ಬೆಳಗಾವಿಯ ಕಂಟೋನ್ಮೆಂಟ್ ಬೋರ್ಡ್‍ನಲ್ಲಿವೆ ಹಲವು ಹುದ್ದೆಗಳು- 7ನೇ ಕ್ಲಾಸ್​ ಪಾಸಾದವರಿಗೂ ಅವಕಾಶ

udyoga-belagavi
Published on

ಬೆಳಗಾವಿಯ ಕಂಟೋನ್ಮೆಂಟ್ ಬೋರ್ಡ್‍ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ಹುದ್ದೆಗಳು: 13

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ನ್ಯಾಯಾಲಯದಲ್ಲಿ ಶಿಕ್ಷೆಗೊಳಪಟ್ಟಿರಬಾರದು. ಮೀಸಲಾತಿ ಅಭ್ಯರ್ಥಿಗಳು ಜಾತಿ, ಆದಾಯ ಹಾಗೂ ಇತರ ಅಗತ್ಯ ದಾಖಲೆಗಳನ್ನು ಸರಿಯಾಗಿ ನಮೂದಿಸಬೇಕು. 13 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 6 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 5, ಎಸ್ಟಿಗೆ 1, ಎಸ್ಸಿಗೆ 1 ಸ್ಥಾನ ಮೀಸಲಿರಿಸಲಾಗಿದೆ.

ಹುದ್ದೆ ಸಂಖ್ಯೆ ಮಾಸಿಕ ವೇತನ (ರೂ.ಗಳಲ್ಲಿ)

* ಪ್ರೈಮರಿ ಅಸಿಸ್ಟೆಂಟ್ ಟೀಚರ್ (ಮರಾಠಿ ಮಾಧ್ಯಮ ಶಾಲೆ); ಹುದ್ದೆ 1; ಸಂಬಳ: 25,800-51,400

* ಸ್ಟೆನೋಗ್ರಾಫರ್ ; ಹುದ್ದೆ 1; ಸಂಬಳ 27,650-52,650

* ಸೆಕೆಂಡ್ ಡಿವಿಷನ್ ಕ್ಲರ್ಕ್; ಹುದ್ದೆ 1; ಸಂಬಳ 21,400-42,000

* ಚೌಕಿದಾರ್; ಹುದ್ದೆ 1; ಸಂಬಳ 17,000-28,950

* ಸಾಯಿವಾಲಾ; ಹುದ್ದೆ 8; ಸಂಬಳ 17,000-28,950

* ವೈರ್​ಮನ್; ಹುದ್ದೆ 1; ಸಂಬಳ 23,500-47,650

ಶೈಕ್ಷಣಿಕ ಅರ್ಹತೆ: 7ನೇ ತರಗತಿ, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಎಲೆಕ್ಟ್ರಿಕಲ್ ಟ್ರೇಡ್ ಕೋರ್ಸ್, ಡಿ.ಇಡಿ/ ಬಿ.ಇಡಿ, ಸೆಕ್ರೆಟರಿಯಲ್ ಪ್ರಾಕ್ಟೀಸ್/ ಸೀನಿಯರ್ ಷಾರ್ಟ್‍ಹ್ಯಾಂಡ್ ಮತ್ತು ಇಂಗ್ಲಿಷ್‍ನಲ್ಲಿ ಸೀನಿಯರ್ ಟೈಪಿಂಗ್ ಡಿಪ್ಲೋಮಾ ಆಗಿರಬೇಕು. ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು. ಕೆಲ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ ಅವಶ್ಯ.

ವಯೋಮಿತಿ: ಎಲ್ಲ ಹುದ್ದೆಗಳಿಗೂ ಕನಿಷ್ಠ ವಯೋಮಿತಿ 18 ವರ್ಷ. ಪ್ರೈಮರಿ ಟೀಚರ್ ಹಾಗೂ ಸಾಯಿವಾಲಾ ಹುದ್ದೆಗೆ ಗರಿಷ್ಠ 30 ವರ್ಷ, ಚೌಕಿದಾರ್‍ಗೆ ಗರಿಷ್ಠ 28 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 25 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ಅರ್ಜಿ ಶುಲ್ಕ: ಮೀಸಲಾತಿ ನಿಗದಿಯಾಗಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಮೀಸಲಾತಿ ನಿಗದಿಯಾಗದ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕು. ಅಭ್ಯರ್ಥಿಗಳು 300 ರೂ. ಶುಲ್ಕವನ್ನು ಡಿಡಿ ಮೂಲಕ ಪಾವತಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆ: ಸಲ್ಲಿಕೆಯಾದ ಅರ್ಜಿಗಳಲ್ಲಿ ಷಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಹಾಲ್‍ಟಿಕೆಟ್ ಕಳುಹಿಸಲಾಗುವುದು. ಹಾಲ್ ಟಿಕೆಟ್‍ನಲ್ಲಿ ಪರೀಕ್ಷೆ ಸ್ವರೂಪವನ್ನು ತಿಳಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 19.3.2021

ಅರ್ಜಿ ಸಲ್ಲಿಕೆ ವಿಳಾಸ: Chief Executive Officer, Cantonment Board, BC No.41, Khanapur Road, Camp, Belagavi-590001

ಅಧಿಸೂಚನೆಗೆ: https://bit.ly/3bhxmoN

ಮಾಹಿತಿಗೆ: https://belgaum.cantt.gov.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net