

ಉಕ್ಕು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಮೆಕಾನ್ ಲಿಮಿಟೆಡ್ ರಾಂಚಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಮೆಕಾನ್ ಮಿನಿರತ್ನ ಸಂಸ್ಥೆಗಳಲ್ಲಿ ಒಂದಾಗಿದ್ದು, ಇಂಜಿನಿಯರಿಂಗ್, ಕನ್ಸಲ್ಟೆನ್ಸಿ, ಕಾಂಟ್ರಾಕ್ಟಿಂಗ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಸೇವೆಗಳನ್ನು ಒದಗಿಸುತ್ತದೆ. ವೆುಕಾನ್ ಲಿಮಿಟೆಡ್ನಲ್ಲಿ ನೇಮಕ ಮಾಡಿಕೊಳ್ಳಲಾಗುವ ಹುದ್ದೆಗಳಲ್ಲಿ ಮೀಸಲಾತಿ ನಿಗದಿಪಡಿಸಲಾಗಿದೆ.
ಒಟ್ಟು ಹುದ್ದೆಗಳು: 26
ಯಾವ ವಿಭಾಗಗಳಲ್ಲಿ ಹುದ್ದೆ?: ಮ್ಯಾನೇಜ್ಮೆಂಟ್ ಅಡ್ವೈಸರಿ ಸವಿರ್ಸ್, ರಾಜ್ಭಾಷಾ, ಜಿಎಂಎಂಬಿ, ಲೀಗಲ್, ಮೆಡಿಕಲ್, ಕಾರ್ಪೋರೆಟ್ ಕಮ್ಯುನಿಕೇಷನ್, ಎಫ್ಎಸ್ಪಿಡಿ, ಸಿವಿಲ್, ಆಯಿಲ್ ಆ್ಯಂಡ್ ಗ್ಯಾಸ್, ಹ್ಯೂಮನ್ ರಿಸೋರ್ಸ್, ಮರ್ಜರ್ ಆ್ಯಂಡ್ ಅಕ್ವಿಜಿಷನ್, ಫೈನಾನ್ಸ್ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆ ವಿವರ
* ಅಸಿಸ್ಟೆಂಟ್ ಮ್ಯಾನೇಜರ್ (ಕಾಸ್ಟ್ ಎಸ್ಟಿಮೇಷನ್ - 2, ಮಾರ್ಕೆಟ್ ರಿಸರ್ಚ್- 2, ರಾಜ್ಭಾಷಾ-1)-5
* ಡೆಪ್ಯುಟಿ ಮ್ಯಾನೇಜರ್ (ಮಿನರಲ್-1, ಲೀಗಲ್-1, ರಾಜ್ಭಾಷಾ-1, ಸಿಸಿ-1)- 4
* ಮೆಡಿಕಲ್ ಆಫೀಸರ್ (ರೇಡಿಯಾಲಜಿ) - 1
* ಮ್ಯಾನೇಜರ್ (ಮೆಕ್ಯಾನಿಕಲ್- 1, ಸಿವಿಲ್-1, ಲೀಗಲ್-1) - 3
* ಸೀನಿಯರ್ ಮ್ಯಾನೇಜರ್ (ಸಿವಿಲ್/ಮೆಕ್ಯಾನಿಕಲ್)- 2
* ಸ್ಪೆಷಲಿಸ್ಟ್ (ಮೆಡಿಸನ್) - 1
* ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಮೈನಿಂಗ್- 1, ಸಿವಿಲ್/ಮೆಕ್ಯಾನಿಕಲ್- 2, ಎಚ್ಆರ್-1, ಫೈನಾನ್ಸ್-1) - 5
* ಡೆಪ್ಯುಟಿ ಜನರಲ್ ಮ್ಯಾನೇಜರ್ (ಸಿವಿಲ್/ ಮೆಕ್ಯಾನಿಕಲ್-2, ಮೈನಿಂಗ್ - 1, ಫೈನಾನ್ಸ್ - 2)-5
ವಿದ್ಯಾರ್ಹತೆ: ಎಂಬಿಎ/ ಪಿಜಿಡಿಎಂ, ಹಿಂದಿ ಅಥವಾ ಇಂಗ್ಲಿಷ್ ಒಂದು ವಿಷಯವಾಗಿ ಸ್ನಾತಕೋತ್ತರ ಪದವಿ, ಮಿನರಲ್, ಮೆಕ್ಯಾನಿಕಲ್, ಸಿವಿಲ್ ಇಂಜಿನಿಯರಿಂಗ್ನಲ್ಲಿ ಪದವಿ, ಕಾನೂನು ಪದವಿ, ಎಂಬಿಬಿಎಸ್ ಜತೆ ರೇಡಿಯೋ ಡಯಗ್ನೋಸಿಸ್ನಲ್ಲಿ ಎಂಡಿ, ರ್ಜನಲಿಸಂ ಆ್ಯಂಡ್ ಕಮ್ಯುನಿಕೇಷನ್ನಲ್ಲಿ ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮಾ ಮಾಡಿರಬೇಕು. ಅಭ್ಯರ್ಥಿಗಳು ರೆಗ್ಯುಲರ್ ಅಥವಾ ಪೂರ್ಣಾವಧಿಯ ತರಗತಿಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಅವಕಾಶ.
ವಯೋಮಿತಿ: 17.5.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30 ವರ್ಷದಿಂದ 47 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 20,600-46,500 ರೂ., 24,900-50,500 ರೂ., 32,900-58,000 ರೂ., 36,900 -58,000, 36,600-62,000 ರೂ., 43,200-66,000 ರೂ., 51,300-73,000 ರೂ. ವೇತನ ಇದೆ.
ಆಯ್ಕೆ ಪ್ರಕ್ರಿಯೆ: ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ಆಯ್ಕೆ ಮಾಡಲಾದ ಅಭ್ಯರ್ಥಿಗಳ ಷಾರ್ಟ್ಲಿಸ್ಟ್ ಅನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಸಂದರ್ಶನದ ದಿನಾಂಕ, ಸ್ಥಳ, ಸಮಯದ ಕುರಿತ ಮಾಹಿತಿಯನ್ನು ಆಯ್ಕೆಮಾಡಲಾದ ಅಭ್ಯರ್ಥಿಗಳ ಮೇಲ್ಗೆ ಕಳುಹಿಸಲಾಗುವುದು.
ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಸಂಸ್ಥೆಯ ನಿಯಮಾನುಸಾರ ಪ್ರಯಾಣ ಭತ್ಯೆ ನೀಡಲಾಗುವುದು.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಆಂತರಿಕ ಅಭ್ಯರ್ಥಿಗಳನ್ನು ಹೊರತುಪಡಿಸಿ ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1000 ರೂ. ಆನ್ಲೈನ್ ಮೂಲಕ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಆರಂಭ ಹಾಗೂ ಅಂತಿಮ ದಿನಾಂಕವನ್ನು http://www.meconlimited.co.in/ ವೆಬ್ಸೈಟ್ನಲ್ಲಿ ಸೂಚಿಸಲಾಗುವುದು.
ಅರ್ಜಿ ಸಲ್ಲಿಕೆ ವಿಳಾಸ: Manager (HR), Recruitment Section, HR Department, MECON Limited, Doranda, Ranchi, Jharkhand - 834002
ಅಧಿಸೂಚನೆಗೆ:https://bit.ly/33XfMDi
ಮಾಹಿತಿಗೆ: http://www.meconlimited.co.in/
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/