More

    ಆರೋಗ್ಯ ಕೇಂದ್ರದಲ್ಲಿ ಉದ್ಯೋಗ: ಎಸ್​ಎಸ್​ಎಲ್​ಸಿಯಿಂದ ಎಂಬಿಬಿಎಸ್​ವರೆಗೆ ಅವಕಾಶ, ₹1 ಲಕ್ಷದವರೆಗೂ ಸಂಬಳ

    ತುಮಕೂರಿನ ಜಿಲ್ಲಾ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
    ಒಟ್ಟು ಹುದ್ದೆಗಳು: 34

    ರಾಷ್ಟ್ರೀಯ ಆರೋಗ್ಯ ಯೋಜನೆಯಡಿಯಲ್ಲಿ ಅಭ್ಯರ್ಥಿಗಳನ್ನು ತಾಯಿ ಆರೋಗ್ಯ ಕಾರ್ಯಕ್ರಮ, ಲಕ್ಷ್ಯ ಕಾರ್ಯಕ್ರಮ, ಎನ್‍ಪಿಸಿಡಿಸಿಎಸ್, ಎನ್‍ಪಿಪಿಸಿ, ಎನ್‍ಸಿಡಿ, ಮಕ್ಕಳ ಆರೋಗ್ಯ ಕಾರ್ಯಕ್ರಮ, ಎನ್‍ಯುಎಚ್‍ಎಂ ಕಾರ್ಯಕ್ರಮಗಳಡಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳು ತುಮಕೂರಿನ ರಕ್ತ ಶೇಖರಣ ಘಟಕ ಜಿಲ್ಲಾ ಆಸ್ಪತ್ರೆ, ತಿಪಟೂರು, ಕುಣಿಗಲ್, ತುಮಕೂರು ಜಿಲ್ಲಾ ಆಸ್ಪತ್ರೆ, ತಿರುಪಣಿ ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇವೆ.

    ಹುದ್ದೆ ವಿವರ
    * ಅರವಳಿಕೆ ತಜ್ಞ – 3
    * ಮಕ್ಕಳ ತಜ್ಞರು – 2
    * ಪ್ರಸೂತಿ ಮತ್ತು ಸೀರೋಗ ತಜ್ಞರು – 3
    * ಸ್ಪೆಷಲಿಸ್ಟ್ (ಕಾರ್ಡಿಯಾಲಜಿ/ ಜನರಲ್ ಮೆಡಿಸನ್) – 1
    * ಫಿಜಿಷಿಯನ್ – 1
    * ಸಾಮಾನ್ಯ ಕರ್ತವ್ಯ ವೈದ್ಯರು – 9
    * ವೈದ್ಯಾಧಿಕಾರಿಗಳು – 5
    * ವೈದ್ಯಾಧಿಕಾರಿಗಳು (ಎನ್‍ಯುಎಚ್‍ಎಂ ಕಾರ್ಯಕ್ರಮ) – 2
    * ಶುಶ್ರೂಷಕರು – 4
    * ಆಶಾ ಮೇಲ್ವಿಚಾರಕರು – 1
    * ಹಿರಿಯ ಮಹಿಳಾ ಆರೋಗ್ಯ ಸಹಾಯಕರು – 2
    * ತಾಂತ್ರಿಕ ಮೇಲ್ವಿಚಾರಕರು – 1

    ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಎನ್‍ಎಂ/ ಬಿಎಸ್ಸಿ ನರ್ಸಿಂಗ್/ ನರ್ಸಿಂಗ್ ಡಿಪ್ಲೋಮಾ, ಎಂಬಿಬಿಎಸ್, ಎಂಡಿ, ಡಿಜಿಒ, ಡಿಎನ್‍ಬಿ, ಡಿಎ ಅಧ್ಯಯನ ಮಾಡಿದ್ದು, ವೃತ್ತಿ ಅನುಭವ ಅವಶ್ಯ. ಹುದ್ದೆಗಳಿಗೆ ಅನ್ವಯವಾಗುವಂತೆ ಕೆಎಂಸಿ ನೋಂದಣಿ, ಕರ್ನಾಟಕ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಾಯಿತರಾಗಿರಬೇಕು.

    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 70ಕ್ಕಿಂತ ಕಡಿಮೆ ವರ್ಷದವರಾಗಿದ್ದು, ದೈಹಿಕವಾಗಿ ಎಲ್ಲ ಕರ್ತವ್ಯಗಳನ್ನು ಮಾಡಿಕೊಳ್ಳಲು ಅರ್ಹರಾಗಿರಬೇಕು.

    ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 10,000 ರೂ. ನಿಂದ 1,10,000 ರೂ.ವರೆಗೆ ವೇತನ ಇದೆ.

    ಸೂಚನೆ: ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ವಿದ್ಯಾರ್ಹತೆ ಅಂಕ ಪಟ್ಟಿ, ಗ್ರಾಮೀಣ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅಂಗವಿಕಲತೆ ಪ್ರಮಾಣಪತ್ರ, ವಾಸ ಸ್ಥಳ ದೃಢೀಕರಣ ಪ್ರಮಾಣ ಪತ್ರ, ಯೋಜನ ನಿರಾಶ್ರಿತರ ಪ್ರಮಾಣ ಪತ್ರಗಳನ್ನು ತರಬೇಕು.

    ಸಂದರ್ಶನಕ್ಕೆ ಹಾಜರಾಗುವ ದಿನ: 23.3.2021
    ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗಳ ಸಂಕೀರ್ಣ, ಅಮಾನಿಕೆರೆ ಮುಂಭಾಗ, ತುಮಕೂರು.

    ಅಧಿಸೂಚನೆಗೆ: https://bit.ly/3bIetwL
    ಮಾಹಿತಿಗೆ: https://karunadu.karnataka.gov.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​ ಆಗಿದೆಯೆ? ಮೆಟ್ರೋ ರೈಲ್​ ಕಾರ್ಪೋರೇಷನ್​ನಲ್ಲಿ ಭರಪೂರ ಉದ್ಯೋಗ

    ಕೃಷಿ ಸಂಬಂಧಿತ ಪದವೀಧರರಿಗೆ ಇಲ್ಲಿದೆ ಅವಕಾಶ: ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಐಟಿಐ ಪದವೀಧರರಿಗೆ ಬಿಗ್​ ಆಫರ್​- 304 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts