

ಸೋಲಾರ್ ಎನರ್ಜಿ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‍ಇಸಿಐ) ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧೀನದಲ್ಲಿ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಅಂಡರ್‍ಟೇಕಿಂಗ್ (ಸಿಪಿಎಸ್‍ಯು) ಆಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ದೆಹಲಿ ಪ್ರಾದೇಶಿಕ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ಹುದ್ದೆಗಳು: 26.
ಎಸ್‍ಇಸಿಐನಲ್ಲಿ ನೇಮಕ ಮಾಡಿಕೊಳ್ಳಲಾಗುವ 26 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 17 ಸ್ಥಾನ, ಎಸ್ಸಿಗೆ 2, ಇತರ ಹಿಂದುಳಿದ ವರ್ಗಕ್ಕೆ 6, ಆರ್ಥಿಕವಾಗಿ ದುರ್ಭಲವಾಗಿರುವ ಅಭ್ಯರ್ಥಿಗಳಿಗೆ 1 ಸ್ಥಾನ ಮೀಸಲಿರಿಸಲಿದ್ದು, ಅಂಗವಿಕಲ ಅಭ್ಯರ್ಥಿಗೆ ಸೂಪರ್‍ವೈಸರ್ ಹುದ್ದೆಯಲ್ಲಿ ಒಂದು ಸ್ಥಾನ ಮೀಸಲಿಡಲಾಗಿದೆ. ಅರ್ಜಿಗಳ ಸಂಖ್ಯೆ ಆಧರಿಸಿ ಲಿಖಿತ ಪರೀಕ್ಷೆ/ ಗುಂಪು ಚರ್ಚೆ/ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಅಪ್ರೆಂಟಿಸ್ ತರಬೇತಿಯನ್ನು ವೃತ್ತಿ ಅನುಭವ ಎಂದು ಪರಿಗಣಿಸಲಾಗುವುದು.
ಹುದ್ದೆ ವಿವರ
* ಸೂಪರ್‍ವೈಸರ್ (ಸೋಲಾರ್/ ಪವರ್ ಸಿಸ್ಟಂ) - 13
* ಸೆಕ್ರೇಟರಿಯಲ್ ಆಫೀಸರ್ - 1
* ಸೂಪರ್‍ವೈಸರ್ (ಪಿ ಆ್ಯಂಡ್ ಎ) - 2
* ಜೂನಿಯರ್ ಪ್ರೋಗ್ರಾಮರ್ - 1
* ಜೂನಿಯರ್ ಅಕೌಂಟೆಂಟ್ - 1
* ಮ್ಯಾನೇಜರ್ (ಬಿಜಿನೆಸ್ ಡೆವಲಪ್‍ಮೆಂಟ್) -1
* ಸೀನಿಯರ್ ಆಫೀಸರ್ - 2
* ಸೀನಿಯರ್ ಇಂಜಿನಿಯರ್ (ಇನ್‌ಫಾರ್ಮೇಷನ್ ಟೆಕ್ನಾಲಜಿ) -1
* ಸೀನಿಯರ್ ಅಕೌಂಟ್ಸ್ ಆಫೀಸರ್ - 2
ವಿದ್ಯಾರ್ಹತೆ: ಸೂಪರ್ವೈಸರ್ ಸೋಲಾರ್ ಹುದ್ದೆಗೆ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಮಾಡಿದ್ದು, ಸೋಲಾರ್/ ವಿಂಡ್/ ಹೈಬ್ರಿಡ್/ ಪ್ರಾಜೆಕ್ಟ್/ ಪವರ್ ಜನರೇಷನ್/ ಟ್ರಾನ್ಸ್‍ಮಿಷನ್‍ನಲ್ಲಿ ಕನಿಷ್ಠ 1 ವರ್ಷದ ವೃತ್ತಿ ಅನುಭವ ಹೊಂದಿರಬೇಕು. ಉಳಿದಂತೆ ಹುದ್ದೆಗಳಿಗೆ ಅನುಗುಣವಾಗಿ ಕಂಪ್ಯೂಟರ್ ಸೈನ್ಸ್/ ಇಂಜಿನಿಯರಿಂಗ್/ ಅಪ್ಲಿಕೇಷನ್ಸ್‍ನಲ್ಲಿ ಡಿಪ್ಲೋಮಾ, ಸಿಎ, ಸಿಎಂಎ/ ಎಂಬಿಎ, ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ.
ವಯೋಮಿತಿ: ಮ್ಯಾನೇಜರ್ ಹುದ್ದೆಗೆ ಗರಿಷ್ಠ 40 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 32 ವರ್ಷ.ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇರಲಿದೆ.
ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 22,000 ರೂ. ನಿಂದ 2,00,000 ರೂ.ವರೆಗೆ ವೇತನ ಇದ್ದು, ಡಿಎ, ಮನೆ ಬಾಡಿಗೆ ಭತ್ಯೆ, ಪಿಎಫ್, ವೈದ್ಯಕೀಯ, ಗ್ರಾಚ್ಯುಟಿ, ಪಿಆರ್‌ಪಿ, ಪೆನ್ಷನ್, ನಿವೃತ್ತಿ ನಂತರದ ವೈದ್ಯಕೀಯ ಸೌಲಭ್ಯ, ಲೋನ್/ ಅಡ್ವಾನ್ಸ್, ರಜೆ ಭತ್ಯೆಗಳನ್ನು ಸಂಸ್ಥೆಯ ನಿಯಮದನುಸಾರ ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 9.3.2021
ಅಧಿಸೂಚನೆಗೆ: https://bit.ly/3u7ptuv
ಮಾಹಿತಿಗೆ: : www.seci.co.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ