋರ್ನ್​ ಸ್ಟಾರ್​ ರಿಯಾ ಬಾರ್ಡೆ ಭಾರತದಲ್ಲಿ ಅರೆಸ್ಟ್​: ಬಯಲಾಯ್ತು ಶಾಕಿಂಗ್​ ಸಂಗತಿ | Riya Barde

Riya barde
Published on

ಮುಂಬೈ: ಬಾಂಗ್ಲಾದೇಶದ ಪೋರ್ನ್​ ಸ್ಟಾರ್​ ರಿಯಾ ಬಾರ್ಡೆ ( Riya Barde ) ಅಲಿಯಾಸ್​ ಆರೋಹಿ ಬಾರ್ಡೆ ಎಂಬಾಕೆಯನ್ನು ಮಹಾರಾಷ್ಟ್ರದ ಥಾಣೆಯ ಅಪರಾಧ ವಿಭಾಗವು ಬಂಧಿಸಿದೆ.

ರಿಯಾ ಬಾರ್ಡೆ ಬಾಂಗ್ಲಾದೇಶದ ಪೋರ್ನ್ ಸ್ಟಾರ್​ ಆಗಿದ್ದು, ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದಲ್ಲಿ ಹಿಂದು ಹೆಸರಿನಲ್ಲಿ ವಾಸಿಸುತ್ತಿದ್ದಳು. ಈಕೆಯನ್ನು ಪೋರ್ನ್ ಇಂಡಸ್ಟ್ರಿಯಲ್ಲಿ ಬನ್ನಾ ಶೇಖ್ ಹಾಗೂ ಆರೋಹಿ ಬಾರ್ಡೆ ಎಂದು ಕರೆಯಲಾಗುತ್ತದೆ. ಸಿ ಗ್ರೇಡ್ ಸ್ಟಾರ್​ ಆಗಿರುವ ರಿಯಾ ಬಾರ್ಡೆ ನಕಲಿ ದಾಖಲೆಗಳ ಮೂಲಕ ಭಾರತದಲ್ಲಿ ತಂಗಿದ್ದ ಆರೋಪದ ಮೇಲೆ ಥಾಣೆಯ ಅಪರಾಧ ವಿಭಾಗದ ಅಧಿಕಾರಿಗಳು ಥಾಣೆಯ ಉಲ್ಲಾಸನಗರದಲ್ಲಿ ಬಂಧಿಸಿದೆ.

ರಿಯಾ ಬಾರ್ಡೆ ವಿರುದ್ಧ ಐಪಿಸಿ ಸೆಕ್ಷನ್ 420, 465, 468, 479, 34, 14ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಿಯಾ ಬಾಂಗ್ಲಾದೇಶಿ ಎಂಬ ಆರೋಪ ಕೇಳಿಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ, ತನ್ನ ತಾಯಿ, ಸಹೋದರ ಮತ್ತು ಸಹೋದರಿಯೊಂದಿಗೆ ಅಕ್ರಮವಾಗಿ ಭಾರತದಲ್ಲಿ ವಾಸವಿದ್ದರು. ಅಷ್ಟೇ ಅಲ್ಲ, ರಿಯಾಳ ತಾಯಿ ಬಾಂಗ್ಲಾದೇಶಿಯಾಗಿದ್ದರೂ, ಭಾರತೀಯ ದಾಖಲೆಗಳನ್ನು ಪಡೆಯಲು ಅಮರಾವತಿ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಪ್ರಸ್ತುತ, ರಿಯಾ ಜೊತೆಗೆ, ಆಕೆಯ ತಾಯಿ ಅಂಜಲಿ ಬಾರ್ಡೆ ಅಲಿಯಾಸ್ ರೂಬಿ ಶೇಖ್, ತಂದೆ ಅರವಿಂದ್ ಬಾರ್ಡೆ, ಸಹೋದರಿ ರಿತು ಅಲಿಯಾಸ್ ಮೋನಿ ಶೇಖ್ ಮತ್ತು ಸಹೋದರ ರವೀಂದ್ರ ಅಲಿಯಾಸ್ ರಿಯಾಜ್ ಶೇಖ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅವರ ಬಂಧನಕ್ಕೂ ಲುಕೌಟ್​ ನೋಟಿಸ್​ ಜಾರಿಯಾಗಿದೆ.

ಬಂಧನದ ನಂತರ ಪೊಲೀಸರು ಪತ್ರಿಕಾ ಹೇಳಿಕೆ ಹೊರಡಿಸಿದ್ದು, ಬಂಧಿತ ರಿಯಾ ಅನೇಕ ನಿರ್ಮಾಣ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಳು ಮತ್ತು ಅನೇಕ ಪೋರ್ನ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಪೋರ್ನ್ ಇಂಡಸ್ಟ್ರಿಯಲ್ಲಿ ಆಕೆಯ ಹೆಸರು ಆರೋಹಿ. ಇಡಿ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂಗ್ರಾಮ್ ಮಲ್ಕರ್, ರಿಯಾಳ ತಾಯಿ ಅಂಜಲಿ ಬಾಂಗ್ಲಾದೇಶಕ್ಕೆ ಸೇರಿದವರು ಎಂದು ಇದುವರೆಗೆ ನಡೆಸಿದ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಆಕೆ ರಿಯಾ ಸೇರಿದಂತೆ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನೊಂದಿಗೆ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಿಯಾಳ ತಾಯಿ ಪಶ್ಚಿಮ ಬಂಗಾಳದವಳು ಎಂದು ಹೇಳಿಕೊಂಡು ಅಮರಾವತಿ ನಿವಾಸಿ ಅರವಿಂದ್ ಬಾರ್ಡೆ ಎಂಬಾತನನ್ನು ಮದುವೆಯಾಗಿದ್ದಾರೆ. ಇದಾದ ನಂತರ ನಕಲಿ ಜನನ ಪ್ರಮಾಣಪತ್ರ ಸೇರಿದಂತೆ ಇತರೆ ನಕಲಿ ದಾಖಲೆಗಳನ್ನು ತನಗಾಗಿ ಮತ್ತು ತನ್ನ ಮಕ್ಕಳಿಗಾಗಿ ಮಾಡಿಸಿದಳು. ಪಾಸ್​ಪೋರ್ಟ್​ಗಳನ್ನು ಸಹ ಮಾಡಿಸಿದ್ದು, ರಿಯಾಳ ಪಾಲಕರು ಪ್ರಸ್ತುತ ಕತಾರ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.

ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಹಿಂದೆ ರಿಯಾಳನ್ನು ಪೊಲೀಸರು ಬಂಧಿಸಿದ್ದರು. ರಿಯಾ ಬಾಂಗ್ಲಾದೇಶಕ್ಕೆ ಸೇರಿದವಳು ಮತ್ತು ಅಕ್ರಮವಾಗಿ ದೇಶದಲ್ಲಿ ವಾಸಿಸುತ್ತಿದ್ದಾಳೆ ಎಂದು ರಿಯಾ ಸ್ನೇಹಿತ ಪ್ರಶಾಂತ್ ಮಿಶ್ರಾಗೆ ಮೊದಲು ತಿಳಿಯಿತು. ಇದಾದ ಬಳಿಕ ಈ ವಿಷಯ ಪೊಲೀಸರ ಗಮನಕ್ಕೆ ಬಂದಿದ್ದು, ದಾಖಲೆಗಳನ್ನು ಪರಿಶೀಲಿಸಿದಾಗ ಅಸಲಿ ಸಂಗತಿ ಹೊರಬಿದ್ದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net