ಕಲ್ಕತ್ತಾ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premiere League) ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ವಿಶ್ವದ ಮಿಲಿಯನ್ ಡಾಲರ್ ಟೂರ್ನಿಯು ಒಂದಿಲ್ಲೊಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. 2025ರಲ್ಲಿ ನಡೆಯಲಿರುವ ಟೂರ್ನಿಗೆ ಈಗಾಗಲೇ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿದ್ದು, ಕಾಲಿ ಚಾಂಪಿಯನ್ಸ್ ಕಲ್ಕತ್ತಾ ನೈಟ್ರೈಡರ್ಸ್ ಒಂದು ಹೆಜ್ಜೆ ಮುಂದಿದೆ ಎಂದರೆ ತಪ್ಪಾಗಲಾರದು.
ಟೀಮ್ ಇಂಡಿಯಾದ ಕೋಚ್ ಆಗುವುದಕ್ಕೂ ಮುನ್ನ ಕಲ್ಕತ್ತಾ ನೈಟ್ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಕಾರ್ಯನಿರ್ವಹಿಸಿದ್ದರು. ಇದೀಗ ಅವರ ಸ್ಥಾನಕ್ಕೆ ಬದಲಿಯಾಗಿ ವೆಸ್ಟ್ ಇಂಡೀಸ್ ತಂಡದ ಲೆಜೆಂಡರಿ ಆಲ್ರೌಂಡರ್ ಡ್ವೇನ್ ಬ್ರಾವೊರನ್ನು ಫ್ರಾಂಚೈಸಿ ಮೆಂಟರ್ ಆಗಿ ನೇಮಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯನ್ನು ಹೊರಡಿಸಿದೆ.
Here's to creating more 'Champion'™️ memories! 💜@VenkyMysore | @DJBravo47 pic.twitter.com/KweWi895Ug
— KolkataKnightRiders (@KKRiders) September 27, 2024
ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ವಿಂಡೀಸ್ ಲೆಜೆಂಡರಿ ಆಟಗಾರ Dwayne Bravo
DJ ಬ್ರಾವೋ ನಮ್ಮೊಂದಿಗೆ ಸೇರಿಕೊಳ್ಳುವುದು ಬಹಳ ರೋಮಾಂಚನಕಾರಿ ಬೆಳವಣಿಗೆಯಾಗಿದೆ. ಅವರು ಎಲ್ಲಿ ಆಡಿದರೂ ಗೆಲ್ಲುವ ಅವರ ಆಳವಾದ ಆಸೆ, ಅವರ ವ್ಯಾಪಕ ಅನುಭವ ಮತ್ತು ಜ್ಞಾನವು ಫ್ರಾಂಚೈಸಿಗೆ ಮತ್ತು ಎಲ್ಲಾ ಆಟಗಾರರಿಗೆ ಅಪಾರವಾಗಿ ಪ್ರಯೋಜನವನ್ನು ನೀಡುತ್ತದೆ. ಅವರು ಪ್ರಪಂಚದಾದ್ಯಂತದ ನಮ್ಮ ಎಲ್ಲಾ ಫ್ರಾಂಚೈಸಿಗಳೊಂದಿಗೆ ತೊಡಗಿಸಿಕೊಂಡಿರುವುದು ನಮಗೆ ಸಂತಸ ತಂದಿದೆ ಎಂದು ಕೆಕೆಆರ್ ಫ್ರಾಂಚೈಸಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಕೆಲ ಗಂಟೆಗಳ ಒಳಗಾಗಿ ಬ್ರಾವೊರನ್ನು ಕೆಕೆಆರ್ ಫ್ರಾಂಚೈಸಿ ಮೆಂಟರ್ ಆಗಿ ನೇಮಿಸಿದ್ದು, ಈ ವಿಚಾರ ಸಿಎಸ್ಕೆ ಅಭಿಮಾನಿಗಳನ್ನು ದಂಗಾಗಿಸಿದೆ. ಏಕೆಂದರೆ ಕಳೆದ ಎರಡು ಆವೃತ್ತಿಗಳಲ್ಲಿ ಸಿಎಸ್ಕೆ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದ ಬ್ರಾವೊ ಈ ಬಾರಿಯೂ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ, ಬ್ರಾವೊರ ಈ ನಡೆ ಸಿಎಸ್ಕೆ ಫ್ರಾಂಚೈಸಿ ಹಾಗೂ ಅಭಿಮಾನಿಗಳನ್ನು ದಂಗಾಗಿಸಿದದು, ಬದಲಿ ಹುಡುಕಾಟದಲ್ಲಿ ಬ್ಯುಸಿಯಾಗಿದ್ದಾರೆ.