ಕ್ರೀಡಾ ಪ್ರಾಧಿಕಾರದಲ್ಲಿ ಕನ್ಸಲ್ಟಂಟ್ ಹುದ್ದೆ- ₹1 ಲಕ್ಷದವರೆಗೆ ವೇತನ- 55 ವರ್ಷದವರೆಗೂ ಆದ್ಯತೆ

sports authority
Published on

ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಅಧೀನದಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‍ಎಐ) ಜೂನಿಯರ್ ಕನ್ಸಲ್ಟಂಟ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 47

ಎಸ್‍ಎಐನಲ್ಲಿ ಅಭ್ಯರ್ಥಿಗಳನ್ನು ಆರಂಭಿಕವಾಗಿ 2 ವರ್ಷದ ಒಪ್ಪಂದದ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ನಂತರ ಸಂಸ್ಥೆಯ ಅಗತ್ಯತೆ ಹಾಗೂ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಅವಧಿಯನ್ನು 1 ವರ್ಷ ವಿಸ್ತರಿಸಲಾಗುವುದು.

ಹುದ್ದೆ ವಿವರ

* ಜೂನಿಯರ್ ಕನ್ಸಲ್ಟಂಟ್ (ಪಾರ್ಮೆನ್ಸ್ ಮಾನಿಟರಿಂಗ್)- 30

ಎಂಬಿಎ/ ಪಿಜಿಡಿಎಂ ಅಧ್ಯಯನ ಮಾಡಿರುವ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆ ಜವಾಬ್ದಾರಿ: ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದು, ತರಬೇತಿ ವಿಧಾನ, ಮೇಲ್ವಿಚಾರಣೆ ಮತ್ತು ಕಾರ್ಯಕ್ಷಮತೆ ವ್ಯವಸ್ಥೆಯ ನಿರ್ವಹಣೆ, ಕ್ರೀಡಾ ಸೌಲಭ್ಯಗಳ ಅವಶ್ಯಕತೆಗಳು, ಕ್ರೀಡಾ ವಿಜ್ಞಾನ ಬ್ಯಾಕಪ್, ಕ್ರೀಡಾ ಔಷಧಗಳ ನಿರ್ವಹಣೆ, ಕ್ರೀಡಾಪಟು ಮತ್ತು ಅವರ ಸಹಾಯಕ ತಂಡದೊಂದಿಗೆ ಸಂವಹನ ನಡೆಸಿ ಕ್ರೀಡಾಪಟುಗಳಿಗೆ ಸಮಗ್ರ ದತ್ತಾಂಶ ಸಿದ್ಧಪಡಿಸುವುದು, ಕ್ರೀಡಾಪಟುಗಳಿಗೆ ಅವಶ್ಯ ಇರುವ ಸಹಾಯದ ಬಗ್ಗೆ ವಿಶ್ಲೇಷಣೆ ಮಾಡುವುದು, ಪ್ರತಿ ಕ್ರೀಡೆಯ ನಂತರ ಹಿಂದಿನ ಸಾಧನೆ, ಭವಿಷ್ಯದ ಸಾಮಥ್ರ್ಯಗಳ ಕುರಿತು ವಿಶ್ಲೇಷಣೆ ನೀಡುವುದು, ಇತರ ದೇಶದಲ್ಲಿನ ಕ್ರೀಡಾಪಟುಗಳ ಕಾರ್ಯಕ್ಷಮತೆಯೊಂದಿಗೆ ತುಲನಾತ್ಮಕ ಅಧ್ಯಯನ, ವಿಶ್ಲೇಷಣೆ, ಕಾರ್ಯಕ್ಷಮತೆಯ ಪರಿಶೀಲನೆ ನಡೆಸುವಂತಹ ಜವಾಬ್ದಾರಿಗಳು ಇರುತ್ತವೆ.

* ಜೂನಿಯರ್ ಕನ್ಸಲ್ಟಂಟ್ (ಇನ್​ಫ್ರಾಸ್ಟ್ರಕ್ಚರ್) - 17

ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿಇ/ ಬಿಟೆಕ್/ ಎಂಟೆಕ್ ಮಾಡಿರುವ ವೃತ್ತಿ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಯ ಜವಾಬ್ದಾರಿ: ಮೂಲಸೌಕರ್ಯಗಳ ತಯಾರಿಕೆಗೆ ಅಂದಾಜು, ರೇಖಾಚಿತ್ರ ವಿನ್ಯಾಸ ಮಾಡುವುದು, ಸ್ಟ್ರಕ್ಚರಲ್ ಇಂಜಿನಿಯರ್, ಪ್ರಾಜೆಕ್ಟ್ ಆರ್ಕಿಟೆಕ್ಟ್, ಕಾಂಟ್ರಾಕ್ಟ್ ಒಪ್ಪಂದದ ಪ್ರಕಾರ ಸಿದ್ಧಪಡಿಸಲಾದ ವಿನ್ಯಾಸ, ಕೆಲಸದ ವೇಳಾಪಟ್ಟಿಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಇರುತ್ತದೆ.

ವಯೋಮಿತಿ: ಗರಿಷ್ಠ 55 ವರ್ಷ.

ವೇತನ: ಮಾಸಿಕ 75,000 - 1,00,000 ರೂ. ವೇತನ ಇದೆ.

ಆಯ್ಕೆ ಪ್ರಕ್ರಿಯೆ: ಒಂದು ಹುದ್ದೆಗೆ 1:5ರ ಅನುಪಾತದಲ್ಲಿ ಅಭ್ಯರ್ಥಿಗಳ ಶಾರ್ಟ್‍ಲಿಸ್ಟ್ ಮಾಡಲಾಗುವುದು. ಶಾರ್ಟ್‍ಲಿಸ್ಟ್ ಮಾಡುವಾಗ ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಕ್ರೀಡಾ ಕ್ಷೇತ್ರದಲ್ಲಿನ ವೃತ್ತಿ ಅನುಭವ ಆಧರಿಸಲಾಗುವುದು. ಷಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಹೆಸರಲ್ಲಿ ಅಥವಾ ಅನಾಮಧೇಯವಾಗಿ ಅಥವಾ ಬೇರೆಯವರ ಹೆಸರಲ್ಲಿ ಪುಸ್ತಕ ಪ್ರಕಾಶನ, ರೇಡಿಯೋಗಳಲ್ಲಿ ಸಂದರ್ಶನ ನೀಡುವುದು, ಲೇಖನಗಳನ್ನು ಬರೆಯುವಂತಿಲ್ಲ. ಸಂಸ್ಥೆಯ ಗೌಪ್ಯತೆ, ರಹಸ್ಯಗಳನ್ನು ಇತರರಿಗೆ ಬಹಿರಂಗಪಡಿಸುವಂತಿಲ್ಲ, ಸರ್ಕಾರದ ಹಿತಾಸಕ್ತಿಗೆ ಸಂಬಂಧಿಸಿದಂತೆ ಸಿಬ್ಬಂದಿಯು ಯಾವುದೇ ಸಂದರ್ಭದಲ್ಲಿ ಅಭಿಪ್ರಾಯ, ಸಲಹೆ ನೀಡುವಂತಿಲ್ಲ ಹಾಗೂ ಪ್ರತಿನಿಧಿಯಾಗಿ ಭಾಗವಹಿಸುವಂತಿಲ್ಲ.

ಅರ್ಜಿ ಸಲ್ಲಿಸಲು ಕೊನೇ ದಿನ: 18.3.2021

ಅಧಿಸೂಚನೆಗೆ: https://bit.ly/3quwKSi

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net