

ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನಿರ್ದೇಶನಾಲಯದಲ್ಲಿ ತಜ್ಞ ವೈದ್ಯ ಹಾಗೂ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಆರಂಭದಲ್ಲಿ 3 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ನಂತರ 2 ವರ್ಷ ಅವಧಿ ವಿಸ್ತರಿಸಲಾಗುವುದು. 5 ವರ್ಷಕ್ಕಿಂತ ಹೆಚ್ಚು ಅವಧಿ ವಿಸ್ತರಿಸುವುದಿಲ್ಲ.
ಹುದ್ದೆ ವಿವರ
* ಸ್ಪೆಷಲಿಸ್ಟ್ ಡಾಕ್ಟರ್ (ಸಜಿರ್ಕಲ್, ಸ್ತ್ರೀರೋಗ ತಜ್ಞತೆ, ರೋಗಶಾಸ್ತ್ರಜ್ಞ, ವಿಕಿರಣಶಾಸ್ತ್ರಜ್ಞ, ಮನೋವೈದ್ಯ, ಮೆಡಿಸಿನ್, ಅರವಳಿಕೆ ತಜ್ಞ)
* ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ಸ್
ಎಲ್ಲೆಲ್ಲಿ ನೇಮಕಾತಿ: ಡಾಜಿರ್ಲಿಂಗ್, ಶ್ರೀನಗರ, ಪಂಜಾಬ್, ರಾಜಸ್ಥಾನ್, ಕೋಲ್ಕತ್ತಾ, ಅಸ್ಸಾಂ, ಮಿಜೋರಾಂ, ಗುಜರಾತ್, ಗುವಾಹಟಿ, ತ್ರಿಪುರ, ಶಿಲ್ಲಾಂಗ್, ಟೇಕನ್ಪಪುರ್ ಹಅಗಗೂ ಐಜ್ವಾಲ್ನ ಬಿಎಸ್‌ಎಫ್ ಕಚೇರಿಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ಶೈಕ್ಷಣಿಕ ಅರ್ಹತೆ: ವೈದ್ಯಕಿಯ ಪದವಿ/ ಸ್ನಾತಕೋತ್ತರ ಪದವಿ/ ಡಿಪ್ಲೊಮಾ ಮಾಡಿರಬೇಕು.
ವಯೋಮಿತಿ: ಗರಿಷ್ಠ 67 ವರ್ಷ.
ವೇತನ: ಸ್ಪೆಷಲಿಸ್ಟ್ ವೈದ್ಯರಿಗೆ ಮಾಸಿಕ 85,000 ರೂ., ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ಸ್ಗೆ ಮಾಸಿಕ 75,000 ರೂ. ವೇತನ ನಿಗದಿಯಾಗಿದೆ.
ಸೂಚನೆ: ಅಭ್ಯರ್ಥಿಗಳು ತಮ್ಮ ಆಯ್ಕೆಯ ಸ್ಥಳದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವೈದ್ಯಕಿಯ ಪರೀೆಗೆ ಒಳಪಡಿಸಲಾಗುವುದು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಮೂಲ ದಾಖಲೆ ಹಾಗೂ ಭಾವಚಿತ್ರಗಳನ್ನು ತರಬೇಕು ಎಂದು ಸೂಚಿಸಲಾಗಿದೆ. ಸಂದರ್ಶನದಲ್ಲಿ ತಮ್ಮ ಆಯ್ಕೆಯ ನೇಮಕಾತಿ ಸ್ಥಳವನ್ನು ಸೂಚಿಸಬಹುದು. ಒಂದೇ ಪ್ರದೇಶಕ್ಕೆ ಹೆಚ್ಚಿನ ಅಭ್ಯರ್ಥಿಗಳು ಬೇಡಿಕೆ ಇಟ್ಟಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಸಂದರ್ಶನ ನಡೆಯುವ ದಿನಾಂಕ: 21.6.2021 ರಿಂದ 30.6.2021ರ ವರೆಗೆ
ಸಂದರ್ಶನ ನಡೆಯುವ ಸ್ಥಳ: ಆಯಾ ರಾಜ್ಯಗಳ ಬಿಎಸ್‌ಎಫ್ ಆಸ್ಪತ್ರೆಗಳಲ್ಲಿ ನಡೆಸಲಾಗುವುದು.
ಅಧಿಸೂಚನೆಗೆ:https://bit.ly/33Pjij0
ಮಾಹಿತಿಗೆ: https://whatsnew.bsf.gov.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/