ದ್ವಿತೀಯ ಪಿಯುಸಿಯಾದವರಿಂದ ಸೆಕ್ರೇಟರಿಯೇಟ್​ ಅಸಿಸ್ಟೆಂಟ್​, ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನ

udyoga-ICMR
Published on

ಕೌನ್ಸಿಲ್​ ಆಫ್‌​ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ (ಸಿಎಸ್​ಐಆರ್​) ಅಧೀನದಲ್ಲಿ ಕಾರ್ಯನಿರ್ವಹಿಸುವ ಭುವನೇಶ್ವರದಲ್ಲಿರುವ ಇನ್​ಸ್ಟಿಟ್ಯೂಟ್​ ಆಫ್‌ ಮಿನರಲ್ಸ್​ ಆ್ಯಂಡ್​ ಮೆಟಿರಿಯಲ್ಸ್​ ಟೆಕ್ನಾಲಜಿಯಲ್ಲಿ (ಐಎಂಎಂಟಿ) ಸೆಕ್ರೇಟರಿಯೇಟ್​ ಅಸಿಸ್ಟೆಂಟ್​ ಹಾಗೂ ಸ್ಟೆನೋಗ್ರಾಫರ್​ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 14

ಐಎಂಎಂಟಿಯಲ್ಲಿ

ಸೆಕ್ರೇಟರಿಯೇಟ್​ ಹುದ್ದೆಗಳು

ಖನಿಜ ಮತ್ತು ಮೆಟಿರಿಯಲ್​ ಸಂಪನ್ಮೂಲಗಳ ಸುಸ್ಥಿರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಐಎಂಎಂಟಿಯು ಉತ್ತಮ ಶೈಕ್ಷಣಿಕ ಹಿನ್ನೆಲೆ, ಕೌಶಲ ಹೊಂದಿರುವ ಅಭ್ರರ್ಥಿಗಳಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೋರಿದೆ.

ಹುದ್ದೆ ವಿವರ

* ಜೂನಿಯರ್​ ಸೆಕ್ರೇಟರಿಯೇಟ್​ ಅಸಿಸ್ಟೆಂಟ್​ (ಜನರಲ್​ - 7, ಫೈನಾನ್ಸ್​ ಆ್ಯಂಡ್​ ಅಕೌಂಟ್ಸ್​- 2, ಎಸ್​ ಆ್ಯಂಡ್​ ಪಿ- 3)- 12

* ಜೂನಿಯರ್​ ಸ್ಟೆನೋಗ್ರಾಫರ್​ - 2

ವಿದ್ಯಾರ್ಹತೆ: ದ್ವೀತಿಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿದ್ದು, ಕಂಪ್ಯೂಟರ್​ ಟೈಪಿಂಗ್​ (ಪ್ರತಿ ನಿಮಿಷಕ್ಕೆ ಇಂಗ್ಲಿಷ್​ನಲ್ಲಿ 35 ಪದ) ಜತೆ ಬೇಸಿಕ್​ ಕಂಪ್ಯೂಟರ್​ ಜ್ಞಾನ ಅವಶ್ಯ.

ವಯೋಮಿತಿ: ಜೂ. ಸೆಕ್ರೇಟರಿಯೇಟ್​ ಅಸಿಸ್ಟೆಂಟ್​ಗೆ ಗರಿಷ್ಠ 28 ವರ್ಷ, ಸ್ಟೆನೋಗ್ರಾರ್​ಗೆ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ರರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಜೂನಿಯರ್​ ಸೆಕ್ರೇಟರಿಯೇಟ್​ ಅಸಿಸ್ಟೆಂಟ್​ಗೆ ಮಾಸಿಕ 19,900 ರಿಂದ 63,200 ರೂ. ವೇತನ ಇದೆ, ಸ್ಟೆನೋಗ್ರಾರ್​ಗೆ ಮಾಸಿಕ 25,500 - 81,100 ರೂ. ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

ಮೀಸಲಾತಿ: ಸಾಮಾನ್ಯವರ್ಗದ ಅಭ್ರರ್ಥಿಗೆ 10 ಸ್ಥಾನ, ಎಸ್ಸಿಗೆ 1, ಎಸ್ಟಿಗೆ 2, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ರರ್ಥಿಗೆ 1 ಸ್ಥಾನ ಮೀಸಲಿರಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಸಿಎಸ್​ಐಆರ್​-ಐಎಂಎಂಟಿಯ ನಿಯಮಾನುಸಾರ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ರರ್ಥಿಗಳನ್ನು ಟೈಪಿಂಗ್​/ಸ್ಕಿಲ್​ ಟೆಸ್ಟ್​/ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಅಭ್ರರ್ಥಿಗಳ ಶೈಕ್ಷಣಿಕ ಅರ್ಹತೆ, ಕೌಶಲ ಆಧರಿಸಿ ಅಭ್ರರ್ಥಿಗಳ ಆಯ್ಕೆ ಮಾಡಲಾಗುವುದು. ಟೈಪಿಂಗ್​ ಹಾಗೂ ಲಿಖಿತ ಪರೀಕ್ಷೆಯನ್ನು ಭುವನೇಶ್ವರದಲ್ಲಿ ನಡೆಯಲಿದೆ. ಆದರೆ, ದೇಶದ ಬೇರೆ ನಗರಗಳಲ್ಲಿಯೂ ನಡೆಸುವ ಸಾಧ್ಯತೆಗಳು ಇಲ್ಲದಿಲ್ಲ.

ಅರ್ಜಿ ಶುಲ್ಕ: ಎಸ್ಸಿ/ ಎಸ್ಟಿ/ ಅಂಗವಿಕಲ/ ಮಹಿಳಾ/ ಸಿಎಸ್​ಐಆರ್​ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಅಭ್ರರ್ಥಿಗಳು 100 ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 26.6.2021

ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಕೊನೇ ದಿನ: 30.6.2021

ಅರ್ಜಿ ಸಲ್ಲಿಕೆ ವಿಳಾಸ: CSIR-Institute of Minerals & Materials Technology, , Near Pathani Samanta Planetarium, Acharya Vihar,Bhuvaneshwar,- 751 013, Odisha, INDIA

ಅಧಿಸೂಚನೆಗೆ: https://bit.ly/3v94rfo

ಮಾಹಿತಿಗೆ: http://www.immt.res.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net