More

    ಇಂಗ್ಲಿಷ್​ ಭಾಷೆಯಿಂದ ಟ್ರಾನ್ಸ್​ಲೇಟ್​ ಮಾಡಬಲ್ಲಿರಾ? ಸುಪ್ರೀಂಕೋರ್ಟ್​ನಲ್ಲಿ ಖಾಲಿ ಇವೆ ಹುದ್ದೆಗಳು

    ಸುಪ್ರೀಂಕೋರ್ಟ್‍ನಲ್ಲಿ ಎಕ್ಸ್-ಕೇಡರ್ ಹುದ್ದೆಯಾದ ಕೋರ್ಟ್ ಅಸಿಸ್ಟೆಂಟ್ (ಜೂನಿಯರ್ ಟ್ರಾನ್ಸ್‍ಲೇಟರ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 30

    ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಲು ಆಸಕ್ತರಾಗಿರುವ, ಭಾಷಾಂತರ ಕೆಲಸ ಗೊತ್ತಿರುವ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್‍ನಲ್ಲಿ ಉತ್ತಮ ಅವಕಾಶ ಲಭ್ಯವಿದೆ. ಮಾಸಿಕ 7ನೇ ವೇತನ ಶ್ರೇಣಿ ಅನ್ವಯ ಬೇಸಿಕ್ 44,900 ರೂ. ವೇತನ ಇದೆ. ಸರ್ಕಾರದ ನಿಯಮದನ್ವಯ ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ.

    ಅನುವಾದ ಮಾಡಬೇಕಿರುವ ಭಾಷೆಗಳು:
    ಇಂಗ್ಲಿಷ್ ಭಾಷೆಯಿಂದ ಹಿಂದಿ ಭಾಷೆಗೆ ಭಾಷಾಂತರ ಮಾಡಬೇಕಿದ್ದು, 5 ಹುದ್ದೆಗಳು ಖಾಲಿ ಇವೆ. ಕನ್ನಡ – 2, ಅಸ್ಸಾಮೆಸಿ -2, ಬೆಂಗಾಲಿ -2, ತೆಲುಗು – 2, ಗುಜರಾತ್ -2, ಉರ್ದು – 2, ಮರಾಠಿ – 2, ತಮಿಳು-2, ಮಲಯಾಳಂ- 2, ಮಣಿಪುರಿ- 2 ಒಡಿಯಾ- 2, ಪಂಜಾಬಿ- 2, ನೇಪಾಳಿ -1 ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ವಿದ್ಯಾರ್ಹತೆ: ಭಾಷಾಂತರ ಮಾಡಬೇಕಿರು ಭಾಷೆಯು ಒಂದು ವಿಷಯವಾಗಿರುವಂತೆ ಪದವಿ, ಅನುವಾದಕದಲ್ಲಿ ಡಿಪೆÇ್ಲಮಾ ಅಥವಾ ಸರ್ಟಿಫಿಕೇಟ್ ಕೋರ್ಸ್. ಅಥವಾ ಕೇಂದ್ರ, ರಾಜ್ಯ ಸರ್ಕಾರಿ ಕಚೇರಿ, ಸಂಸತ್ತು, ರಾಜ್ಯ ಶಾಸಕಾಂಗ ಕಾರ್ಯದರ್ಶಿ, ಕೇಂದ್ರ/ ರಾಜ್ಯ ಸಾರ್ವಜನಿಕ ವಲಯದ ಸಂಸ್ಥೆಗಳು, ಹೈಕೋರ್ಟ್‍ನಲ್ಲಿ ಕನಿಷ್ಠ 2 ವರ್ಷದ ಭಾಷಾಂತರ ಅನುಭವ.

    ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ಆಯ್ಕೆ ಪ್ರಕ್ರಿಯೆ: ಸಾಮಾನ್ಯ ಇಂಗ್ಲಿಷ್ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಬಹು ಆಯ್ಕೆ ಮಾದರಿಯಲ್ಲಿ ಲಿಖಿತ ಪರೀಕ್ಷೆ, ಇಂಗ್ಲಿಷ್‍ನಿಂದ ರಾಜ್ಯದ ಸಂಬಂಧಿತ ಭಾಷೆಗೆ ಹಾಗೂ ರಾಜ್ಯದ ಭಾಷೆಯಿಂದ ಇಂಗ್ಲಿಷ್‍ಗೆ ಅನುವಾದ ಮಾಡುವ ಪರೀಕ್ಷೆ, ಇಂಗ್ಲಿಷ್ ಟೈಪಿಂಗ್ ಪ್ರತಿ ನಿಮಿಷಕ್ಕೆ 35 ಪದ ಹಾಗೂ ರಾಜ್ಯದ ಸಂಬಂಧಿತ ಭಾಷೆ ಟೈಪಿಂಗ್ ಪ್ರತಿ ನಿಮಿಷಕ್ಕೆ 25 ಪದ ಟೈಪಿಂಗ್ ಮಾಡುವ ಪರೀಕ್ಷೆ ನಡೆಸಲಾಗುವುದು. ನಂತರ ಸಂದರ್ಶನ ನಡೆಸಲಾಗುವುದು. ಪರೀಕ್ಷೆ ಹಾಗೂ ಸಂದರ್ಶನದ ದಿನಾಂಕವನ್ನು ಸುಪ್ರೀಂಕೋರ್ಟ್ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 13.32021
    ಅಧಿಸೂಚನೆ: https://bit.ly/2NeQ1JK
    ಮಾಹಿತಿಗೆ: http://www.sci.gov.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗಾವಕಾಶ: 50 ಸಾವಿರ ರೂ.ವರೆಗೆ ಸಂಬಳ

    ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗುವ ಆಸೆಯೆ? ವಿವಿಧ ಪದವೀಧರರಿಗೆ ಅರ್ಜಿ ಆಹ್ವಾನ

    ಅಂಗನವಾಡಿಗಳಿಗೆ ಮಹಿಳೆಯರ ನೇಮಕ- 4ನೇ ಕ್ಲಾಸ್‌ ಪಾಸಾದವರಿಗೂ ಇದೆ ಅವಕಾಶ

    ನರ್ಸಿಂಗ್ ಕೋರ್ಸ್‌ ಮುಗಿಸಿರುವಿರಾ? ಕೇಂದ್ರ ಸರ್ಕಾರದಡಿಯ ಕಾಲೇಜಿನಲ್ಲಿ ನಿಮಗಿದೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts