ಫುಡ್ ಕಾರ್ಪೋರೇಷನ್​ನಲ್ಲಿ ವಿವಿಧ ಉದ್ಯೋಗಾವಕಾಶ- ₹1.80 ಲಕ್ಷದವರೆಗೂ ಮಾಸಿಕ ಸಂಬಳ

udyogamitra
Published on

ರಾಷ್ಟ್ರದ ಆಹಾರ ಸುರಕ್ಷತೆಯನ್ನು ಖಾತರಿಪಡಿಸುವ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದಾಗಿರುವ ಫುಡ್ ಕಾರ್ಪೋರೇಷನ್​ ಆಫ್​ ಇಂಡಿಯಾ (ಎಫ್​ಸಿಐ)ಯಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಮೆಡಿಕಲ್ ಆಫೀಸರ್ ಹುದ್ದೆಗೆ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 89

ದೇಶಾದ್ಯಂತ ಇರುವ ಎïಸಿಎ ಕಚೇರಿಗಳಿಗೆ ಈ ನೇಮಕಾತಿ ನಡೆಯುತ್ತಿದ್ದು, ಹುದ್ದೆಗಳಲ್ಲಿ ಬ್ಯಾಕ್‍ಲಾಗ್ ನೇಮಕಾತಿಯೂ ಸೇರಿದೆ. 89 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 43 ಸ್ಥಾನ, ಎಸ್ಸಿಗೆ 14, ಎಸ್ಟಿಗೆ 6, ಇತರ ಹಿಂದುಳಿದ ವರ್ಗಕ್ಕೆ 17, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 9 ಸ್ಥಾನಗಳನ್ನು ಮೀಸಲಿರಿಸಿದ್ದು, ಇದರಲ್ಲಿ ಅಂಗವಿಕಲರಿಗೆ ಒಟ್ಟು 4 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹುದ್ದೆಗಳಿಗೆ ಅನುಗುಣವಾಗಿ ಆನ್‍ಲೈನ್ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು. ಕರ್ನಾಟಕ ಅಭ್ಯರ್ಥಿಗಳಿಗೆ ಬೆಂಗಳೂರು ಪರೀಕ್ಷಾ ಕೇಂದ್ರವಾಗಿರುತ್ತದೆ.

ಹುದ್ದೆ ವಿವರ

* ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜನರಲ್ ಅಡ್ಮಿನಿಸ್ಟ್ರೇಷನ್ - 30

ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕ (ಮೀಸಲಾತಿ ಅಭ್ಯರ್ಥಿಗಳಿಗೆ ಶೇ.50 ಅಂಕ) ಅಥವಾ ಎಸಿಎ/ಎಐಸಿಡಬ್ಲ್ಯುಎ/ ಎಸಿಎಸ್ ಅಥವಾ ಕಾನೂನು ಪದವಿ/ 5 ವರ್ಷದ ಕಾನೂನು ಇಂಟಿಗ್ರೇಟೆಡ್ ಕೋರ್ಸ್ ಮಾಡಿರುವ ಗರಿಷ್ಠ 30 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶ ಇದೆ.

* ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಟೆಕ್ನಿಕಲ್ - 27

ಕೃಷಿಯಲ್ಲಿ ಬಿಎಸ್ಸಿ/ ಫುಡ್ ಸೈನ್ಸ್, ಫುಡ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ/ ಫುಡ್ ಪ್ರೊಸೆಸಿಂಗ್‍ನಲ್ಲಿ ಬಿ.ಟೆಕ್/ ಬಿಇ ಪದವಿ ಪಡೆದಿರುವ ಗರಿಷ್ಠ 28ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

* ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅಕೌಂಟೆಂಟ್ - 22

ಸಿಎ ಪದವಿ ಪಡೆದಿದ್ದು, ಇನ್‍ಸ್ಟಿಟ್ಯೂಟ್ ಆಫ್​ ಚಾರ್ಟರ್ ಅಕೌಂಟಂಟ್ ಆಫ್​ ಇಂಡಿಯಾ/ ಇನ್‍ಸ್ಟಿಟ್ಯೂಟ್ ಆಫ್​ ಕಾಸ್ಟ್ ಅಕೌಂಟ್‍ಂಟ್ ಆಫ್​ ಇಂಡಿಯಾ/ ಇನ್‍ಸ್ಟಿಟ್ಯೂಟ್ ಆಫ್​ ಕಂಪನಿ ಸೆಕ್ರೇಟರೀಸ್ ಆï ಇಂಡಿಯಾದಲ್ಲಿ ಸದಸ್ಯರಾಗಿರಬೇಕು. ಗರಿಷ್ಠ ವಯೋಮಿತಿ 28 ವರ್ಷ.

* ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಲಾ - 8

ಕಾನೂನು ಪದವಿ ಪಡೆದಿದ್ದು, ಕನಿಷ್ಠ 3-5 ವರ್ಷದ ವೃತ್ತಿ ಅನುಭವ ಹೊಂದಿರುವ 33 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

* ವೈದ್ಯಕೀಯ ಅಧಿಕಾರಿ - 2

ಎಂಬಿಬಿಎಸ್ ಪದವೀಧರರಾದ 35 ವರ್ಷದೊಳಗಿನ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ.

ವೇತನ: ಜನರಲ್ ಮ್ಯಾನೇಜರ್ ಹುದ್ದೆಗೆ ಮಾಸಿಕ 60,000- 1,80,000 ರೂ. ವೇತನ ಇದೆ. ಮೆಡಿಕಲ್ ಆಫೀಸರ್ ಹುದ್ದೆಗೆ ಮಾಸಿಕ 50,000- 1,60,000 ರೂ. ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 31.3.2021

ಅಧಿಸೂಚನೆಗೆ: https://bit.ly/3q8DWDB

ಮಾಹಿತಿಗೆ:http://www.fci.gov.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net