

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ಎಐಎಲ್) ಭಾರತದ ಅತಿದೊಡ್ಡ ಉಕ್ಕು ಉತ್ಪಾದಕ ಸಂಸ್ಥೆಯಾಗಿದ್ದು, ಸಾರ್ವಜನಿಕ ವಲಯದ ಉದ್ಯಮವಾಗಿದೆ. ಪ್ರಸ್ತುತ ಎಸ್ಎಐಎಲ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಜಾರ್ಖಂಡ್ನಲ್ಲಿರುವ ಬೊಕಾರೋ ಜನರಲ್ ಆಸ್ಪತ್ರೆಯಲ್ಲಿ ವೈದ್ಯ ಹಾಗೂ ನರ್ಸ್ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು ಹುದ್ದೆಗಳು: 150
ವೈದ್ಯ ಅಥವಾ ನರ್ಸ್ ಹುದ್ದೆ ಆಕಾಂಕ್ಷಿಯಾಗಿರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಈ ಹುದ್ದೆಗಳಿಗೆ ಆರಂಭದಲ್ಲಿ ತಾತ್ಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ನಂತರ ಆಸ್ಪತ್ರೆಯ ಅವಶ್ಯಕತೆ ಅನುಸಾರ ಅವಧಿ ವಿಸ್ತರಿಸಲಾಗುವುದು.
ಹುದ್ದೆ ವಿವರ
* ವೈದ್ಯ- 50
* ನರ್ಸ್ - 100
ವಿದ್ಯಾರ್ಹತೆ: ವೈದ್ಯ ಹುದ್ದೆಗೆ ಎಂಬಿಬಿಎಸ್ ಅಥವಾ ಉನ್ನತ ಶಿಕ್ಷಣ ಮಾಡಿದ್ದು, ಮೆಡಿಕಲ್ ಕೌನ್ಸಿಲ್ ಆ್ ಇಂಡಿಯಾದಲ್ಲಿ ನೋಂದಾಯಿತರಾಗಿಬೇಕು. ನರ್ಸ್ ಹುದ್ದೆಗೆ ನಸಿರ್ಂಗ್ನಲ್ಲಿ ಬಿಎಸ್ಸಿ ಅಥವಾ ಜನರಲ್ ನರ್ಸಿಂಗ್ ಆ್ಯಂಡ್ ಮಿಡ್ವೈರಿಯಲ್ಲಿ 3 ವರ್ಷದ ಡಿಪ್ಲೊಮಾ ಮಾಡಿದ್ದು, ರಾಜ್ಯ ಅಥವಾ ಕೇಂದ್ರದ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಾಯಿತರಾಗಿರಬೇಕು.
ಹುದ್ದೆ ಜವಾಬ್ದಾರಿ: ನೇಮಕ ಮಾಡಿಕೊಳ್ಳಲಾಗುವ ವೈದ್ಯ ಹಾಗೂ ನರ್ಸ್ಗಳನ್ನು ಕೋವಿಡ್ ಹಾಗೂ ಕೋವಿಡೇತರ ಕರ್ತವ್ಯಕ್ಕೂ ನಿಯೋಜಿಸಬಹುದಾಗಿದೆ. ಕೋವಿಡ್ ಹುದ್ದೆಗೆ ನೇಮಿಸಿದರೆ ಪ್ರೋಟೋಕಾಲ್ ಪ್ರಕಾರ ಹುದ್ದೆ ಹಾಗೂ ವೇತನ ನಿಗದಿಪಡಿಸಲಾಗುವುದು.
ವೇತನ: ವೈದ್ಯರಿಗೆ ದಿನದ ಎಂಟು ಗಂಟೆ ಕೆಲಸ ಮಾಡಿದಲ್ಲಿ ಪ್ರತಿದಿನ 5,000 ರೂ., ನರ್ಸ್ಗಳಿಗೆ ದಿನದ 8 ಗಂಟೆ ಕೆಲಸಕ್ಕೆ 1,000 ರೂ. ವೇತನ ನೀಡಲಾಗುವುದು. ದಿನದಲ್ಲಿ 4 ಗಂಟೆ ಕೆಲಸ ಮಾಡಲು ಸಿದ್ಧರಿರುವವರನ್ನೂ ನೇಮಿಸಿಕೊಳ್ಳಲಾಗುವುದು. ಅವರಿಗೆ ಅವಧಿಯನುಸಾರ ವೇತನ ನಿಗದಿಪಡಿಸಲಾಗುವುದು.
ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅಗತ್ಯ ದಾಖಲೆ, ಪ್ರಮಾಣಪತ್ರಗಳ ಮೂಲ ಪ್ರತಿ ಹಾಗೂ ಜೆರಾಕ್ಸ್ ಪ್ರತಿ ತರಬೇಕು. ಇದರ ಜತೆ ಪ್ಯಾನ್ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ಬುಕ್ಗಳ ಜೆರಾಕ್ಸ್ ಪ್ರತಿ ಮತ್ತು ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ ತರಲು ಸೂಚಿಸಲಾಗಿದೆ.
ಸಂದರ್ಶನ ನಡೆಯುವ ದಿನಾಂಕ: 15.5.2021 ರಿಂದ ಆರಂಭವಾಗಿದ್ದು, 26.5.2021ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.
ಸಂದರ್ಶನ ನಡೆಯುವ ಸ್ಥಳ: DMS Conference Hall, Bokaro General Hospital . Bokaro Steel City, Jharkhand.
ಅಧಿಸೂಚನೆಗೆ: https://bit.ly/3fpYgN6
ಮಾಹಿತಿಗೆ: www.sailcareers.com