More

    ವಿವಿಧ ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿದೆ 25 ಹುದ್ದೆಗಳು- 45 ವರ್ಷಗಳವರೆಗೂ ಇದೆ ಅವಕಾಶ

    ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸೆಂಟ್ರಲ್ ಪವರ್ ರಿಸರ್ಚ್ ಇನ್‍ಸ್ಟಿಟ್ಯೂಟ್ (ಸಿಪಿಆರ್‍ಐ) ಬೆಂಗಳೂರು ಸೇರಿ ಇತರ 7 ರಾಜ್ಯಗಳಲ್ಲಿ ಪ್ರಧಾನ ಕಚೇರಿ ಹೊಂದಿದೆ. ಪ್ರಸ್ತುತ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಅರ್ಜಿ ಸಲ್ಲಿಸಬಹುದು.

    ಒಟ್ಟು ಹುದ್ದೆಗಳು: 25

    ಸಿಪಿಆರ್‍ಐನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಗಳ ಕಾರ್ಯಕ್ಷಮತೆ, ಸಂಸ್ಥೆಯ ಅವಶ್ಯಕತೆಗೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಯಾವ ನಗರಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ.

    ಹುದ್ದೆ ವಿವರ
    * ಇಂಜಿನಿಯರಿಂಗ್ ಅಸಿಸ್ಟೆಂಟ್ (ಎಲೆಕ್ಟ್ರಿಕಲ್-5, ಸಿವಿಲ್-1) – 6
    * ಟೆಕ್ನಿಷಿಯನ್ ಗ್ರೇಡ್ 2 – 7
    * ಅಸಿಸ್ಟೆಂಟ್ ಗ್ರೇಡ್ 2 – 5
    * ಸ್ಟೆನೋಗ್ರಾಫರ್ ಗ್ರೇಡ್ 3 – 3
    * ಎಂಟಿಎಸ್ ಗ್ರೇಡ್ 1 (ವಾಚ್‍ಮನ್) – 4

    ಮೀಸಲಾತಿ: ಸಿಪಿಆರ್‍ಐನಲ್ಲಿರುವ 25 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 17 ಸ್ಥಾನ, ಎಸ್ಸಿಗೆ 1, ಎಸ್ಟಿಗೆ 1, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 4, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 2 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ವಾಚ್‍ಮನ್ ಹುದ್ದೆಗಳನ್ನು ಮಾಜಿ ಸೈನಿಕರಿಗೆ ಮೀಸಲಿರಿಸಲಾಗಿದೆ. ಅಲ್ಲದೇ ಅಂಗವಿಕಲ ಅಭ್ಯರ್ಥಿಗಳಿಗೂ ಮೀಸಲಾತಿಯಲ್ಲಿ ಸ್ಥಾನ ನೀಡಲಾಗಿದೆ.

    ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ ಉತ್ತೀರ್ಣ, ಎಲೆಕ್ಟ್ರಿಕಲ್/ ಸಿವಿಲ್ ಇಂಜಿನಿಯರಿಂಗ್‍ನಲ್ಲಿ 3 ವರ್ಷದ ಡಿಪ್ಲೋಮಾ, ಎಲೆಕ್ಟ್ರಿಷಿಯನ್ ಟ್ರೇಡ್‍ನಲ್ಲಿ 2 ವರ್ಷದ ಐಟಿಐ, ಕಾಮರ್ಸ್/ ಬಿಜಿನೆಸ್ ಅಡ್ಮಿನಿಸ್ಟ್ರೇಷನ್/ ಬಿಜಿನೆಸ್ ಮ್ಯಾನೇಜ್‍ಮೆಂಟ್‍ನಲ್ಲಿ ಪದವಿ, ಆರ್ಟ್ಸ್​/ ಕಾಮರ್ಸ್/ ಸೈನ್ಸ್ ಪದವಿ,

    ವಯೋಮಿತಿ: 5.4.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30, 35, 45 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

    ವೇತನ: ಇಂಜಿನಿಯರಿಂಗ್ ಅಸಿಸ್ಟೆಂಟ್‍ಗೆ ಮಾಸಿಕ 35,400-1,12,400 ರೂ., ಟೆಕ್ನಿಷಿಯನ್ ಗ್ರೇಡ್ 2ಗೆ ಮಾಸಿಕ 21,700 – 69,100 ರೂ., ಎಂಟಿಎಸ್ ಗ್ರೇಡ್ 1ಗೆ ಮಾಸಿಕ 18,000-56,900 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 25,500-81,100 ರೂ. ವೇತನ ಇದೆ.

    ಆಯ್ಕೆ ಪ್ರಕ್ರಿಯೆ: ಹುದ್ದೆಗಳಿಗೆ ಅನುಗುಣವಾಗಿ ಬಹು ಆಯ್ಕೆ ಮಾದರಿ ಪರೀಕ್ಷೆ, ಕೌಶಲ ಪರೀಕ್ಷೆ, ಸ್ಟೆನೋಗ್ರಾಫರ್ ಪರೀಕ್ಷೆ, ಟ್ರೇಡ್ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 5.4.2021
    ಅಧಿಸೂಚನೆಗೆ: https://bit.ly/3rWtOiE
    ಮಾಹಿತಿಗೆ: http://www.cpri.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಆರೋಗ್ಯ ಕೇಂದ್ರದಲ್ಲಿ ಉದ್ಯೋಗ: ಎಸ್​ಎಸ್​ಎಲ್​ಸಿಯಿಂದ ಎಂಬಿಬಿಎಸ್​ವರೆಗೆ ಅವಕಾಶ, ₹1 ಲಕ್ಷದವರೆಗೂ ಸಂಬಳ

    ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​ ಆಗಿದೆಯೆ? ಮೆಟ್ರೋ ರೈಲ್​ ಕಾರ್ಪೋರೇಷನ್​ನಲ್ಲಿ ಭರಪೂರ ಉದ್ಯೋಗ

    ಕೃಷಿ ಸಂಬಂಧಿತ ಪದವೀಧರರಿಗೆ ಇಲ್ಲಿದೆ ಅವಕಾಶ: ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts