More

    ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​ ಆಗಿದೆಯೆ? ಮೆಟ್ರೋ ರೈಲ್​ ಕಾರ್ಪೋರೇಷನ್​ನಲ್ಲಿ ಭರಪೂರ ಉದ್ಯೋಗ

    ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ಸರ್ಕಾರ ಜಂಟಿಯಾಗಿ ನಡೆಸುತ್ತಿರುವ ಲಖನೌ ಮೆಟ್ರೋ ರೈಲ್ ಕಾರ್ಪೋರೇಷನ್​ ಲಿಮಿಟೆಡ್ (ಎಲ್‍ಎಂಆರ್‍ಸಿ) ಉತ್ತರಪ್ರದೇಶದ ವಿವಿಧ ನಗರಗಳಲ್ಲಿ ಮೆಟ್ರೋ ರೈಲು ಯೋಜನೆಯನ್ನು ನೀಡುತ್ತಿದೆ. ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.

    ಒಟ್ಟು ಹುದ್ದೆಗಳು: 292

    ಹುದ್ದೆ ವಿವರ
    ನಾನ್ ಎಕ್ಸಿಕ್ಯೂಟೀವ್ ಕೆಟಗರಿ
    * ಸ್ಟೇಷನ್ ಕಂಟ್ರೋಲರ್ ಕಂ ಟ್ರೈನ್ ಆಪರೇಟರ್ – 186
    ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್‍ನಲ್ಲಿ 3 ವರ್ಷದ ಡಿಪ್ಲೋಮಾ ಅಥವಾ ತತ್ಸಮಾನ ಪದವಿಗಳಲ್ಲಿ ಕನಿಷ್ಠ ಶೇ.60 ಅಂಕ (ಎಸ್ಸಿ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕ) ಪಡೆದಿರುವ 21 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 33,000-67,300 ರೂ. ವೇತನ ಇದೆ.

    * ಮೈಂಟೇನರ್ (ಎಲೆಕ್ಟ್ರಿಕಲ್ – 52, ಎಸ್ ಆ್ಯಂಡ್ ಟಿ – 24, ಸಿವಿಲ್ – 24) – 100
    ಎಲೆಕ್ಟ್ರಿಷಿಯನ್ ಟ್ರೇಡ್, ಎಲೆಕ್ಟ್ರಾನಿಕ್, ಮೆಕ್ಯಾನಿಕ್ ಟ್ರೇಡ್, ಫಿಟ್ಟರ್ ಟ್ರೇಡ್‍ನಲ್ಲಿ ಐಟಿಐ (ಎನ್‍ಸಿವಿಟಿ/ಎಸ್‍ಸಿವಿಟಿ) ನಲ್ಲಿ ಕನಿಷ್ಠ ಶೇ.60 ಅಂಕ (ಎಸ್ಸಿ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕ) ಪಡೆದಿರುವ 21 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 19,500-39,900 ರೂ. ವೇತನ ನಿಗದಿಯಾಗಿದೆ.

    ಎಕ್ಸಿಕ್ಯೂಟೀವ್ ಹಂತದ ಹುದ್ದೆಗಳು
    * ಅಸಿಸ್ಟೆಂಟ್ ಮ್ಯಾನೇಜರ್/ ಆಪರೇಷನ್ಸ್ – 6
    ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್‍ನಲ್ಲಿ ಬಿಇ/ ಬಿ.ಟೆಕ್ ಅಥವಾ / ತತ್ಸಮಾನ ಪದವಿಗಳಲ್ಲಿ ಕನಿಷ್ಠ ಶೇ.60 ಅಂಕ (ಎಸ್ಸಿ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕ) ಪಡೆದಿರುವ 21 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 50,000-1,60,000 ರೂ. ವೇತನ ಇದೆ.

    ಆಯ್ಕೆ ಪ್ರಕ್ರಿಯೆ: ಸ್ಟೇಷನ್ ಕಂಟ್ರೋಲರ್ ಹುದ್ದೆಗೆ 3 ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಬಹು ಆಯ್ಕೆ ಮಾದರಿಯ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ, ಸೈಕೋ ಆಪ್ಟಿಟ್ಯೂಡ್ ಟೆಸ್ಟ್, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಉಳಿದ ಹುದ್ದೆಗಳಿಗೆ 2 ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು 590 ರೂ. ಪಾವತಿಸಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳು 236 ರೂ. ಪಾವತಿಸತಕ್ಕದ್ದು.

    ಸೇವಾ ಬಾಂಡ್: ಸಂಸ್ಥೆಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸುವುದಾಗಿ ಎಕ್ಸಿಕ್ಯೂಟೀವ್ ಹುದ್ದೆಗೆ 3 ಲಕ್ಷ ರೂ. ಸೇವಾ ಬಾಂಡ್, ಸ್ಟೇಷನ್ ಕಂಟ್ರೋಲರ್ ಹುದ್ದೆಗೆ 1,50,000 ರೂ., ಮೈಂಟೇನರ್ ಹುದ್ದೆಗೆ 75,000 ರೂ. ಸೇವಾ ಬಾಂಡ್ ನೀಡಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 2.4.2021
    ಅದಿಸೂಚನೆಗೆ: https://bit.ly/3rGkgIO
    ಮಾಹಿತಿಗೆ: https://lmrcl.com/

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಕೃಷಿ ಸಂಬಂಧಿತ ಪದವೀಧರರಿಗೆ ಇಲ್ಲಿದೆ ಅವಕಾಶ: ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಐಟಿಐ ಪದವೀಧರರಿಗೆ ಬಿಗ್​ ಆಫರ್​- 304 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಇಂಜಿನಿಯರಿಂಗ್​ ಪದವಿ ಮುಗಿಸಿರುವಿರಾ? ಕೇಂದ್ರ ಸರ್ಕಾರದಲ್ಲಿ ನಿಮಗಾಗಿ ಕಾದಿವೆ 200 ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts