

ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಅಧೀನದಲ್ಲಿ ಕಾರ್ಯನಿರ್ವಹಿಸುವ ಕೋಲ್ಕತಾದ ಸೆಂಟ್ರಲ್ ಗ್ಲಾಸ್ ಆ್ಯಂಡ್ ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 16
ಸಿಜಿಸಿಐಆರ್ನಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ತಮ್ಮ ವಿವರಗಳನ್ನು ಟೈಪ್ ಮಾಡಿ ಕಳುಹಿಸಬೇಕು. ಕೈಬರಹದ ಸ್ವವಿವರಗಳಿಗೆ ಮಾನ್ಯತೆ ಇಲ್ಲ. ಅಭ್ಯರ್ಥಿಗಳು ಮೇಲ್ ಐಡಿ project.staff@cgcri.res.in ಗೆ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಈ ಹುದ್ದೆಗಳು ಪ್ರಾಜೆಕ್ಟ್ ಆಧಾರಿತವಾಗಿದ್ದು, ಯೋಜನೆಗಳು ಮುಗಿಯುವವರೆಗೆ ನಿಯೋಜನೆ ಮಾಡಿಕೊಳ್ಳಲಾಗುವುದು. ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಅರ್ಹತೆಗಳನ್ನು ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾಗುವ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಗೆ ಆಹ್ವಾನಿಸಲಾಗುವುದು.
ಹುದ್ದೆ ವಿವರ
* ಪ್ರಾಜೆಕ್ಟ್ ಅಸೋಸಿಯೇಟ್ -ಐ - 7
* ಪ್ರಾಜೆಕ್ಟ್ ಅಸೋಸಿಯೇಟ್-ಐಐ - 2
* ಪ್ರಾಜೆಕ್ಟ್ ಅಸಿಸ್ಟೆಂಟ್ - 3
* ಪ್ರಾಜೆಕ್ಟ್ ಸೈಂಟಿಸ್ಟ್-ಐ - 1
* ರಿಸರ್ಚ್ ಅಸೋಸಿಯೇಟ್-ಐಐಐ - 1
* ಜೂನಿಯರ್ ರಿಸರ್ಚ್ ಫೆಲೋ - 2
ವಿದ್ಯಾರ್ಹತೆ: ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಸ್ಟ್ರುಮೆಂಟೇಷನ್, ಸೆರಾಮಿಕ್ ಇಂಜಿನಿಯರಿಂಗ್ನಲ್ಲಿ 3 ವರ್ಷದ ಡಿಪ್ಲೊಮಾ, ಸೆರಾಮಿಕ್ ಟೆಕ್ನಾಲಜಿ, ಫೋಟೋನಿಕ್ಸ್/ ಆಪ್ಟಿಕ್ಸ್ ಆ್ಯಡ್ ಆಪ್ಟೋ-ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಕೆಮಿಕಲ್ ಇಂಜಿನಿಯರಿಂಗ್/ ಕೆಮಿಕಲ್ ಟೆಕ್ನಾಲಜಿ, ಮೆಟಿರಿಯಲ್ ಸೈನ್ಸ್ನಲ್ಲಿ ಬಿಇ/ಬಿ.ಟೆಕ್, ಎಂಎ, ಎಂಟೆಕ್, ಕೆಮಿಸ್ಟ್ರಿ/ ಫಿಜಿಕ್ಸ್/ ೋಟೋನಿಕ್ಸ್, ಇನ್ಆರ್ಗ್ಯಾನಿಕ್/ ಅನಾಲಿಟಿಕಲ್,, ಮೈಕ್ರೋಬಯಾಲಜಿಯಲ್ಲಿ ಬಿಎಸ್ಸಿ, ಎಂಎಸ್ಸಿ ಮಾಡಿರಬೇಕು.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 28, 35, 50ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 20,000ರೂ. ದಿಂದ 56,000 ರೂ, ವೇತನ ನಿಗದಿಯಾಗಿದೆ. ವೇತನ ಜತೆ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇದಿನ: 2.6.2021 ರಿಂದ 3.6.2021ರ ವರೆಗೆ.
ಅಧಿಸೂಚನೆಗೆ: https://bit.ly/3bwX9Kv
ಮಾಹಿತಿಗೆ: https://www.cgcri.res.in