ವಿವಿಧ ಪದವೀಧರರಿಗೆ ಏರ್​ ಇಂಡಿಯಾ ಅಂಗ ಸಂಸ್ಥೆ ಏರ್​ಟ್ರಾನ್ಸ್​ಪೋರ್ಟ್​ನಲ್ಲಿ ಉದ್ಯೋಗಾವಕಾಶ

udyoga- air india
Published on

ಏರ್​ ಇಂಡಿಯಾ ಏರ್​ ಟ್ರಾನ್ಸ್​ಪೋರ್ಟ್​ ಸರ್ವೀಸಸ್​ ಲಿಮಿಟೆಡ್​ ಎಂದೇ ಹೆಸರಾಗಿರುವ ಎಐ ಏರ್​ಪೋರ್ಟ್​ ಸರ್ವೀಸಸ್​ ಲಿಮಿಟೆಡ್​ನಿಂದ ವಿವಿಧ ಹುದ್ದೆಗಳಿಗೆ ಮಹಿಳಾ ಹಾಗೂ ಪುರುಷ ಅಭ್ರರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 16

ಹುದ್ದೆ ವಿವರ
* ಮ್ಯಾನೇಜರ್​ ಫೈನಾನ್ಸ್​ (ಡಿಇಎಲ್​- 2, ಸಿಸಿಯು- 1, ಎಂಎಎ- 1) -4
ಚಾರ್ರ್ಟಡ್​ ಅಕೌಂಟ್ಸ್​ ಆಫ್ ಇಂಡಿಯಾ ಸಂಸ್ಥೆಯಿಂದ ಸಿಎ ಪದವಿ / ಕಾಸ್ಟ್​ ಅಕೌಂಟ್ಸ್​ ಆಫ್‌​ ಇಂಡಿಯಾದಲ್ಲಿ ಕಾಸ್ಟ್​ ಅಕೌಂಟ್ಸ್​ ಅಧ್ಯಯನ ಮಾಡಿದ್ದು, ಗರಿಷ್ಠ 28 ವರ್ಷ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳ ವಯೋ ಸಡಿಲಿಕೆ ಇದೆ. ಮಾಸಿಕ 50 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ.

* ಆಫೀಸರ್​ ಅಕೌಂಟೆಂಟ್ಸ್​ (ಡಿಇಎಲ್- 2, ಸಿಸಿಯು- 2, ಎಂಎಎ- 2, ಬಿಒಎಂ- 1) -8
ಇಂಟರ್​ ಚಾರ್ಟರ್​ ಅಕೌಂಟೆಂಟ್​/ ಇಂಟರ್​ ಕಾಸ್ಟ್​ ಆ್ಯಂಡ್​ ಮ್ಯಾನೇಜ್​ಮೆಂಟ್​ ಅಕೌಂಟನ್ಸಿ/ ಫಫೈನಾನ್ಸ್​ನಲ್ಲಿ ಎಂಬಿಎ ಮಾಡಿದ್ದು, ಎಂಎಸ್​ ಆಫೀಸ್​ ಆಪರೇಷನ್​ ಜ್ಞಾನ ಅವಶ್ಯ. ಸಾಮಾನ್ಯವರ್ಗದ ಅಭ್ರರ್ಥಿಗಳಿಗೆ ಗರಿಷ್ಠ 30 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ, ಎಸ್​ಸಿ/ ಎಸ್​ಟಿ ಅಭ್ರರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಾಸಿಕ 32,200 ರೂ. ವೇತನ ಇದೆ.

* ಅಸಿಸ್ಟೆಂಟ್​-ಅಕೌಂಟ್ಸ್​ (ಬಿಒಎಂ&2, ಡಿಇಎಲ್​&2) -4
ಯಾವುದೇ ಪದವಿ ಜತೆ ಫೈನಾನ್ಸ್​ ಫಂಕ್ಷನ್​, ಅಕೌಂಟ್ಸ್​ನಲ್ಲಿ 1 ವರ್ಷದ ವೃತ್ತಿ ಅನುಭವ ಇರುವವರಿಗೆ ಆದ್ಯತೆ. ಸಾಮಾನ್ಯವರ್ಗದ ಅಭ್ಯರ್ಥಿಗೆ ಗರಿಷ್ಠ 28 ವರ್ಷ, ಒಬಿಸಿಗೆ ಗರಿಷ್ಠ 31 ವರ್ಷ, ಎಸ್ಸಿ, ಎಸ್ಟಿಗೆ ಗರಿಷ್ಠ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಾಸಿಕ 21,300 ರೂ. ವೇತನ ನಿಗದಿಪಡಿಸಲಾಗಿದೆ.

ಎಲ್ಲೆಲ್ಲಿ ನೇಮಕಾತಿ: ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೆ$ನ ಟಕಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ರರ್ಥಿಗಳನ್ನು ಸ್ಕ್ರೀನಿಂಗ್​/ ವಫೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದಭೋರ್ಚಿತವಾಗಿ ಗುಂಪು ಚರ್ಚೆಯನ್ನು ನಡೆಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 1.6.2021
ಅಧಿಸೂಚನೆಗೆ: https://bit.ly/2SeJhOs

ಮಾಹಿತಿಗೆ: http://www.airindia.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net