

ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲಪ್ಮೆಂಟ್ (ನಬಾರ್ಡ್) ಕನ್ಸಲ್ಟನ್ಸಿ ಸವಿರ್ಸಸ್ (ಎನ್ಎಬಿಸಿಒಎನ್ಎಸ್) ಮುಖ್ಯ ಕಚೇರಿ ಮುಂಬೈ ಸೇರಿ 18 ಇತರ ನಗರಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಒಟ್ಟು ಹುದ್ದೆಗಳು: 22
ನಬಾರ್ಡ್ನ ಆಫ್ ಫಾರ್ ಡೆವಲಪ್ಮೆಂಟ್ (ಒಎ್ಡಿಫ್ಡಿ) ಯೋಜನೆಗೆ ಸೀನಿಯರ್ ಹಾಗೂ ಜೂನಿಯರ್ ಕನ್ಸಲ್ಟಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ಹುದ್ದೆಗಳು 1 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಯೋಜನೆಯ ಅವಶ್ಯಕತೆಗೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು.
ಹುದ್ದೆ ವಿವರ
* ಸೀನಿಯರ್ ಕನ್ಸಲ್ಟಂಟ್ -2
* ಜೂನಿಯರ್ ಕನ್ಸಲ್ಟಂಟ್ -20
ಎಲ್ಲೆಲ್ಲಿ ನೇಮಕ?: ಬೆಂಗಳೂರು ಸೇರಿ ಮುಂಬೈ ಕೇಂದ್ರ ಕಚೇರಿ, ಹೈದರಾಬಾದ್, ಗುವಾಹಟಿ, ಪಟ್ನಾ, ರಾಯ್ಪುರ್, ಅಹಮದಾಬಾದ್, ಚಂಡೀಗಢ್, ರಾಂಚಿ, ತಿರುವನಂತಪುರ, ಭೋಪಾಲ್, ಪುಣೆ, ಭುವನೇಶ್ವರ್, ಜೈಪುರ, ಚೆನ್ನೆ$, ಹೈದರಾಬಾದ್, ಲಖನೌ, ಕೋಲ್ಕತ್ತಾಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ವಿದ್ಯಾರ್ಹತೆ: ಸೀನಿಯರ್ ಕನ್ಸಲ್ಟಂಟ್ ಹುದ್ದೆಗೆ ರೂರಲ್ ಡೆವಲಪ್ಮೆಂಟ್, ರೂರಲ್ ಮ್ಯಾನೇಜ್ಮೆಂಟ್, ಅಗ್ರಿ ಬಿಜಿನೆಸ್, ಎಂಟರ್ಪ್ರಿನ್ಯೂರ್ಷಿಪ್ನಲ್ಲಿ ಎಂಬಿಎ/ಸ್ನಾತಕೋತ್ತರ ಪದವಿ ಮಾಡಿದ್ದು, ಕನಿಷ್ಠ ಶೇ. 60 ಅಂಕ ಪಡೆದಿರಬೇಕು. ಜೂನಿಯರ್ ಕನ್ಸಲ್ಟಂಟ್ಗೆ ಐಟಿ/ ಕಂಪ್ಯೂಟರ್ನಲ್ಲಿ ಎಂಬಿಎ/ ಪದವಿ ಮಾಡಿದ್ದು, ಶೇ.60 ಅಂಕ ಪಡೆದಿರಬೇಕು. ಎರಡೂ ಹುದ್ದೆಗೂ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ: ಸೀನಿಯರ್ ಕನ್ಸಲ್ಟಂಟ್ಗೆ ಕನಿಷ್ಠ 40 ವರ್ಷ, ಗರಿಷ್ಠ 50 ವರ್ಷ, ಜೂನಿಯರ್ ಕನ್ಸಲ್ಟಂಟ್ಗೆ ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: ಸೀ.ಕನ್ಸಲ್ಟಂಟ್ಗೆ ಮಾಸಿಕ 1,50,000 ರೂ. ಹಾಗೂ ಜೂ. ಕನ್ಸಲ್ಟಂಟ್ಗೆ ಮಾಸಿಕ 40,000 ರೂ. ವೇತನ ಇದೆ. ವೇತನ ಹೊರತಾಗಿ ಟಿಎ/ ಪ್ರಯಾಣಭತ್ಯೆ/ ಎಚ್ಎ/ ಹೋಟೆಲ್ ಭತ್ಯೆ ನೀಡಲಾಗುವುದು.
ಅರ್ಜಿ ಸಲ್ಲಿಕೆ ವಿಧಾನ: ಸೀನಿಯರ್ ಕನ್ಸಲ್ಟಂಟ್ ಹುದ್ದೆಗೆ https://forms.gle/2ptVi7CVJB9BhEns9 ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು. ಜೂ. ಕನ್ಸಲ್ಟಂಟ್ ಹುದ್ದೆಗೆ https://forms.gle/MpkLkCuDghKh45st6 ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 29.5.2021
ಅಧಿಸೂಚನೆಗೆ: https://bit.ly/3u55Lyj
ಮಾಹಿತಿಗೆ: http://nabcons.com