ಮೈಕ್​ ಬಳಸದೇ ಭಾಷಣ ಮಾಡಿದ ಪ್ರಧಾನಿ ಮೋದಿ: ಕಾರಣ ಕೇಳಿ ಎಲ್ಲೆಡೆ ಶ್ಲಾಘನೆಗಳ ಮಹಾಪೂರ

modi
Published on

ಜೈಪುರ್: ತಾವು ಪ್ರಧಾನ ಮಂತ್ರಿಯಲ್ಲ ಬದಲಿಗೆ ಪ್ರಧಾನ ಸೇವಕ ಎಂದು ಸದಾ ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ರಾಜಸ್ಥಾನದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರು ಮೈಕ್​ ಬಳಸದೇ ಭಾರಿ ಪ್ರಶಂಸೆ ಗಳಿಸಿದರು.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಉದ್ಘಾಟನೆ ಸಂದರ್ಭದಲ್ಲಿ ರಾಜಸ್ಥಾನವನ್ನು ತಲುಪಿದ ಪ್ರಧಾನಿ, ಆ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಅಂದು ಪ್ರಧಾನಿಯವರಿಗೆ ವಿಪರೀತ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ರಾಜಸ್ಥಾನವನ್ನು ತಲುಪುವುದು ರಾತ್ರಿ 10 ಗಂಟೆಯಾಗಿತ್ತು. ಪ್ರಧಾನಿಯವರ ಮಾತನ್ನು ಕೇಳಲು ಜನ ಕಿಕ್ಕಿರಿದು ತುಂಬಿದ್ದರು. ಆದರೆ ಈ ಸಭೆಯಲ್ಲಿ ಪ್ರಧಾನಿ ಮೋದಿ ಮೈಕ್​ ಬಳಸದೇ ಹಾಗೆಯೇ ಮಾತನಾಡಿದರು.

ಇದಕ್ಕೆ ಕಾರಣವೇನೆಂದರೆ ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ನಿಷೇಧ ಇದೆ ಎನ್ನುವ ಕಾರಣಕ್ಕೆ. ಎಲ್ಲರಿಗೂ ಕಾನೂನು ಒಂದೇ. ನಾನು ನಿಯಮವನ್ನು ಮುರಿಯುವುದಿಲ್ಲ ಎಂದ ಮೋದಿ ತಡವಾಗಿ ಬಂದಿರುವುದಕ್ಕೆ ಜನರ ಕ್ಷಮೆ ಕೋರಿ ನಂತರ ಮೈಕ್​ ಬಳಸದೇ ಮಾತನಾಡಿದರು. ಪ್ರಧಾನಿಯವರು ಹೀಗೆ ಮಾಡಿದ್ದು, ಭಾರಿ ಪ್ರಶಂಸೆಯನ್ನು ಗಿಟ್ಟಿಸಿದೆ.

ಇದಾದ ಬಳಿಕ ಪ್ರಧಾನಿ ಭಾರತ್ ಮಾತಾ ಕಿ ಜೈ ಘೋಷ ಕೂಗಿ ಸಾರ್ವಜನಿಕರಿಗೆ ಸಾಷ್ಟಾಂಗ ನಮನ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮೊದಲು, ಪ್ರಧಾನಿಯವರು ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದರು. ಈ ಕ್ರಮದಿಂದ 80 ಕೋಟಿಗೂ ಹೆಚ್ಚು ಜನರಿಗೆ ಸಹಕಾರಿ ಆಗಲಿದೆ ಎಂದು ಹೇಳಿದರು. ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಕಷ್ಟದ ಸಮಯದಲ್ಲಿ ಪರಿಹಾರ ನೀಡಲು ಕೇಂದ್ರವು ಸುಮಾರು 4 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net