ಗ್ರಾಮ್​ ಸ್ವರಾಜ್​ ಅಭಿಯಾನ: ಕನ್ಸಲ್ಟಂಟ್​, ಟ್ರಾನ್ಸ್‌ಲೇಟರ್‌ ಹುದ್ದೆಗಳು- 90 ಸಾವಿರ ರೂವರೆಗೆ ಸಂಬಳ

udyoga -grama
Published on

ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಹೈದರಾಬಾದ್​ನ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್‌​ ರೂರಲ್​ ಡೆವಲಪ್​ಮೆಂಟ್​ ಆಫ್‌ಯಂಡ್​ ಪಂಚಾಯತ್​ ರಾಜ್​ನ ನ್ಯಾಷನಲ್​ ಪ್ರಾಜೆಕ್ಟ್​ ಮ್ಯಾನೇಜ್​ಮೆಂಟ್​ ಯುನಿಟ್​ (ಎನ್​ಪಿಎಂಯು) ಅಧೀನದಲ್ಲಿ ರಾಷ್ಟ್ರೀಯ ಗ್ರಾಮ್​ ಸ್ವರಾಜ್​ ಅಭಿಯಾನ್​ (ಆರ್​ಜಿಎಸ್​ಎ) ಅಧೀನದಲ್ಲಿ ವಿವಿಧ ವಿಭಾಗಗಳಲ್ಲಿ ಕನ್ಸಲ್ಟಂಟ್​ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಹುದ್ದೆಗೆ ಸಂಬಂಧಿಸಿದಂತೆ ಪ್ರಯಾಣ ಮಾಡಲು ಸಿದ್ಧರಿರುವ ಆಸಕ್ತ ಅಭ್ಯಥಿರ್ಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳಿಗೆ ಸಂದರ್ಶನ ನಡೆಸುವ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ತಿಳಿಸಲಾಗುವುದು. ವಯೋಮಿತಿ, ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವಕ್ಕೆ ಸಂಬಂಧಿಸಿದಂತೆ ಸಡಿಲಿಕೆ ನೀಡುವ ಸಂಪೂರ್ಣ ಅಧಿಕಾರವನ್ನು ಎಂಒಪಿಆರ್​ ಹೊಂದಿದೆ.
ಒಟ್ಟು ಹುದ್ದೆಗಳು: 11

ಹುದ್ದೆ ವಿವರ
* ಕನ್ಸಲ್ಟಂಟ್​ - 9
* ಹಿಂದಿ ಟ್ರಾನ್ಸ್​ಲೇಟರ್​ - 2

ವಿದ್ಯಾರ್ಹತೆ: ಸೋಷಿಯಲ್​ ವರ್ಕ್​, ವುಮೆನ್ಸ್​ ಸ್ಟಡಿ, ಗ್ರಾಮೀಣ ಅಭಿವೃದ್ಧಿ, ಡೆವಲಪ್​ಮೆಂಟ್​ ಸ್ಟಡಿಸ್​, ಸೋಷಿಯಲ್​ ಪಾಲಿಸಿ ಸ್ಟಡಿಸ್​, ಹ್ಯೂಮನ್​ ರೈಟ್ಸ್​ ಸ್ಟಡಿಸ್​, ಅಗ್ರಿಕಲ್ಚರ್​ ಸೈನ್ಸ್​, ಆಗ್ರೋನಮಿ, ಪ್ಲಾಂಟ್​ ಬ್ರಿಡಿಂಗ್​ ಆಫ್‌ಯಂಡ್​ ಜೆನೆಟಿಕ್ಸ್​, ಪ್ಲಾಂಟ್​ ಪ್ಯಾಥೋಲಜಿ, ಹಾಟಿರ್ಕಲ್ಚರ್​, ಅನಿಮಲ್​ ಸೈನ್ಸ್​, ಎನ್ವಿರಾನ್​ಮೆಂಟ್​ ಸೈನ್ಸ್​, ಸಿವಿಲ್​ ಇಂಜಿನಿಯರಿಂಗ್​, ಇನ್​ಮೇರ್ಷನ್​ ಸಿಸ್ಟಂ, ಕಂಪ್ಯೂಟರ್​ ಸೈನ್ಸ್​, ಪಬ್ಲಿಕ್​ ೈನಾನ್ಸ್​ ಮ್ಯಾನೇಜ್​ಮೆಂಟ್​, ಫಿಸ್ಕಲ್​ ಮ್ಯಾನೇಜ್​ಮೆಂಟ್​ ಅಥವಾ ತತ್ಸಮಾನ ಶಿಕ್ಷಣ, ಹಿಂದಿ/ ಇಂಗ್ಲಿಷ್​ ಐಚ್ಛಿಕ ವಿಷಯವಾಗಿ ಸ್ನಾತಕೋತ್ತರ ಪದವಿ ಮಾಡಿರಬೇಕು.

ವಯೋಮಿತಿ: ಗರಿಷ್ಠ 30 ರಿಂದ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ: ಕನ್ಸಲ್ಟಂಟ್​ ಹುದ್ದೆಗೆ ಮಾಸಿಕ 90,000 ರೂ. ಹಾಗೂ ಟ್ರಾನ್ಸ್​ಲೇಟರ್​ ಹುದ್ದೆಗೆ ಮಾಸಿಕ 40,000 ವೇತನ ನಿಗದಿಪಡಿಸಲಾಗಿದೆ.

ಯಾವೆಲ್ಲ ವಿಭಾಗ/ ಇಲಾಖೆಗಳಲ್ಲಿ ನೇಮಕ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರ, ಶಿಕ್ಷಣ, ಲೈವ್ಲೀಹುಡ್​, ಪಾವಟಿರ್ ಅಲಿವೇಷನ್​ ಆಫ್‌ಯಂಡ್​ ಇನ್​ಕಮ್​ ಜನರೇಷನ್​, ಡಬ್ಲುಎಎಸ್​ಎಚ್​ ಸೆಕ್ಟರ್​ ಆಫ್‌ಯಂಡ್​ ಹೆಲ್ತ್​, ಮ್ಯಾನೇಜ್​ಮೆಂಟ್​ ಇನ್​ಮೇರ್ಷನ್​ ಸಿಸ್ಟಮ್​-ಎಂಐಎಸ್​, ೈನಾನ್ಸ್​ ಮ್ಯಾನೇಜ್​ಮೆಂಟ್​, ಫಿಸ್ಕಲ್​ ಪಾಲಿಸಿ ಅಡ್ವೋಕೆಸಿ, ಸಸ್ಟೆ$ನಬಲ್​ ಡೆವಲಪ್​ಮೆಂಟ್​ ಗೋಲ್ಸ್​ ವಿಭಾಗಗಳಲ್ಲಿ ತಲಾ ಒಂದೊಂದು ಸ್ಥಾನಕ್ಕೆ ಕನ್ಸಲ್ಟಂಟ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 30.5.2021
ಅಧಿಸೂಚನೆಗೆ: https://bit.ly/346iAhD
ಮಾಹಿತಿಗೆ: http://career.nirdpr.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net