More

    ಕೃಷಿ ಸಂಬಂಧಿತ ಪದವೀಧರರಿಗೆ ಇಲ್ಲಿದೆ ಅವಕಾಶ: ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತದ ಕೇಂದ್ರ ಕಚೇರಿಯಲ್ಲಿ ಖಾಲಿ ಇರುವ ವಿವಿಧ 5 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮುಕ್ತ ವಿಶ್ವವಿದ್ಯಾಲಯದಿಂದ ಪಡೆದ ಪದವಿಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ.

    ಹುದ್ದೆ ವಿವರ
    * ಜನರಲ್ ಮ್ಯಾನೇಜರ್ – 1
    ಕೃಷಿ/ ಕೃಷಿ ಮಾರುಕಟ್ಟೆ/ ಎಣ್ಣೆ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ಕಂಪ್ಯೂಟರ್ ಜ್ಞಾನದ ಜತೆ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಮಾಸಿಕ 1,04,600-1,50,600 ರೂ. ವರೆಗೆ ವೇತನ ಇದ್ದು, 40-50 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    * ಅಸಿಸ್ಟೆಂಟ್ ಮ್ಯಾನೇಜರ್ – 2
    ಸ್ನಾತಕೋತ್ತರ ಕೃಷಿ ಪದವಿ ಪಡೆದಿದ್ದು, ಕಂಪ್ಯೂಟರ್ ಜ್ಞಾನ ಹೊಂದಿರುವ 18 ರಿಂದ 40 ವರ್ಷದೊಳಗಿನ (ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವೃತ್ತಿ ಅನುಭವ ಅವಶ್ಯ. ಮಾಸಿಕ 43,100-83,900 ರೂ. ವೇತನ ಇದೆ.

    * ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ – 1
    ಪದವಿ ಪಡೆದಿದ್ದು, 2 ವರ್ಷ ವೃತ್ತಿ ಅನುಭವ ಹೊಂದಿರುವ ಕನಿಷ್ಠ 18 ರಿಂದ ಗರಿಷ್ಠ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಮಾಸಿಕ 21,400-42,000ರೂ. ವೇತನ ಇದೆ. ಕಂಪ್ಯೂಟರ್ ಜ್ಞಾನ ಅವಶ್ಯ.

    * ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಗುಣಮಟ್ಟ ನಿಯಂತ್ರಣ) – 1
    ಬಿಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ಅಧ್ಯಯನ ಮಾಡಿದ್ದು, ಕನಿಷ್ಠ 2 ವರ್ಷದ ವೃತ್ತಿ ಅನುಭವ ಹೊಂದಿರುವ 18-40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಜ್ಞಾನ ಅವಶ್ಯ. ಮಾಸಿಕ 21,400-42,000ರೂ. ವೇತನ ನಿಗದಿಯಾಗಿದೆ.

    ಆಯ್ಕೆ ವಿಧಾನ: ನಿಗದಿಪಡಿಸಲಾದ ವಿದ್ಯಾರ್ಹತೆ, ವೃತ್ತಿ ಅನುಭವ, ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದ ಅಂಕಗಳನ್ನು ಆಧರಿಸಿ ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 1000 ರೂ., ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಯಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 8.4.2021
    ಅರ್ಜಿ ಸಲ್ಲಿಕೆ ವಿಳಾಸ: ವ್ಯವಸ್ಥಾಪಕ ನಿರ್ದೇಶಕರು, ಕೆಸಿಒಜಿಎಫ್​. ಲಿ, ನಂ.11, 4ನೇ ಮಹಡಿ, ಬ್ಲೂೃ ಕ್ರಾಸ್ ಚೇಂಬರ್ಸ್, ಇನ್ಫೆಂಟ್ರಿ ಅಡ್ಡರಸ್ತೆ, ಬೆಂಗಳೂರು-01

    ಅಧಿಸೂಚನೆಗೆ: https://bit.ly/3laOSQ7
    ಮಾಹಿತಿಗೆ:http://www.kof.co.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಐಟಿಐ ಪದವೀಧರರಿಗೆ ಬಿಗ್​ ಆಫರ್​- 304 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಇಂಜಿನಿಯರಿಂಗ್​ ಪದವಿ ಮುಗಿಸಿರುವಿರಾ? ಕೇಂದ್ರ ಸರ್ಕಾರದಲ್ಲಿ ನಿಮಗಾಗಿ ಕಾದಿವೆ 200 ಹುದ್ದೆಗಳು

    ಕ್ರೀಡಾ ಪ್ರಾಧಿಕಾರದಲ್ಲಿ ಕನ್ಸಲ್ಟಂಟ್ ಹುದ್ದೆ- ₹1 ಲಕ್ಷದವರೆಗೆ ವೇತನ- 55 ವರ್ಷದವರೆಗೂ ಆದ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts